ಸ್ಕೂಟಿ ಲೇಡಿ+ಟೆಂಪೋ ಡ್ರೈವರ್ ಜಂಟಿ ಗುಡ್ಡ ‘ಸರ್ವೆ’ ವೇಳೆ ಯುವಕರ ರೈಡ್:

ಸ್ಕೂಟಿ ಲೇಡಿ+ಟೆಂಪೋ ಡ್ರೈವರ್ ಜಂಟಿ ಗುಡ್ಡ ‘ಸರ್ವೆ’ ವೇಳೆ ಯುವಕರ ರೈಡ್:

Share

ಸಿಕ್ಕಿಬಿದ್ದ ಚಾಲಕನ
ಗುಡ್ಡಗಾಡು ಓಟ..!!

IMG-20250512-WA0001-1024x777 ಸ್ಕೂಟಿ ಲೇಡಿ+ಟೆಂಪೋ ಡ್ರೈವರ್         ಜಂಟಿ ಗುಡ್ಡ 'ಸರ್ವೆ' ವೇಳೆ ಯುವಕರ ರೈಡ್:

ಬೆಳ್ತಂಗಡಿ : ಊರಿಗೆ ಇನ್ನೇನು ಗಂಡಾಂತರ ಕಾದಿದೆಯೋ ಮೊಗ್ರು ಕಲ್ಲಮಾಡದ ಕಲ್ಕುಡನೇ ಬಲ್ಲ; ದುರಹಂಕಾರ ನೆತ್ತಿಗೇರಿ ಮೋಹದ ಮದವೇರಿ ಮೂಗುತ್ತಿಗಳ ಸುತ್ತ ಸುತ್ತಾಡುತ್ತಾ ಹಾರಾಡುತ್ತಿದ್ದ ಗ್ರಾ.ಪಂ.ಸದಸ್ಯ + ಸದಸ್ಯೆಯ ‘ಮೋಹನಾಟಂ’ ಗಾಟು ನೆನಪು ದಾಟುವ ಮುನ್ನವೇ ಇದೇ ಊರಿನಲ್ಲಿ ವಿವಾಹಿತೆ-ವಿವಾಹಿತ ಜೋಡಿಯ ಹಾಟ್ ವಾಕ್ ‘ಗುಡ್ಡೆ ಸರ್ವೆ ‘ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಸ್ಥಳೀಯವಾಗಿ ಗುಸು ಗುಸು ಚರ್ಚೆಗೆ ಗ್ರಾಸವಾಗಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕ ಸಮೀಪದ ಟೆಂಪೋ ಚಾಲಕ ಮತ್ತು ಮೊಗ್ರು ಗ್ರಾಮದಲ್ಲಿ ಅಂಗಡಿ ಹೊಂದಿರುವ ಸ್ಕೂಟಿ ಮಹಿಳೆಯ ‘ಟ್ರಕ್ಕಿಂಗ್’ ಸ್ಟೋರಿಯೊಂದು ಸ್ಥಳೀಯವಾಗಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ.
ಸ್ಥಳೀಯ ಮಿನಿ ಬಸ್ ಮಾಲಕನಿಗೂ ಅಂಗಡಿಯಲ್ಲಿರುವ ವಿವಾಹಿತ ಮಹಿಳೆಗೂ ಕೆಲವು ಸಮಯಗಳಿಂದ ಚುಟು ಚುಟು ಆಗಿತ್ತು.!
ಮುಖ್ಯ ರಸ್ತೆಯಲ್ಲಿರುವ ಅಂಗಡಿಯ ಅರ್ಧ ಶಟರ್ ಎಳೆದು ಸ್ಟೂಟಿ ಬ್ಯೂಟಿ ಮತ್ತು ಟೆಂಪೋ ವಾಲಾ ಕೆಲವು ಸಲ ಪರಸ್ಪರ ಎತ್ತರ ಅಳತೆ ನೋಡಿಕೊಂಡು ಅಂಗಡಿಗೆ ಬಂದವರಿಗೆ ಸಿಕ್ಕಿ ಬಿದ್ದೂ ಆಗಿತ್ತು. ಕೆಲವೊಮ್ಮೆ ಅಂಗಡಿಯ ಹಿಂದಿನ ಪೊದೆಯ ಮರೆಯಲ್ಲಿ ಕಣ್ಣಾಮುಚ್ಚಾಲೆಯಾಟವೂ ನಡೆದಿತ್ತು.
ಆದರೆ ಮೊನ್ನೆ ಹಾಡು ಹಗಲೇ ನಡೆದಿದ್ದು ಇನ್ನೂ ಸ್ವಲ್ಪ ಜಾಸ್ತಿ!
