ಬಿ.ಜೆ.ಪಿ. ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ.) ಯ ಸಕ್ರೀಯ ಕಾರ್ಯಕರ್ತನಾಗಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದೇನೆ, ನಾನು ಇದೀಗ ನನ್ನ ವೈಯ್ಯಕ್ತಿಕ ಕೆಲಸ ಕಾರ್ಯಗಳಿಂದ ಪಕ್ಷದಲ್ಲಿ ಮುಂದುವರಿಯಲು ಕಷ್ಟಕರವಾಗಿರುತ್ತದೆ ಎಂದು ಸಂಜೀವ ಎನ್.ಸಿ. ತಿಳಿಸಿದ್ದಾರೆ.
ಅವರು ಶುಕ್ರವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನಾನು ಇನ್ನು ಮುಂದೆ ಬಿ.ಜೆ.ಪಿ. ಪಕ್ಷದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ ಹಾಗೂ ವೈಯ್ಯಕ್ತಿಕ ನೆಲೆಯಿಂದ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತನಕ್ಕೆ ನಾನು ರಾಜಿನಾಮೆ ನೀಡಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹಿರಿಯ ಮಾರ್ಗದರ್ಶಕರ ಸಲಹೆಯಂತೆ ವೈಯ್ಯಕ್ತಿಕ ಕಾರಣಗಳಿಂದ ಬಿ.ಜೆ.ಪಿ. ಪಕ್ಷಕ್ಕೆ ಸೇರಿದ್ದ ನಾನು ಇದೀಗ ವೈಯ್ಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜಿನಾಮೆ ನೀಡಿರುತ್ತೇನೆ ಎಂದು ಸಂಜೀವ ಎನ್.ಸಿ. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
Post Comment