ತೆಕ್ಕಾರು ‘ಕಂಟ್ರಿ’ ಹೇಳಿಕೆಯ ಸುತ್ತ, ‘ಕೋಮು’ಖ ಜಂತುಗಳ ಹುತ್ತ…

ತೆಕ್ಕಾರು ‘ಕಂಟ್ರಿ’ ಹೇಳಿಕೆಯ ಸುತ್ತ, ‘ಕೋಮು’ಖ ಜಂತುಗಳ ಹುತ್ತ…

Share
InShot_20250514_181112772-1024x1015 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…
IMG-20250506-WA0001-2-1024x768 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…

ಬೆಳ್ತಂಗಡಿ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ‌ ನಡೆದ ವಿವಾದಾತ್ಮಕ ಹೇಳಿಕೆಯಿಂದ ಉಂಟಾದ ವಿವಾದ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ, ದಿನದಿಂದ ದಿನಕ್ಕೆ ಪ್ರಕರಣ ಕಗ್ಗಂಟಾಗುತ್ತಾ ಹೋಗುತ್ತಿದೆ ಎನ್ನಲಾಗಿದೆ . ಈ ನಡುವೆ ಶಾಸಕರ ಬೆಂಬಲಿಗರಿಂದ ದೇವಸ್ಥಾನದಲ್ಲಿ ಸಭೆ ನಡೆಸಲಾಗಿದೆ ಎನ್ನಲಾಗಿದೆ.ಶ್ರೀ ಗೋಪಾಲಕೃಷ್ಣ ಆಡಳಿತ ಸಮಿತಿ ಅಧ್ಯಕ್ಷ ನಾಗಭೂಷಣ್ ರಾವ್ ರವರು ತೆಕ್ಕಾರು ಮುಸ್ಲಿಂ ಒಕ್ಕೂಟಕ್ಕೆ ವಿಷಾದದ ಪತ್ರ ಬರೆದ ಬೆನ್ನಲ್ಲೇ ಶಾಸಕರ ಬೆಂಬಲಿಗರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಸಭೆ ನಡೆಸಲಾಗಿದೆ.

ಕೆಲ ದಿನಗಳ ಹಿಂದೆ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಹಾಗೂ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರೊಂದಿಗೆ ಸ್ಥಳೀಯ ಪ್ರತಿಷ್ಠಿತ ಮನೆತನದ ಗಣ್ಯರೊಬ್ಬ ರ ಮನೆಯಲ್ಲಿ ತೆಕ್ಕಾರಿನ ಮುಸ್ಲಿಂ ಮುಖಂಡರು ಮಮಹತ್ವದ ನಡೆಸಿದ್ದು ಗ್ರಾಮದಲ್ಲಿ ಹಿಂದಿನಂತೆ ಸೌಹಾರ್ದತೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಭೆಯು ಪ್ರಾಮುಖ್ಯತೆಯನ್ನು ಪಡೆದಿತ್ತು.
ಈ ಸಭೆಯಿಂದ ಕೆಂಡಾಮಂಡಲರಾದ ಕೆಲ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು, ಬಿಜೆಪಿಗರು ದೇವಸ್ಥಾನದಲ್ಲಿ‌ ಸಭೆ ಸೇರಿ ಮಹಾ ‘ಅಸತ್ಯ ಶೋಧನೆ’ಯೊಂದನ್ನು ನಡೆಸಿಯೇ ಬಿಟ್ಟರು. ಆ ‘ಮೊಂಡು ಮೇಜಿನ ಸಭೆ’ ತೀರ್ಮಾನ ಕೈಗೊಂಡಿದ್ದೇನೆಂದರೆ; ದೇವಸ್ಥಾನದ ಆಡಳಿತ ಮಂಡಳಿ ಜೊತೆ ಮುಸ್ಲಿಂ ಒಕ್ಕೂಟದ ಯಾವುದೇ ಸೌಹಾರ್ದತಾ ಸಭೆಯೇ ಆಗಿಲ್ಲ , ಅಂತಹ ಸಭೆ ನಡೆಸುವ ಅಗತ್ಯತೆಯೂ ನಮಗಿಲ್ಲ , ಎಂಬಂತೆ ಬಿಂಬಿಸಿ ವೆಬ್ ಸೈಟ್ ನ್ಯೂಸ್ ನಲ್ಲಿ ಪ್ರಚಾರ ಪಡಿಸಿದ್ದರು. ಹಿಂದೂ ಸಂಘಟನೆಯ ಸಭೆಯ ಒಂದು ವಾರದ ಹಿಂದೆ ದೇವಸ್ಥಾನದ ಅಧ್ಯಕ್ಷರೇ ಮುಸ್ಲಿಂ ಬಾಂಧವರಿಗೆ ಪತ್ರ ಬರೆದಿದ್ದು “ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಡಿರುವ ಕೆಲವು ಮಾತುಗಳು ಗ್ರಾಮಸ್ಥರ ಮನಸ್ಸಿಗೆ ಬೇಸರ ತಂದಿದೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿಯು ವಿಷಾದ ವ್ಯಕ್ತಪಡಿಸುತ್ತದೆ. ಹಾಗೆಯೇ ನಿಮ್ಮ ಸಮುದಾಯದ ಸಹಕಾರವನ್ನು ಆಡಳಿತ ಮಂಡಳಿಯಿಂದ ಸ್ವಾಗತಿಸುತ್ತೇವೆ, ಮುಂದೆಯೂ ಸಹ ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದೊಂದಿಗೆ ಬದುಕಬೇಕೆಂಬುವುದು ನಮ್ಮ ಆಶಯ ” ಎಂಬ ಮಹತ್ವದ ಐಕ್ಯ ಸಂದೇಶವನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ತನ್ನ ಅಧಿಕೃತ ಲೆಟರ್ ಹೆಡ್ ನಲ್ಲಿ ಬರೆದು ಮುಸ್ಲಿಮರಿಗೆ ರವಾನಿಸಿತ್ತು.

