ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಡೆಂಗ್ಯೂ ಜಾಗೃತಿ ಜಾಥಾ

ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಡೆಂಗ್ಯೂ ಜಾಗೃತಿ ಜಾಥಾ

Share
20250519_104955-1024x399 ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ  ಡೆಂಗ್ಯೂ ಜಾಗೃತಿ ಜಾಥಾ

ಬೆಳ್ತಂಗಡಿ : ದ.ಕ. ಜಿಲ್ಲಾ ಪಂಚಾಯತ್ , ಪಟ್ಟಣ ಪಂಚಾಯತ್ ಬೆಳ್ತಂಗಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಲ್ಪತರು ಅರೆ ವೈದ್ಯಕೀಯ ಕಾಲೇಜು ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಜಾಗೃತಿ ಜಾಥಾವು ಸೋಮವಾರ ನಡೆಯಿತು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ , ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ಡೆಂಗ್ಯೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಡೆಂಗ್ಯೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಶುಭಹಾರೈಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ , ಮುಖ್ಯಾಧಿಕಾರಿ ರಾಜೇಶ್ , ಇಂಜಿನಿಯರ್ ಮಹಾವೀರ ಆರಿಗ ಉಪಸ್ಥಿತರಿದ್ದರು. ಜಾಥಾದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯ ಸಿಬ್ಬಂದಿ, ಕಲ್ಪತರು ಅರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.

20250519_104631-1024x493 ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ  ಡೆಂಗ್ಯೂ ಜಾಗೃತಿ ಜಾಥಾ

ಪಟ್ಟಣ ಪಂಚಾಯತ್ ನಿಂದ ಹೊರಟು ಬಸ್ ನಿಲ್ದಾಣದ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆಕಟ್ಟೆಯಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಮೂಲಕ ಜಾಥಾವು ಮುಕ್ತಾಯವಾಯಿತು.

Post Comment

ಟ್ರೆಂಡಿಂಗ್‌

error: Content is protected !!