“ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ”

“ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ”

Share

IMG-20250418-WA0002 "ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ"

ಮಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾಂತರಾಜ್ ಆಯೋಗದ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವ್ಯವಸ್ಥಿತ ಸಂಚು ನಡೆಸಿದೆ.
ಕರ್ನಾಟಕ ರಾಜ್ಯದಲ್ಲಿ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಬುಡಕಟ್ಟುಗಳು ಇವೆ ಎಂಬುದು ಕಾಂತರಾಜ್ ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಪತ್ತೆಯಾಗಿದೆ
ಎಂಬ ಪತ್ರಿಕಾ ವರದಿ (ಪ್ರಜಾವಾಣಿ, ಮಂಗಳೂರು ಏಪ್ರಿಲ್ 15 2025, ಮುಖಪುಟದ ಪ್ರಧಾನ ವರದಿ)
ಈ ಷಡ್ಯಂತ್ರವನ್ನು ಬಯಲುಮಾಡಿದೆ.
ಎಂದು ಪರಿಶಿಷ್ಟರ ಮಹಾ ಒಕ್ಕೂಟ ಎಚ್ಚರಿ
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್. ಕಾಂತರಾಜ್ ಅವರು ಅಧ್ಯಕ್ಷರಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿಯಿದೆ ಮತ್ತು ದತ್ತಾಂಶಗಳ ಅಧ್ಯಯನ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ.
ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಯಾವುದೇ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸ ಬೇಕಾದರೆ, ಭಾರತದ ಸಂವಿಧಾನದ ವಿಧಿ (Article) 341ಮತ್ತು ಅದರ ಅನುಚ್ಚೇಧ (1) ರಡಿಯಲ್ಲಿ ಭಾರತದ ರಾಷ್ಟ್ರಪತಿಗಳು ಭಾರತದ ಗಜೆಟ್ ನಲ್ಲಿ ಅಧಿಸೂಚನೆ ಹೊರಡಿಸಬೇಕು,
ಅಧಿಸೂಚನೆಗೆ ಮುನ್ನ ರಾಷ್ಟ್ರಪತಿಗಳು ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರು ಅಥವಾ ಕೇಂದ್ರಾಡಳಿತ ಪ್ರದೇಶವಾದರೆ, ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಮಾಲೋಚನೆ ನಡೆಸಿ, ಯಾವುದೇ ಜಾತಿ, ಜನಾಂಗಗಳು ಅಥವಾ ಬುಡಕಟ್ಟುಗಳು ಅಥವಾ ಜಾತಿಗಳ ಒಳಗಿನ ಭಾಗ ಅಥವಾ ಗುಂಪುಗಳನ್ನು ಆಯಾ ರಾಜ್ಯಗಳಿಗೆ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತಗೊಳಿಸಿ ಅಧಿಸೂಚನೆ ಹೊರಡಿಸಬೇಕು. ಹೀಗೆ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚನೆಗೊಂಡ ಜಾತಿಗಳನ್ನು ಮಾತ್ರವೇ ಪರಿಶಿಷ್ಟ ಜಾತಿಗಳು ಎಂದು ಪರಿಗಣಿಸಲಾಗುತ್ತದೆ. ಬೇರೆ ಯಾವುದೂ ಪರಿಶಿಷ್ಟ ಜಾತಿಗಳು ಅಲ್ಲ ಎಂದು ಸ್ಪಷ್ಟಪಡಿಸಿದರು.
ಹೀಗೆ ಅಧಿಸೂಚನೆಗೊಂಡ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಯಾವುದೇ ಜಾತಿ ಅಥವಾ ಬುಡಕಟ್ಟು ಅಥವಾ ಯಾವುದೇ ಜಾತಿ, ಬುಡಕಟ್ಟುಗಳ ಭಾಗ ಅಥವಾ ಗುಂಪನ್ನು ಕಾನೂನಿನಂತೆ ಪಟ್ಟಿಯಿಂದ ಕಿತ್ತುಹಾಕುವ ಅಥವಾ ಅದಕ್ಕೆ ಸೇರ್ಪಡೆ ಗೊಳಿಸುವ ಅಧಿಕಾರವನ್ನು‌ ಸಂವಿಧಾನದ ವಿಧಿ 341ರ ಅನುಚ್ಚೇಧ (2) ರಲ್ಲಿ ಸಂಸತ್ತಿಗೆ ಮಾತ್ರವೇ ನೀಡಲಾಗಿದೆ. ಆದರೆ, ವಿಧಿ 341(1) ರಲ್ಲಿ ಹೊರಡಿಸಲಾದ ಅಧಿಸೂಚನೆಯನ್ನು ಸಂಸತ್ ಕೂಡಾ ವಿರೂಪಗೊಳಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದ ಅವರು ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ 101 ಜಾತಿಗಳು ಎಂದು ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿಸಲ್ಪಟ್ಟಿವೆ. ಆದ್ದರಿಂದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ಯಾವುದೇ ಜಾತಿಯೂ ಪರಿಶಿಷ್ಟ ಜಾತಿ ಅಲ್ಲ. ಅದನ್ನು ಪರಿಶಿಷ್ಟ ಜಾತಿ ಎಂದು ಗುರುತಿಸುವುದನ್ನು, ಪರಿಗಣಿಸುವುದನ್ನು ಭಾರತದ ಸುಪ್ರೀಂ ಕೋರ್ಟ್, ಸಂವಿಧಾನದ ಮೇಲೆ ಎಸಗುವ ದಾಳಿ, ಅಸಂವಿಧಾನಿಕ ಎಂದೇ ಪರಿಗಣಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಿಂದುಳಿದ ಅಥವಾ ಅತೀ ಹಿಂದುಳಿದ ಕೆಲವು ಜಾತಿಗಳು ಅಕ್ರಮ ದಾರಿ ಮೂಲಕ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಬುಡಕಟ್ಟುಗಳು ಎಂಬ ಜಾತಿ ಸರ್ಟಿಫಿಕೇಟ್ ಪಡೆಯುವುದು ಸಾಧ್ಯ ಮಾಡುವುದು ಆಯೋಗದ ಸಂವಿಧಾನ ವಿರೋಧಿ, ದಲಿತ ವಿರೋಧಿ ಷಡ್ಯಂತ್ರವಾಗಿದೆ ಎಂಬುದು ಬಯಲಾಗಿದೆ.
ಪರಿಶಿಷ್ಟ ಬುಡಕಟ್ಟುಗಳಿಗೆ ಸಂಬಂಧ ಪಟ್ಟಂತೆ ಸಂವಿಧಾನದ ವಿಧಿ 342(1) ಮತ್ತು 342(2 342(2) ರಲ್ಲಿ ಇದೇ ರೀತಿಯ Shot on Y83 Pro ಉಜ್ಯದಲ್ಲಿ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಯಲ್ಲಿ 49 ಜಾತಿಗಳು/ ಬುಡಕಟ್ಟುಗಳು ಅಧಿಸೂಚಿತಗೊಂಡಿವೆ ಎಂದು ಲೋಲಾಕ್ಷ ಅಭಿಪ್ರಾಯಪಟ್ಟರು.

