ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆಯಿಂದ ಮಾಜಿ ಅಧ್ಯಕ್ಷರಿಗೆ ಅವಮಾನ: ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮಂಡನೆ ದೂರು

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆಯಿಂದ ಮಾಜಿ ಅಧ್ಯಕ್ಷರಿಗೆ ಅವಮಾನ: ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮಂಡನೆ ದೂರು

Share
InShot_20250624_133110133-1021x1024 ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆಯಿಂದ ಮಾಜಿ ಅಧ್ಯಕ್ಷರಿಗೆ ಅವಮಾನ: ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮಂಡನೆ ದೂರು

ಬೆಳ್ತಂಗಡಿ : ಗ್ರಾಮಪಂಚಾಯತ್ ಅಧ್ಯಕ್ಷರು ತನಗೆ ಅವಮಾನಿಸಿ ಹಕ್ಕುಚ್ಯುತಿಗೊಳಿಸಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರು ಹಕ್ಕುಚ್ಯುತಿ ಮಂಡಿಸಿದ ವಿದ್ಯಮಾನ ಕೊಯ್ಯೂರು ಗ್ರಾಮಪಂಚಾಯತ್ ನಲ್ಲಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮಪಂಚಾಯತ್ ಅಧ್ಯಕ್ಷೆ ದಯಾಮಣಿ ವಿರುದ್ಧ ಮಾಜಿ ಅಧ್ಯಕ್ಷ ಜಗನ್ನಾಥ್ ಎಂ ಹಕ್ಕುಚ್ಯುತಿ ಮಂಡನೆ ದೂರು ಸಲ್ಲಿಸಿದ್ದಾರೆ. ಅಧ್ಯಕ್ಷೆ ದಯಾಮಣಿ ಮತ್ತು ಮಾಜಿ ಅಧ್ಯಕ್ಷ ಜಗನ್ನಾಥ್ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳಾಗಿದ್ದು ಬೂದಿ ಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ಹೊಂದಾಣಿಕೆ ಕೊರತೆ ಇದೀಗ ಬೀದಿಗೆ ಬಿದ್ದಿದೆ.
ಜಗನ್ನಾಥ್ ಎಂ 2020ನೇ ಡಿಸೆಂಬರ್ 30ರಂದು ಆಯ್ಕೆಯಾಗಿ ಒಪ್ಪಂದದ ಮೇರೆಗೆ ಮೊದಲ ಪೂರ್ವಾರ್ಧದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಬಳಿಕ ದಯಾಮಣಿ ಅಧ್ಯಕ್ಷರಾಗಿದ್ದರು.
ಇದೀಗ ಜೂನ್ 18ರಂದು ಗ್ರಾಮಪಂಚಾಯತಿನ 18ನೇ ಸಾಮಾನ್ಯ ಸಭೆ ನಡೆದಿತ್ತು. ತಾಲೂಕು ಪಂಚಾಯತ್ ಅನುದಾನದಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನ ಪಿಜಕಳ ಎಂಬಲ್ಲಿ ಈ ಹಿಂದೆ ಕೊರೆಯಲಾಗಿರುವ ಕೊಳವೆ ಬಾವಿಯಲ್ಲಿ ಕಲುಷಿತ ನೀರು ಬರುತ್ತಿದ್ದು, ಸದ್ರಿ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಈ ಕೊಳವೆ ಬಾವಿಗೆ ಅಳವಡಿಸಲಾಗಿರುವ ಪಂಪನ್ನು ತೆಗೆಯುವ ಬಗ್ಗೆ ಮೇ 22ರ ಸಾಮಾನ್ಯ ಸಭೆಯಲ್ಲಿ (ನಿರ್ಣಯ ನಂಬ್ರ 7/25-26ರಂತೆ) ನಿರ್ಣಯಿಸಲಾಗಿತ್ತು.
