ನಿಧನರಾದ ಯಕ್ಷಗುರು ಗೋಪಾಲಕೃಷ್ಣ ಮದ್ದಳೆಗಾರ್ ಅಂತಿಮ ಯಾತ್ರೆಗೆ ಚೆಂಡೆ-ಮದ್ದಳೆವಾದನ ಗೌರವ : ಯಕ್ಷಗುರುವಿಗೆ ಶಿಷ್ಯವೃಂದದಿಂದ ವಿಶಿಷ್ಟ ಅಂತಿಮ ನಮನ

ಬೆಳ್ತಂಗಡಿ : ಇತ್ತೀಚಿಗೆ ನಿಧನರಾದ ಯಕ್ಷಗುರು ಗೋಪಾಲಕೃಷ್ಣ ಮದ್ದಳೆಗಾರ್ ಅವರ ಅಂತಿಮಯಾತ್ರೆ ಕೇರಳದ ನೀಲೇಶ್ವರದ ಬಳಿಯಿರುವ ಪಟ್ಟೇನದ ಅವರ ಸ್ವಗೃಹದ ಆವರಣದಲ್ಲಿ ಕುಟುಂಬ ವರ್ಗ ಮತ್ತು ಬಂಧುಗಳ ಸಮ್ಮುಖದಲ್ಲಿ ಯಕ್ಷಗಾನದ ಚೆಂಡೆ ಮದ್ದಳೆವಾದನ, ಭಾಗವತಿಕೆ ಮತ್ತಿತರ ಹಿಮ್ಮೇಳದೊಂದಿಗೆ ಗೌರವಪೂರ್ವಕವಾಗಿ ನಡೆಯಿತು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಮದ್ದಳೆಗಾರ್ಅ ಅವರ ಶಿಷ್ಯರಾದ ಸುಬ್ರಹ್ಮಣ್ಯ ಶಗ್ರಿತ್ತಾಯ ಮತ್ತು ಗುರುಮೂರ್ತಿ ಶಗ್ರಿತ್ತಾಯ ಚೆಂಡೆ ಮದ್ದಳೆವಾದನ ಹಾಗೂ ಗೋಪಾಲಕೃಷ್ಣ ಮದ್ದಳೆಗಾರ್ ಅವರ ಸಹೋದರ ನಿವೃತ್ತ ಶಿಕ್ಷಕ ಶಿವರಾಮ ಶಿಶಿಲ ಅವರ ಭಾಗವತಿಕೆ ಮೂಲಕ ವಿಶಿಷ್ಟ ಸಂಪ್ರದಾಯದೊಂದಿಗೆ ಗುರುನಮನ ಸಲ್ಲಿಸಲಾಯಿತು.
ಅಂತಿಮಯಾತ್ರೆಯಲ್ಲಿ ಸಂಬಂಧಿಕರಾದ ಸಾಹಿತಿ ಡಾ. ಪ್ರಭಾಕರ ಶಿಶಿಲ, ಪ್ರಕಾಶ್ಚಂದ್ರ , ಸಾಹಿತಿ ಜಿತು ನಿಡ್ಲೆ, ವಹಾಗೂ ಕೇರಳದ ಮಾಜಿಶಾಸಕ, ಸತೀಶಚಂದ್ರನ್ -ಸಿಪಿಐಎಂ ಲೋಕಲ್ ಸೆಕ್ರೆಟರಿ ಸುರೇಂದ್ರನ್, ಸಿಪಿಐಮ್ ಬ್ರಾಂಚ್ ಸೆಕ್ರೆಟರಿ ಪ್ರಕಾಶನ್, ಸಿಡಿಪಿಒ ಗೀತಾ, ಸಮಾಜ ಕಲ್ಯಾಣ ಇಲಾಖಾ ನಿರ್ದೇಶಕಿ ಊರ್ಮಿಳಾ ಬಿ., ಪ್ರಕಾಶ್ಚಂದ್ರ ಮೃತರ ಪುತ್ರ ಕೆನಡಾದ ಉದ್ಯೋಗಿ ಸುಬ್ರಹ್ಮಣ್ಯ, ಮತ್ತಿರರು ಭಾಗವಹಿಸಿದ್ದರು.
















Post Comment