ಪದ್ಮುಂಜ ಹೈಸ್ಕೂಲ್ ಗೆ ಶಿಕ್ಷಣಾಧಿಕಾರಿ ಭೇಟಿ ನೊಂದ ಮಕ್ಕಳಿಗೆ ನ್ಯಾಯ ಕೊಡುವುದಕ್ಕೋ..? ಶಿಕ್ಷಕರನ್ನು ರಕ್ಷಿಸುವುದಕ್ಕೋ..!?

ಪದ್ಮುಂಜ ಹೈಸ್ಕೂಲ್ ಗೆ ಶಿಕ್ಷಣಾಧಿಕಾರಿ ಭೇಟಿ ನೊಂದ ಮಕ್ಕಳಿಗೆ ನ್ಯಾಯ ಕೊಡುವುದಕ್ಕೋ..? ಶಿಕ್ಷಕರನ್ನು ರಕ್ಷಿಸುವುದಕ್ಕೋ..!?

Share
IMG-20250327-WA0000-1 ಪದ್ಮುಂಜ ಹೈಸ್ಕೂಲ್ ಗೆ      ಶಿಕ್ಷಣಾಧಿಕಾರಿ ಭೇಟಿ ನೊಂದ ಮಕ್ಕಳಿಗೆ ನ್ಯಾಯ ಕೊಡುವುದಕ್ಕೋ..?     ಶಿಕ್ಷಕರನ್ನು ರಕ್ಷಿಸುವುದಕ್ಕೋ..!?