IMG-20250511-WA0001-1 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳೇ ಸಭೆ ಸೇರಿ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿಯೇ ಉಂಟಾದ ಪ್ರಮಾದದ ಬಗ್ಗೆ ಮುಸ್ಲಿಂ ಮುಖಂಡರಿಗೆ ವಿಷಾದ ಪತ್ರ ಬರೆದು ತಮ್ಮ ನಿಲುವು ಸ್ಪಷ್ಠಪಡಿಸಿದ್ದರು. ಈ ಬೆಳವಣಿಗೆ ಒಂದು ಗುಂಪಿಗೆ ಇರಿಸು ಮುರಿಸು ತಂದಿತ್ತು. ಇದೀಗ ಇದೇ ಗುಂಪು ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯಾ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಿದ್ದಾರೆ. ಆ ಸಭೆಯಲ್ಲಿ ಹಿಂದೂ -ಮುಸ್ಲೀಮ್ ಸೌಹಾರ್ದ ಸಭೆಯಲ್ಲಿ ಭಾಗವಹಿಸಿದ ಕೆಲವರು ದಾಕ್ಷೀಣ್ಯಕ್ಕೋ ಮತ್ತು ಒತ್ತಾಯಕ್ಕೋ ಮಣಿದು ಭಾಗವಹಿಸಿದ್ದಾರೆ.
ಆ ಸಭೆಯ ನಂತರ “ಬ್ರಹ್ಮಕಲಶೋತ್ಸವದ ಬಳಿಕ ತೆಕ್ಕಾರಿನಲ್ಲಿ
ಇಂಥ ಯಾವುದೇ ಸೌಹಾರ್ದ ಸಭೆ ನಡೆಸಲಾಗಿಲ್ಲ , ವಿಷಾದವನ್ನೂ ವ್ಯಕ್ತಪಡಿಸಿಲ್ಲ ” ಎಂಬ ವಾಟ್ಸಾಪ್ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಹೇಳಿಕೆಯನ್ನು ಯಾವುದೇ ಸಂಘಟನೆಯ ಲೆಟರ್ ಹೆಡ್ ನಲ್ಲಿ ಬಿಡುಗಡೆಗೊಳಿಸದಿರುವುದು ಯಾಕೆ ಎಂಬ ಪ್ರಶ್ನೆ ಸ್ಥಳೀಯವಾಗಿ ಕೇಳಿ ಬಂದಿದೆ. ಸಭೆ ನಡೆಸಿದರೂ ಪರವಾಗಿಲ್ಲ ಆದರೆ “ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಸೌಹಾರ್ದ ಸಭೆಯನ್ನೂ ನಡೆಸಿಲ್ಲ, ವಿಷಾದ ಪತ್ರವನ್ನೂ ನೀಡಿರುವುದಿಲ್ಲ ” ಎಂಬ ಸುಳ್ಳು ಹೇಳಿಕೆಯನ್ನು ನೀಡಿರುವುದು ಸಂಶಯಕ್ಕೆಡೆ ಮಾಡಿದೆ.

