ಬೆಳ್ತಂಗಡಿಯ ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

ಬೆಳ್ತಂಗಡಿಯ ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

Share
InShot_20250622_130838422-1024x1021 ಬೆಳ್ತಂಗಡಿಯ ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ಸಂಘಟನಾ ಸಂಚಾಲಕರಾಗಿದ್ದ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯು ಜೂ22ರಂದು ಬೆಳ್ತಂಗಡಿಯ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನೆರವೇರಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್ ಅಧ್ಯಕ್ಷತೆವಹಿಸಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಮಲ್ಲೇಶ್ ಅಂಬುಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದು ಎಲ್ ಅವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡು ಚಂದು ಅವರ ಅಭಿಮಾನಿಗಳಾಗಬೇಡಿ ಅನುಯಾಯಿಗಳಾಗಿ ಎಂದು ತಿಳಿಸಿದರು.
ಮಾಜಿ ಸಂಚಾಲಕ ಕೆ.ನೇಮಿರಾಜ್ ಕಿಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಿ.ಚಂದು ಎಲ್ ಅವರ ಸಂಘಟನಾ ಚತುರತೆ, ನೇರ ನಡೆನುಡಿಯ ನಿಷ್ಠುರ ವ್ಯಕ್ತಿತ್ವದ ಬಗ್ಗೆ ನೆನಪಿಸಿಕೊಂಡು ಅವರ ಸಂಘಟನಾ ಚತುರತೆ ಕಾರ್ಯಕರ್ತರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ಮೈಸೂರು ವಿಭಾಗೀಯ ಸಂಚಾಲಕ ಬಿ.ಕೆ. ವಸಂತ್ , ತಾಲೂಕು ದಲಿತ ಮಹಿಳಾ ಒಕ್ಕೂಟದ ಮಾಜಿ ಸಂಚಾಲಕಿ ಕವಿತಾ ಕುಮಾರಿ
ಮಾಜಿ ಸಂಚಾಲಕ ವೆಂಕಣ್ಣ ಕೊಯ್ಯೂರು ಮಾತನಾಡಿ ಒಡನಾಟದ ದಿನಗಳನ್ನು ನೆನಪಿಸಿಕೊಂಡರು.
ಈ ಸಂದರ್ಭ ವೇದಿಕೆಯಲ್ಲಿ ಚಂದು ಎಲ್ ರವರ ಪತ್ನಿ ಅಪ್ಪಿಲತಾ ಉಪಸ್ಥಿತರಿದ್ದರು. ಮಾಜಿ ಜಿ.ಪಂ ಸದಸ್ಯ , ದಸಂಸ ಮುಖಂಡ ಶೇಖರ್ ಕುಕ್ಕೇಡಿ , ಸಂಜೀವ ಆರ್ , ಚೆನ್ನಕೇಶವ , ಮುಖಂಡರಾದ ಸೇಸಪ್ಪ ನಲಿಕೆ , ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಶಾಂತಿಕೋಡಿ , ಕೂಸ ಅಳದಂಗಡಿ, ನಾರಾಯಣ ಪುದುವೆಟ್ಟು, ಯುವ ಉದ್ಯಮಿ ಪ್ರಶಾಂತ್ , ಸಾಮಾಜಿಕ ಕಾರ್ಯಕರ್ತ ಶೇಖರ್ ಎಲ್ ಮತ್ತಿತರರು ಇದ್ದರು.
ಮುಖಂಡರಾದ ಶ್ರೀಧರ ಕಳೆಂಜ ಕಾರ್ಯಕ್ರಮ ನಿರೂಪಿಸಿದರು.

20250622_123008-1024x461 ಬೆಳ್ತಂಗಡಿಯ ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ
Previous post

‘ಹೆಲ್ಪ್ ಲೈನ್’ ಬಲೆಗೆ ಬಿದ್ದು ಹಣ ಕಳೆದುಕೊಂಡ ಗಾಯಕ ಅರವಿಂದ ವಿವೇಕ್ : ಬೆಂಗಳೂರಿನ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ವಂಚನೆ ಕೇಸು ದಾಖಲು

Next post

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ನಿಗೂಢ ಕೊಲೆ ಮತ್ತಿತರ ಅಪರಾಧ ಪ್ರಕರಣಗಳ ಮಾಹಿತಿ ಬಿಚ್ಚಿಡಲಿರುವ ಬೆಂಗಳೂರಿನ ವಕೀಲ!

Post Comment

ಟ್ರೆಂಡಿಂಗ್‌

error: Content is protected !!