ಸ್ಕೂಟಿ ಲೇಡಿ ಮತ್ತು ಡ್ರೈವರ್ ಜೋಡಿ ಫೋನ್ ಸಂಭಾಷಣೆಯಲ್ಲಿ ಮುಹೂರ್ತಕ್ಕೆ ಪ್ಲೇಸ್ -ಟೈಮ್ ಫಿಕ್ಸ್ ಮಾಡಿಕೊಂಡು ಬಿಟ್ಟು ಇದೇ ಗೋಲ್ಡನ್ ಟೈಮ್ ಎಂದು ರೆಡಿಯಾಗಿದ್ದರು.
ಟೆಂಪೋವಾಲ ಕೊಟ್ಟ ಸಮಯಕ್ಕೆ ಅಡ್ಜೆಸ್ಟ್ ಆಗುವಂತೆ ಸ್ಕೂಟಿ ಬ್ಯೂಟಿ ಅಂಗಡಿ ಶಟರ್ ಎಳೆದು ದಿಢೀರ್ ಮನೆಗೆ ಹೋಗಿ ಫ್ರೆಶ್ ಆಗಿ ಒಂದು ಕತ್ತಿ ಹಿಡಿದುಕೊಂಡು ಹುಲ್ಲು ತರಲೆಂದು ಮನೆಯವರನ್ನು ನಂಬಿಸಲು ತೋಟಕ್ಕೆ ಹೋಗಿದ್ದಳು.
ಇತ್ತ ಚಾಲಕ ಕಬ್ಬಿಣ ಕೆಲಸದವನ ಬಳಿ ಹೋಗಿ ಒಮ್ಮೆ ಕತ್ತಿ ಕೊಡು ಪಿಕ್ಕಾಸಿಗೊಂದು ಮರದ ಗೂಟ ತರಬೇಕು ಎಂದು ಹೇಳಿ ಕತ್ತಿಯೊಂದಿಗೆ ಗುಡ್ಡ ಹತ್ತಿ ಹೋದ. ಕಮಾರನಿಗೆ ಸಂಶಯ ಬಂದು ಗೆಳೆಯರಿಗೆಲ್ಲಾ ಮಾಹಿತಿ ಕೊಟ್ಟು ಸುಮ್ಮನಾಗಿದ್ದ.
ಅಷ್ಟರಲ್ಲಿ ಹುಲ್ಲು ತರಲೆಂದು ತೋಟಕ್ಕೆ ಇಳಿದವಳೂ ತೋಟದ ಮೂಲೆಯಿಂದ ಗುಡ್ಡ ಹತ್ತಿ ಹೇಳಿದ್ದ ಜಾಗಕ್ಕೆ ಬಂದು ಪಂದ್ಯಾಟಕ್ಕೆ ಟ್ರ್ಯಾಕ್ ರೆಡಿ ಮಾಡಿ ಕಾಯುತ್ತಿದ್ದಳು. ಇಬ್ಬರಿಂದಲೂ ಪರಸ್ಪರ ಮಿಸ್ಡ್ ಕಾಲ್ ಸಿಗ್ನಲ್ ಎಕ್ಸ್ಚೇಂಜ್ ಆಗಿ ಒಂದೇ ಜಾಗದಲ್ಲಿ ಸೇರಿ ‘ಫಿಜಿಕಲ್ ಟೆಸ್ಟ್ ‘ ಆರಂಭಿಸಿದ್ದರು.
ಇಬ್ಬರೂ ಪರಸ್ಪರ ಹದ ಮುದ ಪರೀಕ್ಷೆಯಲ್ಲಿ ಮೈಮರೆಯಬೇಕೆನ್ನುವಷ್ಟರಲ್ಲಿ ಸ್ಥಳೀಯ ಯುವಕರ ತಂಡ ಧಾವಿಸಿ ರಾಸಲೀಲೆಯಲ್ಲಿ ತೊಡಗಿದ್ದ ಜೋಡಿಯನ್ನು ಹಿಡಿಯಲು ಮುಂದಾದರು. ಆದರೆ ‘ಆಪರೇಷನ್ ಸಕ್ಸಸ್ ಪೇಷೆಂಟ್ ಡೆಡ್’ ಎಂಬಂತೆ ಮಿನಿ ಬಸ್ ಮಾಲಕ ಚಾಲಕ ಪೊದೆಯ ಮರೆಯಲ್ಲಿ ಜೀವದ ಹಂಗು ತೊರೆದು ಗುಡ್ಡಗಾಡು ಓಟ ಆರಂಭಿಸಿದವನು ಬೆನ್ನಟ್ಟಿದವರ ಕೈಗೆ ಸಿಗಲೇ ಇಲ್ಲ. ಆದರೆ ಸ್ಕೂಟಿ ಲೇಡಿ ಬಂದವರನ್ನು ನೋಡಿ ಆಘಾತಕ್ಕೊಳಗಾಗಿ ಹೆದರಿ ಬೆವರಿ ಓಡಿ ತಪ್ಪಿಸಿಕೊಳ್ಳಲಾಗದೆ ಸಿಕ್ಕಿ ಬಿಟ್ಟಳು. ತುರ್ತಾಗಿ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿ ಹುಲ್ಲು ತರಲೆಂದು ತೋಟಕ್ಕೆ ಇಳಿದು