ಸಂಘಪರಿವಾರದ ಈ ಹೇಳಿಕೆಯ ಬೆನ್ನಲ್ಲೇ ತೆಕ್ಕಾರಿನ ಮುಸ್ಲಿಂ ಒಕ್ಕೂಟದ ಸದಸ್ಯರ ಜೊತೆ ಶ್ರೀ ಗೋಪಾಲಕೃಷ್ಣ ಭಟ್ರಬೈಲು ದೇವರಗುಡ್ಡೆ ಸೇವಾಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ನಡೆಸಿದ ಸೌಹಾರ್ದ ಸಭೆಯ ಫೊಟೋಗಳನ್ನು ಸ್ಥಳೀಯ ಮುಸ್ಲಿಂ ಒಕ್ಕೂಟವು ಬಿಡುಗಡೆಗೊಳಿಸುವ ಮೂಲಕ ಒಂದು ಗುಂಪಿಗೆ ಮತ್ತೊಮ್ಮೆ ಸ್ಪಷ್ಟ ಉತ್ತರವನ್ನು ಕೊಟ್ಟಿದೆ.
ಅಂದಿನ ಸೌಹಾರ್ದ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಉಂಟಾದ ನೋವಿಗೆ ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಪರಸ್ಪರ ಒಗ್ಗಟ್ಟಿನಲ್ಲಿರಬೇಕು ಸಹಕಾರದಿಂದ ಇರಬೇಕು, ಆಗಿರುವ ನೋವಿಗೆ ವಿಷಾದಿಸುತ್ತೇವೆ .”
ಎಂದು ಹಿಂದೂ -ಮುಸ್ಲಿಂ ಸೌಹಾರ್ದ ಸಭೆಯಲ್ಲಿ ಪರಸ್ಪರ ಒಮ್ಮತಕ್ಕೆ ಬರಲಾಗಿತ್ತು. ಶ್ರೀ ಗೋಪಾಲಕೃಷ್ಣ ಭಟ್ರಬೈಲ್ ದೇವರಗುಡ್ಡೆ ಸೇವಾಟ್ರಸ್ಟ್, ತೆಕ್ಕಾರು ಮತ್ತು ಮುಸ್ಲಿಂ ಒಕ್ಕೂಟ ಸರಳಿಕಟ್ಟೆ- ತೆಕ್ಕಾರು ಇದರ ಪದಾಧಿಕಾರಿಗಳ ಸಭೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ನಾಗಭೂಷಣ್ ರಾವ್, ಕಾರ್ಯದರ್ಶಿ ಪ್ರವೀಣ್ ರೈ , ಕೋಶಾಧಿಕಾರಿ ಅಣ್ಣು ಪೂಜಾರಿ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ್,
ಟ್ರಸ್ಟಿಗಳಾದ ಸುರೇಶ್ , ಸದಾನಂದ ಬಾಜಾರ, ತುಕರಾಮ್ ನಾಯ್ಕ್.
ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳಾದ ಅಬ್ದುಲ್ ರಝಾಕ್, ಅಬ್ದುಲ್ ರಹಿಮಾನ್ ಎನ್ ಎಚ್, ದೂರುದಾರ ಎಸ್ ಎಂ ಎಸ್ ಇಬ್ರಾಹಿಂ,ಅಬ್ದುಲ್ ರಹಿಮಾನ್ ಭಟ್ರಬೈಲ್, ಹುಸೈನ್ ಬಾಜಾರ ಪಾಲ್ಗೊಂಡಿದ್ದರು.

========================================

IMG-20250413-WA0003-9-682x1024 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…
IMG-20250413-WA0002-9-792x1024 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…
IMG-20250413-WA0001-10-792x1024 ತೆಕ್ಕಾರು 'ಕಂಟ್ರಿ' ಹೇಳಿಕೆಯ ಸುತ್ತ,                        'ಕೋಮು'ಖ ಜಂತುಗಳ ಹುತ್ತ…
Previous post

ಸ್ಕೂಟಿ ಲೇಡಿ+ಟೆಂಪೋ ಡ್ರೈವರ್ ಜಂಟಿ ಗುಡ್ಡ ‘ಸರ್ವೆ’ ವೇಳೆ ಯುವಕರ ರೈಡ್:

Next post

ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ” ಮಂಗಳೂರು ವಿ. ವಿ. ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜನೆ

Post Comment

ಟ್ರೆಂಡಿಂಗ್‌

error: Content is protected !!