ಪೊಯ್ಯೆಗುಡ್ಡೆ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾಟ್ರಸ್ಟ್ (ರಿ.) ಪೊಯ್ಯೆಗುಡ್ಡೆ- ಪಡಂಗಡಿ
ಶ್ರೀ ಸತ್ಯಸಾರಮಾನಿ ‘ಕಾನದ ಕಟದ’, ಧರ್ಮದೈವ ಅಲೇರಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಗಳ ಕ್ಷೇತ್ರ ವರ್ಷಾವಧಿ ನೇಮೋತ್ಸವ ಏಪ್ರಿಲ್ 5ಕ್ಕೆ

ಬೆಳ್ತಂಗಡಿ : ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಶ್ರೀ ಸತ್ಯಸಾರಮಾನಿ ಕ್ಷೇತ್ರದ ಶ್ರೀ ಸತ್ಯಸಾರಮಾನಿ ‘ಕಾನದ ಕಟದ’ ಧರ್ಮದೈವ ಅಲೇರಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಗಳ ವರ್ಷಾವಧಿ ನೇಮೋತ್ಸವವು ಏಪ್ರಿಲ್ 5ನೇ ಶನಿವಾರದಂದು ಸಾಂಪ್ರದಾಯಿಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೊಯ್ಯೆಗುಡ್ಡೆ ಸತ್ಯಸಾರಮಾನಿ ದೈವಸ್ಥಾನದಲ್ಲಿ ನೆರವೇರಲಿದೆ.
ಬೆಳಿಗ್ಗೆ ಗಂಟೆ 10.00ರಿಂದ ಸ್ವಸ್ತಿ ಪುಣ್ಯ ವಾಚನ, ಗಣ ಹೋಮ, ದೈವಗಳಿಗೆ ಪಂಚಪರ್ವ ಸೇವೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6.00ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯ, ರಾತ್ರಿ ಗಂಟೆ 8.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 8.30ಕ್ಕೆ ಸತ್ಯಸಾರಮಾನಿ ‘ಕಾನದ ಕಟದ’ ದೈವಗಳ ದರ್ಶನ ಸೇವೆ, ಚಾಮುಂಡಿ ಗುಳಿಗ , ಧರ್ಮದೈವ ಅಲೇರ ಪಂಜುರ್ಲಿ ದೈವಗಳ ನೇಮೋತ್ಸವವು ನಡೆಯಲಿದೆ.
ಕ್ಷೇತ್ರದಲ್ಲಿ ಜರಗಲಿರುವ ದೈವಗಳ ವಾರ್ಷಿಕ ನೇಮೋತ್ಸವ
ಮತ್ತು ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ, ಪರ ಊರ ದೈವ ಭಕ್ತಾದಿಗಳು ಪಾಲ್ಗೊಂಡು ಈ ಪುಣ್ಯ ದೈವ ಕಾರ್ಯಕ್ಕೆ ತನು-ಮನ-ಧನಗಳಿಂದ ಸಹಕರಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರದ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಪೊಯ್ಯೆಗುಡ್ಡೆ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾ ಟ್ರಸ್ಟ್ ಮತ್ತು ಮಹಿಳಾ ಸಮಿತಿ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಿದ್ದಾರೆ.

Post Comment