ಜೂನ್ 18ರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಅಧ್ಯಕ್ಷ ಜಗನ್ನಾಥ್ ಅವರು ಮೇ 22ರ ನಿರ್ಣಯವು ಯಾಕೆ ಅನುಷ್ಠಾನಗೊಂಡಿಲ್ಲ? ಎಂದು ಪ್ರಶ್ನಿಸಿದ್ದು ಈ ಸಂದರ್ಭ
ಅಧ್ಯಕ್ಷರಾದ ದಯಾಮಣಿ ಅವರು ಸಭೆಯಲ್ಲಿ ಹಾಜರಿದ್ದ 12 ಮಂದಿ ಸದಸ್ಯರು ಮತ್ತು ಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳ ಮುಂದೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸದಸ್ಯನೆಂದು ತಿಳಿದು ತನ್ನನ್ನು ಉದ್ದೇಶಿಸಿ “ನೀವು ಸಭೆಯಿಂದ ಹೊರಗೆ ನಡೆಯಿರಿ” ಎಂದು ಏರುಧ್ವನಿಯಲ್ಲಿ ಮಾತನಾಡಿ ಸಭೆಯಲ್ಲಿ ನನ್ನ ಸದಸ್ಯತ್ವಕ್ಕೆ ಅವಮಾನಿಸಿದ್ದಾರೆ, ಅಧ್ಯಕ್ಷರ ಈ ವರ್ತನೆ ಮತ್ತು ಮಾತಿನಿಂದ ನನಗೆ ಹಕ್ಕುಚ್ಯುತಿ ಆಗಿರುತ್ತದೆ” ಎಂದು ಸದಸ್ಯ ಜಗನ್ನಾಥ್ನೀ ಡಿರುವ ಹಕ್ಕುಚ್ಯುತಿ ಮಂಡನೆ ಅರ್ಜಿಯಲ್ಲಿ ವಿವರಿಸಲಾಗಿದೆ.
“ನಾನೋರ್ವ ಪಂಚಾಯತ್ ಸದಸ್ಯನಾಗಿ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಶ್ನಿಸುವ ಅಧಿಕಾರ ಹೊಂದಿದ್ದರೂ ನನ್ನ ಅಧಿಕಾರವನ್ನು ಮೊಟಕುಗೊಳಿಸುವ ಯಾವುದೇ ಹಕ್ಕು ಅಧ್ಯಕ್ಷರಿಗೆ ಇರುವುದಿಲ್ಲ ಎಂದಿರುವ ಅವರು, ಗ್ರಾ.ಪಂ.ಅಧ್ಯಕ್ಷರಾದ ದಯಾಮಣಿ ಅವರು ನನ್ನ ಮೇಲೆ ಮಾಡಿರುವ
ದಬ್ಬಾಳಿಕೆ ವರ್ತನೆಯಿಂದ ಸದಸ್ಯನಾದ ನನ್ನ ಹಕ್ಕುಚ್ಯುತಿ ಆಗಿದ್ದು ಈ ಬಗ್ಗೆ ಅಧ್ಯಕ್ಷರನ್ನು ತನಿಖೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿರುವ ದೂರಿನ ಯಥಾಪ್ರತಿಯನ್ನು ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಸಲ್ಲಿಸಲಾಗಿದ್ದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಸದ್ಯ ಕೊಯ್ಯೂರು ಗ್ರಾಮಪಂಚಾಯತ್ ಆಡಳಿತದಲ್ಲಿ
“ದಯೆಯೇ ಧರ್ಮದ ಮೂಲವಯ್ಯ…” ಎಂಬ ವಚನವು “ದಯಾ’ನೇ ದರ್ಪದ ಮೂಲವಯ್ಯಾ…” ಎಂಬತಾಗಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ.

IMG-20250623-WA0008-1024x461 ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆಯಿಂದ ಮಾಜಿ ಅಧ್ಯಕ್ಷರಿಗೆ ಅವಮಾನ: ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮಂಡನೆ ದೂರು

Post Comment

ಟ್ರೆಂಡಿಂಗ್‌

error: Content is protected !!