ಕಾಂತರಾಜ್ ಆಯೋಗವು ರಾಜ್ಯದಲ್ಲಿ 105 ಪರಿಶಿಷ್ಟ ಬುಡಕಟ್ಟುಗಳನ್ನು ಪತ್ತೆ ಮಾಡಿದೆ ಎಂಬುದು ರಾಜ್ಯದ ಪರಿಶಿಷ್ಟ ಬುಡಕಟ್ಟುಗಳ ಮೇಲೆ ದೂರಗಾಮಿ ಪ್ರತಿಕೂಲ ಪರಿಣಾಮ ಬೀರುವ, ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಷಡ್ಯಂತ್ರದ ಮೊದಲ ಹೆಜ್ಜೆಯಾಗಿದೆ.‌ ಇದೊಂದು ಸಂವಿಧಾನ ವಿರೋಧಿ ಕೆಲಸವಾಗಿದೆ, ಅಗತ್ಯ ಬಿದ್ದರೆ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾಂತರಾಜ್ ವರದಿಯನ್ನು ಒಪ್ಪಿದೆ ಎಂದು ಪ್ರಕಟಿಸಿರುವುದರಿಂದ ಸಂವಿಧಾನದ ಮೇಲೆ ಮತ್ತು ಪರಿಶಿಷ್ಟ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಕಾಂಗ್ರೆಸ್ ಸರಕಾರವೇ ನಡೆಸಿದ ನಿರ್ಲಜ್ಜ ದಾಳಿ ಇದು ಎಂದು ಪರಿಗಣಿಸ ಬೇಕಾಗಿದೆ ಎಂದರು.

ಒಳ ಮೀಸಲಾತಿ: ಎ. 20ಕ್ಕೆ ನಗರದಲ್ಲಿ ಸಮಾಲೋಚನಾ ಸಭೆ

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಮತ್ತು ಅದರ ಸಾಧಕ- ಬಾಧಕಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲು ಸಮಾಲೋಚನಾ ಸಭೆಯೊಂದನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎಪ್ರಿಲ್ 2025 ರ ಭಾನುವಾರ ಬೆಳಿಗ್ಗೆ ಮಂಗಳೂರು ನಗರದ ಹೈಸ್ಕೂಲ್ ರಸ್ತೆಯಲ್ಲಿರುವ ಹೊಟೇಲ್ ಶ್ರೀನಿವಾಸ್ ನಲ್ಲಿ
ಸಮಾಲೋಚನಾ ಸಭೆ ನಡೆಯಲಿದೆ.
ವಿವಿಧ ಸಮುದಾಯಗಳ ಮುಖಂಡರುಗಳು, ಸಾಮಾಜಿಕ ಕಾರ್ಯಕರ್ತರು, ಚಿಂತಕರು, ಸಾರ್ವಜನಿಕ ನೀತಿ ನಿರೂಪಕರು ಭಾಗವಹಿಸಲಿರುವ ಈ ಸಮಾಲೋಚನೆಯಲ್ಲಿ ಭಾಗಿಯಾಗಲಿದ್ದು
ಜಾತಿ ಮತ್ತು ಮೀಸಲಾತಿ ನೀತಿ ಬಗ್ಗೆ ಮಹತ್ವಪೂರ್ಣ ರೀತಿಯಲ್ಲಿ ಮಾಹಿತಿ ವಿನಿಮಯವಾಗಲಿದೆ.
ಆಸಕ್ತರು, ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಅವರ ಮೊಬೈಲ್ ನಂಬರ್ 94490 83300ಕ್ಕೆ
ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸ ಬೇಕು ಎಂದು ಕೋರಿದ್ದಾರೆ.‌
————————————————————————–

IMG-20250413-WA0003-5-682x1024 "ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ"
IMG-20250413-WA0002-3-792x1024 "ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ"
IMG-20250413-WA0001-4-792x1024 "ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ: ಸಾಂವಿಧಾನಿಕ ಹಕ್ಕುಗಳಿಗೆ ಕಂಟಕ"

Post Comment

ಟ್ರೆಂಡಿಂಗ್‌