ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

Share
InShot_20250526_113812665-1024x1000 ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ತಾಲೂಕಿನ ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಶುಭ ಸಂದರ್ಭದಲ್ಲಿ ಅವರ ಮುಂದಿನ ಶೈಕ್ಷಣಿಕ ಬದುಕು ಉತ್ತಮವಾಗಿ ಬೆಳಗಲಿ ಎಂದು ಹಾರೈಸುತ್ತೇನೆ ಸತ್ಯ ಶೋಧಕ ವೇದಿಕೆಯ ಮೂಲಕ ಸಮಾಜ ಸುಧಾರಕರ ತತ್ವ ಅನುಷ್ಠಾನಗೊಳ್ಳುತ್ತಿದೆ. ಅಂಬೇಡ್ಕರ್ ಚಿಂತನೆಯು ನಮ್ಮೆಲ್ಲರ ಸಾಮಾಜಿಕ ಜೀವನಕ್ಕೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮೇ 25ನೇ ಭಾನುವಾರದಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆದ ಬುದ್ಧ, ಬಸವ, ಪುಲೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತೀ ವರ್ಷ 100 ವಿದ್ಯಾರ್ಥಿಗಳ ಪುಸ್ತಕದ ಖರ್ಚನ್ನು ನಾನು ಭರಿಸುತ್ತೇನೆ ಎಂದರು. ಶಿಕ್ಷಣಕ್ಕೆ ಒತ್ತು ನೀಡಲೇಬೇಕಾದ ಸಂದರ್ಭದಲ್ಲಿ ನಾವಿದ್ದೇವೆ ಶಿಕ್ಷಣ ಎನ್ನುವುದು ವ್ಯಕ್ತಿಯ ಬದುಕನ್ನು ರೂಪಿಸುತ್ತದೆ ಮತ್ತು ಸಶಕ್ತರನ್ನಾಗಿ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಮಾತನಾಡಿ, ಸತ್ಯಶೋಧಕ ಸಮಾಜ ಸಂಘಟನೆಯ ಸ್ಥಾಪಕರು ಮಹಾತ್ಮಾ ಜ್ಯೋತಿಭಾ ಪುಲೆಯವರು. ಒಂದು ಸಮುದಾಯ ಶೋಷಿತ ಸಮುದಾಯವನ್ನು ಶಿಕ್ಷಣದಿಂದ ವಂಚಿತರಾಗಿಸುತ್ತಿದ್ದ ಕಾಲಘಟ್ಟದಲ್ಲಿ ಸತ್ಯ ಶೋ‌ಧಕ ಸಮಾಜ ಸಂಘಟನೆಯ ಮೂಲಕ ದಮನಿತ, ಶೂದ್ರ ಸಮುದಾಯಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳನ್ನು ತೆರೆದರು. ನಮಗೆ ನಾವೇ ಪ್ರೋತ್ಸಾಹ ಕೊಡಬೇಕು, ಬೇರೆ ಯಾರೂ ಬರುವುದಿಲ್ಲ, ಅಂಬೇಡ್ಕರ್ ರವರಿಗೆ ಯಾರೂ ಪ್ರೋತ್ಸಾಹ ಕೊಡಲಿಲ್ಲ ಅಂಬೇಡ್ಕರ್ ರವರೇ ನಮಗೆಲ್ಲಾ ಸ್ಫೂರ್ತಿ ಎಂದು ಹೇಳಿದರು. ವಿದ್ಯಾರ್ಥಿಗಳು ಭಾಷಾ ಸ್ಪಷ್ಟತೆಗಾಗಿ ಸಾಮಾಜಿಕ ಜಾಲ ತಾಣಗಳಿಗಿಂತ ಹೆಚ್ಚು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಹೊರಗಿನ ವಿದ್ಯಮಾನಗಳನ್ನು ತಿಳದುಕೊಳ್ಳಬೇಕು ಹಾಗೂ ತಮ್ಮ ಕನಸುಗಳನ್ನು ನನಸುಮಾಡಿಕೊಳ್ಳಬೇಕು. ಆ ಮೂಲಕ ಹೆತ್ತವರ ಸೇವೆಗಾಗಿ ಸಿದ್ಧರಾಗಿರಬೇಕು ಎಂದರು.
ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ಮುನ್ನಡೆಸಿದರು.
ಬಿ.ಜೆ.ಪಿ. ಬೆಳ್ತಂಗಡಿ ಮಂಡಲ ಪ.ಜಾ. ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್,
‘ರೈಡಿಂಗ್ ಜೋಡಿ’ಗಳು ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಕಾಮತ್ ದಂಪತಿ, ಭೂನ್ಯಾಯ ಮಂಡಳಿ ಸದಸ್ಯ ಬಾಬು ಎರ್ಮೆತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಕಳೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 5 ರಿಂದ 10ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು.
‌‌ಕಾರ್ಯದರ್ಶಿ ಗಿರೀಶ್ ಪಣಕಜೆ, ಕೋಶಾಧಿಕಾರಿ ಯೋಗೀಶ್ ಪಣಕಜೆ, ಸದಸ್ಯರಾದ ಹರೀಶ್ ಕುಕ್ಕಳ, ಸತೀಶ್ ಉಜಿರೆ, ಶೀನ ಕುಳ್ಳಂಜ, ಹರೀಶ್ ಪಣಕಜೆ, ಸತೀಶ್ ಮಡಂತ್ಯಾರ್, ಚರಣ್ ಕುಕ್ಕೇಡಿ, ನಯನಾ ಪುರಿಯ, ವಿಶ್ವನಾಥ್ ಕಳೆಂಜ, ವಿಠಲ್ ಪುರಿಯ , ಸುನೀತಾ ಮಡಂತ್ಯಾರ್ ಪಾಲ್ಗೊಂಡರು.
ಲಲಿತಾ ಕಳೆಂಜ ಕಾರ್ಯಕ್ರಮ ನಿರೂಪಿಸಿ, ಪ್ರಿಯಾ ಕಳೆಂಜ ಸ್ವಾಗತಿಸಿದರು. ಸುಶ್ಮೀತಾ ಮಾಲಾಡಿ ವಂದಿಸಿದರು.
ಪ್ರಾರಂಭದಲ್ಲಿ ಸುಶ್ಮಿತಾ, ಸುರಕ್ಷಿತಾ ನಾರಾವಿ ನಾಡಗೀತೆ ಹಾಡಿದರು. ========================================

IMG-20250413-WA0003-17-682x1024 ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ
IMG-20250413-WA0002-18-792x1024 ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ
IMG-20250413-WA0001-18-792x1024 ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ
Previous post

ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ತಿಮಿಂಗಿಲಗಳ ಹಗಲು ದರೋಡೆ : 40 ಕೋಟಿ ಹಗರಣದ ಹೆಗ್ಗಣಗಳ ವಿರುದ್ಧ ಬಿತ್ತು ಭರ್ತಿ ಕೇಸು!

Next post

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯಿಂದ ರಕ್ಷಿತ್ ಶಿವರಾಂ ಅವರಿಗೆ ಗೌರವಾರ್ಪಣೆ

Post Comment

ಟ್ರೆಂಡಿಂಗ್‌

error: Content is protected !!