ಮೈರೋಳ್ತಡ್ಕ ಸ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ- ಉಚಿತ ಪುಸ್ತಕ,ಕೊಡೆ, ಲೇಖನ ಸಾಮಾಗ್ರಿ ವಿತರಣೆ

ಮೈರೋಳ್ತಡ್ಕ ಸ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ- ಉಚಿತ ಪುಸ್ತಕ,ಕೊಡೆ, ಲೇಖನ ಸಾಮಾಗ್ರಿ ವಿತರಣೆ

Share
InShot_20250603_144643161-1024x1024 ಮೈರೋಳ್ತಡ್ಕ ಸ.ಹಿ.ಪ್ರಾ.     ಶಾಲಾ ಪ್ರಾರಂಭೋತ್ಸವ-  ಉಚಿತ ಪುಸ್ತಕ,ಕೊಡೆ,      ಲೇಖನ ಸಾಮಾಗ್ರಿ ವಿತರಣೆ

ಬೆಳ್ತಂಗಡಿ : ಬಂದಾರು ಗ್ರಾಮದ ದ. ಕ. ಜಿ. ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಮೃತ ಮಹೋತ್ಸವ ಸಮಿತಿ ವತಿಯಿಂದ 1ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ, ಕೊಡೆ, ಲೇಖನ ಸಾಮಾಗ್ರಿ ಮತ್ತು ಸ್ಥಳೀಯ ನಿವೃತ್ತ ಮುಖ್ಯೋಪಾಧ್ಯಾಯಿನಿ ರೇವತಿ ಅನಾಬೆ ಅವರ ಪ್ರಾಯೋಜಕತ್ವದಲ್ಲಿ ನೀಡಿದ ಬ್ಯಾಗ್ ಗಳ ವಿತರಣಾ ಕಾರ್ಯಕ್ರಮವು ಜೂ 2 ಸೋಮವಾರ ನೆರವೇರಿತು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮುಂಡೂರು ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಆನಂದ ಗೌಡ ಮುಂಡೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
‘ಸಂಯೋಗ’ ಆಯುರ್ವೇದ ಕ್ಲಿನಿಕ್ ನ ವೈದ್ಯ ಡಾ.ಮನೋಜ್ಞ ಅವರು ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ಮತ್ತು ಆರೋಗ್ಯ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪದ್ಮುಂಜ ಸಿ.ಎ. ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ, ಪತ್ರಕರ್ತ ಅಚುಶ್ರೀ ಬಾಂಗೇರು ಸಂದರ್ಭೋಚಿತ ಮಾತುಗಳೊಂದಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಪ್ರಾರಂಭೋತ್ಸವದ ಮಹತ್ವದ ಜೊತೆಗೆ ಮುಂದಿನ ಮಹತ್ವದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ
ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪುತ್ತಿಲಗುತ್ತು ಮನೆತನದ ಹಿರಿಯರಾದ ನಾಣ್ಯಪ್ಪ ಗೌಡ ಪುತ್ತಿಲ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ನಿರ್ಮುಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಎಂ. ಉಪಸ್ಥಿತರಿದ್ದರು.
ಇದೇ ದಿನ ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಆಹ್ವಾನದಂತೆ ಶಾಲೆಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಅವರು ಸಾಂಕೇತಿಕವಾಗಿ ಮಕ್ಕಳಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

IMG-20250603-WA0005-1024x658 ಮೈರೋಳ್ತಡ್ಕ ಸ.ಹಿ.ಪ್ರಾ.     ಶಾಲಾ ಪ್ರಾರಂಭೋತ್ಸವ-  ಉಚಿತ ಪುಸ್ತಕ,ಕೊಡೆ,      ಲೇಖನ ಸಾಮಾಗ್ರಿ ವಿತರಣೆ

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ದಿನೇಶ್ ಕಂಡಿಗ ಉಪಸ್ಥಿತರಿದ್ದರು.
ಒಂದನೇ ತರಗತಿಗೆ ನೂತನವಾಗಿ ಸೇರ್ಪಡೆಗೊಂಡ ಪುಟಾಣಿ ಮಕ್ಕಳಿಗೆ ಶಿಕ್ಷಕ ವೃಂದದವರು ಗುಲಾಬಿ ನೀಡಿ ಭಾವನಾತ್ಮಕವಾಗಿ ಸ್ವಾಗತಿಸಲಾಯಿತು.

20250602_104050-1024x461 ಮೈರೋಳ್ತಡ್ಕ ಸ.ಹಿ.ಪ್ರಾ.     ಶಾಲಾ ಪ್ರಾರಂಭೋತ್ಸವ-  ಉಚಿತ ಪುಸ್ತಕ,ಕೊಡೆ,      ಲೇಖನ ಸಾಮಾಗ್ರಿ ವಿತರಣೆ


ಶಿಕ್ಷಕ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ರಾಜಶ್ರೀ ಪಿ.ವಿ. ಸ್ವಾಗತಿಸಿದರು. ಸಹ ಶಿಕ್ಷಕ ಪ್ರಭು ವಂದಿಸಿದರು. ಅಮೃತ ಮಹೋತ್ಸವ ಸಮಿತಿ‌ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು ಪೋಷಕರು, ವಿದ್ಯಾಭಿಮಾನಿಗಳು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

IMG-20250603-WA0004 ಮೈರೋಳ್ತಡ್ಕ ಸ.ಹಿ.ಪ್ರಾ.     ಶಾಲಾ ಪ್ರಾರಂಭೋತ್ಸವ-  ಉಚಿತ ಪುಸ್ತಕ,ಕೊಡೆ,      ಲೇಖನ ಸಾಮಾಗ್ರಿ ವಿತರಣೆ

Post Comment

ಟ್ರೆಂಡಿಂಗ್‌

error: Content is protected !!