ಧರ್ಮಸ್ಥಳ ತಲುಪಿದ ಆಕಾಂಕ್ಷ ನಾಯರ್ ಮೃತದೇಹ: ಇಂದು ಅಂತ್ಯ ಸಂಸ್ಕಾರ

ಬೆಳ್ತಂಗಡಿ : ಪಂಜಾಬ್ ಪಗ್ವಾಡ ಕಾಲೇಜ್ ಕ್ಯಾಂಪಸ್ ನಲ್ಲಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದ ಧರ್ಮಸ್ಥಳದ ಆಕಾಂಕ್ಷ ಅವರ ಮೃತದೇಹ ಊರಿಗೆ ತಲುಪಿದ್ದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಮಗಳ ಸಾವಿನ ಸುದ್ದಿ ಕೇಳಿ ಆಘಾತದಿಂದ ಪಂಜಾಬ್ ಪಗ್ವಾಡ ಕ್ಯಾಂಪಸ್ ಗೆ ಹೋಗಿ
ಸಂಬಂಧಪಟ್ಟ ಪೊಲೀಸ್ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮೃತದೇಹದೊಂದಿಗೆ ಊರಿಗೆ ತಲುಪಿದ ಆಕಾಂಕ್ಷ ತಾಯಿ ಸಿಂಧೂ ದೇವಿ ಅವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ , ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್(22) ಪಂಜಾಬ್ ನಲ್ಲಿ ಕಾಲೇಜ್ ಕಟ್ಟಡದಿಂದ ಮೇ.17 ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಂಗಳವಾರ ದೆಹಲಿ ತಲುಪಿದ್ದ ಆಕಾಂಕ್ಷ ಮೃತದೇಹ ಬಳಿಕ ಬೆಂಗಳೂರಿಗೆ ಬಂದಿದ್ದು ಬುಧವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 9ಗಂಟೆ ಸೂಮಾರಿಗೆ ಆಂಬುಲೆನ್ಸ್ ಮೂಲಕ ಧರ್ಮಸ್ಥಳ ಸಮೀಪದ ಬೊಳಿಯರ್ ಗೆ ತಲುಪಿದೆ. ಇಂದು ಮನೆಯಲ್ಲಿ ನಡೆಯಲಿರುವ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿದ್ದು ಸುಮಾರು 12ಗಂಟೆಯೊಳಗೆ ಮುಗಿಯಲಿದೆ.
Post Comment