ಬೆಳ್ತಂಗಡಿ : ಹತ್ತನೇ ತರಗತಿಯ ಇಬ್ಬರು ಬಾಲಕಿಯರಿಗೆ
ವಿನಾ ಕಾರಣ ಹಾಲ್ ಟಿಕೆಟ್ ನೀಡದೆ ಮಾನಸಿಕ ಆಘಾತಕ್ಕೆ ಪ್ರಚೋದನೆ ನೀಡಿ ಪರೀಕ್ಷೆಗೆ ಅವಕಾಶ ನಿರಾಕರಿಸಿ ಅವಮಾನಿಸಿ ವಿವಾದಕ್ಕೆ ಕಾರಣವಾದ ಕಣಿಯೂರು ಪದ್ಮುಂಜ ಸರಕಾರಿ
ಬೆಳ್ತಂಗಡಿ ಶಿಕ್ಷಣಾಧಿಕಾರಿ ತಾರಾಕೇಸರಿ ಭೇಟಿ ನೀಡಿದ್ದು ಇಡೀ ವಿವಾದದ ನೈಜ ಸಂಗತಿಯನ್ನು ಮುಚ್ಚಿಟ್ಟು ಬಡ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಮುಖ್ಯೋಪಾಧ್ಯಾಯಿನಿ ಸಹಿತ ಶಿಕ್ಷಕ ವೃಂದ ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುವಂತೆ ವರ್ತಿಸಿದ್ದು ಪೋಷಕರ ಮುಂದೆ ಎಂದಿನಂತೆ ಅಡ್ಡಗೋಡೆ ಮೇಲೆ ಚಿಮಿಣಿ ಇಟ್ಟು ಹೋಗಿದ್ದಾರೆ ಎಂಬ ಆರೋಪ ಸ್ಥಳೀಯ ವಿದ್ಯಾಭಿಮಾನಿಗಳಿಂದ ಕೇಳಿ ಬಂದಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ 100
ಶೇ ಫಲಿತಾಂಶ ದ ಗುರಿ ಹೊಂದಿರುವ ಪದ್ಮುಂಜ ಪ್ರೌಢಶಾಲಾ ಶಿಕ್ಷಕ ವೃಂದ 100 ಶೇಕಡಾ ಫಲಿತಾಂಶದ ಗೀಳಿನಲ್ಲಿ ಕುಂಟು ನೆಪದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿ ಅವಮಾನಿಸಿ ಶೈಕ್ಷಣಿಕ ಹಕ್ಕಿನ ಮೇಲೆ ಸವಾರಿ ಮಾಡಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ಮುಂದಾಗಿದ್ದರು‌. ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ, ಶಿಕ್ಷಣ ಇಲಾಖಾ ದ.ಕ. ಉಪನಿರ್ದೇಶಕರು, ಬೆಳ್ತಂಗಡಿ ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ ಡಿ ಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಸಂಚಾಲಕರಿಗೆ ಲಿಖಿತ ದೂರು ನೀಡಲಾಗಿದ್ದು ಈ ದೂರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಬೆಳ್ತಂಗಡಿ ಬಿ.ಇ.ಓ ತಾರಾಕೇಸರಿ ಗುರುವಾರ ಶಾಲೆಗೆ ಭೇಟಿ ನೀಡಿದ್ದಾರೆ.
“ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ, ಮುಂದಿನ ಮೂರು ಪರೀಕ್ಷೆಗಳಿಗೆ ಹಾಜರಾಗುವಂತೆ ತಿಳಿ ಹೇಳಿ ಹಾಲ್ ಟಿಕೆಟ್ ಕೊಡಲು ಪ್ರಯತ್ನಿಸಿದರು. ಆದರೆ ಓರ್ವ ವಿದ್ಯಾರ್ಥಿನಿ ಹಾಲ್ ಟಿಕೆಟ್ ಪಡೆದು ಕೊಂಡರು ಬಳಿಕ ಮತ್ತೆ ಹಿಂತಿರುಗಿಸಿದ್ದಾರೆ. ಒಬ್ಬ ಬಾಲಕಿ ಹಾಲ್ ಟಿಕೆಟ್ ಪಡೆಯಲು ಮುಂದೆ ಬಂದಿದ್ದು ಬಳಿಕ ಹಿಂದೆ ಸರಿದಿದ್ದಾರೆ. ಶಾಲೆಗೆ ಸಂಬಂಧಿಸದ ಖಾಸಗಿ ವ್ಯಕ್ತಿಗಳು ಹಾಲ್ ಟಿಕೆಟ್ ಸ್ವೀಕರಿಸದಂತೆ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡುವ ಉದ್ದೇಶವಿತ್ತು ಆದರೆ ಅದನ್ನು ಮಾಡಲು ಬಿಡಲಿಲ್ಲ” ಎಂದು ಊರವರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಆರೋಪಿಸಿ ಶಿಕ್ಷಕ ವೃಂದದ ತಪ್ಪನ್ನು ಮುಚ್ಚಿಡಲೆಂದೇ ಭೇಟಿ ನೀಡಿದ್ದೆಂಬಂತೆ ವರ್ತಿಸಿ ಪೋಷಕರ ವಿದ್ಯಾಭಿಮಾನಿಗಳ ಮಾತಿಗೆ ಬೆಲೆ ನೀಡಿಲ್ಲ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.
ಪರೀಕ್ಷೆವಂಚಿತ ವಿದ್ಯಾರ್ಥಿನಿಯರು ತಮಗಾದ ಅನ್ಯಾಯ, ಅವಮಾನದ ಬಗ್ಗೆ ಲಿಖಿತ ದೂರು ನೀಡಿದ್ದರೂ ಶಿಕ್ಷಣಾಧಿಕಾರಿಗಳು ಶಾಲೆಗೆ ತನಿಖೆ ನೆಪದಲ್ಲಿ ಬೇಟಿ ನೀಡಿ ವಿವಾದವನ್ನು ಸೌಹಾರ್ದಯುತವಾಗಿ ಸುಖಾಂತ್ಯಗೊಳಿಸಲು ಶಾಲೆಗೆ ಭೇಟಿ ನೀಡಿದ
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಹಾಗೂ ಇತರ ಜನಪ್ರತಿನಿಧಿಗಳನ್ನು ಶಾಲೆಯಿಂದ ಹೊರಗಿಟ್ಟು ವಿವಾದಕ್ಕೆ ಕಾರಣವಾದ ಮುಖ್ಯೋಪಾಧ್ಯಾಯಿನಿ ಮತ್ತು ಅದ್ಯಾಪಕರನ್ನು ರಕ್ಷಿಸುವ ಉದ್ದೇಶವಿರುಂತೆ ಮಕ್ಕಳ ಪೋಷಕರನ್ನು ಮಾತ್ರ ಮಾತುಕತೆಗೆ ಶಾಲೆಗೆ ಕರೆಸಿಕೊಂಡಿರುವುದು ಸಂಶಯಕ್ಕೆ ಕಾರಣವಾಗಿದೆ. ಇದುವರೆಗೆ ಮೂರು ಪರೀಕ್ಷೆ ಮುಗಿದಿದ್ದು ಇದೀಗ ಹಾಲ್ ಟಿಕೇಟ್ ಪಡೆದುಕೊಳ್ಳುವಂತೆ ವಿದ್ಯಾರ್ಥಿನಿಯರನ್ನು ಒತ್ತಾಯಿಸಿದ್ದಾರೆ.
“ಮೂರು ಪರೀಕ್ಷೆ ಆದ ನಂತರ ಹಾಲ್ ಟಿಕೆಟ್ ಕೊಟ್ಟರೆ ಏನು ಮಾಡಬೇಕು..” ಎಂದು ಮಕ್ಕಳ ಪೋಷಕರು ಪ್ರಶ್ನಿಸಿದಾಗ “ಮುಂದಿನ ವರ್ಷ ಪರೀಕ್ಷೆ ಬರೆಯಿರಿ ” ಎಂದು ಉಡಾಫೆಯ ಉತ್ತರ ನೀಡಿದರು.
ಶಿಕ್ಷಣಾಧಿಕಾರಿ ” ಕೊಟ್ಟ ಹಾಲ್ ಟಿಕೆಟನ್ನು ಮಕ್ಕಳೇ ವಾಪಾಸ್ಸು ಕೊಟ್ಟಿದ್ದಾರೆ” ಎಂಬ ತಪ್ಪು ವರದಿಯನ್ನು ಮೇಲಾಧಿಕಾರಿಗಳಿಗೆ ಕೊಡಲು ಮತ್ತು ತಪ್ಪಿತಸ್ಥ ಅಧ್ಯಾಪಕರುಗಳನ್ನು ರಕ್ಷಿಸುವ ಉದ್ದೇಶದಿಂದ ಭೇಟಿ ನೀಡಿದ್ದಾರೆ ಎಂದು ಊರವರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೇ ಶಾಲೆಗೆ ಭೇಟಿ ನೀಡಬೇಕು ಎಂದು ಪೋಷಕರು‌ ಒತ್ತಾಯಿಸಿದ್ದಾರೆ.

Previous post

ಪದ್ಮುಂಜ ಹೈಸ್ಕೂಲ್ ಶಿಕ್ಷಕರ 100 % ಫಲಿತಾಂಶದ ವ್ಯಾಮೋಹ: ಇಬ್ಬರು ಹೆಣ್ಣು ಮಕ್ಕಳಿಗೆ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಅವಕಾಶ ನಿರಾಕರಿಸಿ ಅವಮಾನ

Next post

ಪೊಯ್ಯೆಗುಡ್ಡೆ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾಟ್ರಸ್ಟ್ (ರಿ.) ಪೊಯ್ಯೆಗುಡ್ಡೆ- ಪಡಂಗಡಿ

Post Comment

ಟ್ರೆಂಡಿಂಗ್‌

error: Content is protected !!