ಹೋದವಳು ಸ್ವಲ್ಪ ಹೊತ್ತಿನಲ್ಲಿ ಗುಡ್ಡದಿಂದ ಇಳಿದಾಗಲೇ ಮನೆಯವರಿಗೆ ಗೊತ್ತಾಗಿದ್ದು ಈಕೆ ಹೋಗಿದ್ದು ಹುಲ್ಲು ತರುವುದಕ್ಕಲ್ಲ ; ಗುಡ್ಡ ಹತ್ತಿ ಮೇಯೋದಕ್ಕೆ ಅಂತ..!! ಪರಪುರುಷನೊಂದಿಗೆ ಗುಡ್ಡದಾಟ ಆಡಲು ಹೋಗಿ ಸಿಕ್ಕಿ ಬಿದ್ದ ವಿಚಾರ ತಿಳಿದ ಪತಿ ತನ್ನ ಪತ್ನಿಯ ಕಿತಾಪತಿಗೆ ಮುಖಾಮೂತಿ ನೋಡದೆ ಬಡಿಸಿದ ಸಂಗತಿ ಇದೀಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಈ ಪ್ರಸಂಗದ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ
ಮೂರು ತಿಂಗಳ ಹಿಂದೆ ಇದೇ ಊರಲ್ಲಿ ಇದೇ ರೀತಿ ಗ್ರಾಮಪಂಚಾಯತ್ ಸದಸ್ಯರಾಗಿರುವ ವಿವಾಹಿತ-ವಿವಾಹಿತೆ ಮನೆಯಲ್ಲಿ ಸಿಕ್ಕಿ ಬಿದ್ದ ಸಂದರ್ಭ ಸಿಕ್ಕಿ ಬಿದ್ದವನಿಗೆ ಹಲ್ಲೆ ನಡೆಸಲು ಮುಂದಾಗಿದ್ದ ವ್ಯಕ್ತಿಯ ಹೆಂಡತಿಯೋ ಇದೀಗ ಗುಡ್ಡದಲ್ಲಿ ಸಿಕ್ಕಿ ಬಿದ್ದಿದ್ದು ಅಂದು ಸಿಕ್ಕಿ ಬಿದ್ದ ಗ್ರಾ.ಪಂ. ಸದಸ್ಯ ದೂರವಾಣಿ ಕರೆ ಮಾಡಿ
“ಮೊನ್ನೆ ನನಗೆ ಭಾರೀ ದಬಾಯಿಸಿದ್ರಲ್ಲ… ಇವತ್ತು ನೋಡು ನಿನ್ನ ಹೆಂಡತಿಯೇ ಗುಡ್ಡದಲ್ಲಿ ಸಿಕ್ಕಿ ಬಿದ್ದಿದ್ದಾಳೆ ಹೋಗು ಬುದ್ಧಿ ಕಲಿಸು..” ಅಂತ ಹೇಳಿ ಸೇಡು ತೀರಿಕೊಂಡಿದ್ದು ಇನ್ನಷ್ಟು ಸ್ಯಾರಸ್ಯಕರ ಚರ್ಚೆಗೆ ಕಾರಣವಾಗಿದೆ.
==========================================

IMG-20250413-WA0003-8-682x1024 ಸ್ಕೂಟಿ ಲೇಡಿ+ಟೆಂಪೋ ಡ್ರೈವರ್         ಜಂಟಿ ಗುಡ್ಡ 'ಸರ್ವೆ' ವೇಳೆ ಯುವಕರ ರೈಡ್:
IMG-20250413-WA0002-8-792x1024 ಸ್ಕೂಟಿ ಲೇಡಿ+ಟೆಂಪೋ ಡ್ರೈವರ್         ಜಂಟಿ ಗುಡ್ಡ 'ಸರ್ವೆ' ವೇಳೆ ಯುವಕರ ರೈಡ್:
IMG-20250413-WA0001-9-792x1024 ಸ್ಕೂಟಿ ಲೇಡಿ+ಟೆಂಪೋ ಡ್ರೈವರ್         ಜಂಟಿ ಗುಡ್ಡ 'ಸರ್ವೆ' ವೇಳೆ ಯುವಕರ ರೈಡ್:

Post Comment

ಟ್ರೆಂಡಿಂಗ್‌

error: Content is protected !!