ಮೇ 12ಕ್ಕೆ ದ.ಕ.ಜಿಲ್ಲಾ ಬೌದ್ಧ ಮಹಾಸಭಾದಿಂದ ವೈಶಾಖ ಬುದ್ಧಪೂರ್ಣಿಮೆ ಆಚರಣೆ

ಮಂಗಳೂರು : ದ.ಕ. ಜಿಲ್ಲಾ ಬೌದ್ಧ ಮಹಾಸಭಾ (ರಿ) ಮಂಗಳೂರು ಇದರ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಪ್ರಯುಕ್ತ ಮೇ 12ನೇ ಸೋಮವಾರ 2569ನೇ ಪವಿತ್ರ ಬುದ್ಧ ಜಯಂತಿ ಆಚರಣೆಯು
ಮಂಗಳೂರು ಉರ್ವ ಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ ಎಂದು
ದ.ಕ.ಜಿಲ್ಲಾ ಬೌದ್ಧ ಮಹಾಸಭಾ (ರಿ.) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾರಂಭದಲ್ಲಿ ಬೆಳಿಗ್ಗೆ 10.00ರಿಂದ ಮಹೇಂದ್ರ ಹಿಲ್ಸ್ ಸಿಕಂದರಾಬಾದ್ ನ ಆನಂದ ಬುದ್ಧ ವಿಹಾರದ ಪೂಜ್ಯ ಅಯುಪಾಲ ಭಂತೇಜಿಯವರ ಸಾನಿಧ್ಯದಲ್ಲಿ ಲೋಕಶಾಂತಿಗಾಗಿ ಸೌಹಾರ್ದ ನಡಿಗೆ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 2.00ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವೈಶಾಖ ಹುಣ್ಣಿಮೆ ಪವಿತ್ರ ಬುದ್ಧ ಜಯಂತಿಯ ಪ್ರಯುಕ್ತ ಸಾಮೂಹಿಕ ಬುದ್ಧ ವಂದನೆ, ಸುತ್ತ ಪಠಣ ಹಾಗೂ ಲೋಕ ಶಾಂತಿಗಾಗಿ ಧ್ಯಾನ, ಮೈತ್ರಿ ಧ್ಯಾನ ಮತ್ತು ಧಮ್ಮೋಪದೇಶ ನಡೆಯಲಿದೆ.
ದ.ಕ.ಜಿಲ್ಲಾ ಬೌದ್ಧ ಮಹಾಸಭಾ (ರಿ.) ಇದರ ಅಧ್ಯಕ್ಷ ಎಂ.ವಿ. ಪದ್ಮನಾಭ ಮಂಗಳೂರು ಅಧ್ಯಕ್ಷತೆವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಯ ಆಶ್ರಯ ಅಸೈಗೋಳಿ ಇದರ ಅಧ್ಯಕ್ಷ ಶ್ರೀನಾಥ್ ಹೆಗ್ಡೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಪಿ.ಎಸ್. ವೆಂಕಪ್ಪ ಮುಂತಾದವರು ಭಾಗವಹಿಸಲಿದ್ದಾರೆ ಧಮ್ಮಾಭಿಮಾನಿಗಳು, ಉಪಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದ.ಕ.ಜಿಲ್ಲಾ ಬೌದ್ಧ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಲಕ್ಷ್ಮಣ್ ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Post Comment