ತಣ್ಣೀರುಪಂತ ಪಂ. ಅಭಿವೃದ್ಧಿ ಅಧಿಕಾರಿಯಿಂದ ಕಾನೂನು ಬಾಹಿರ ಪರವಾನಿಗೆ ನವೀಕರಣ

ತಣ್ಣೀರುಪಂತ ಪಂ. ಅಭಿವೃದ್ಧಿ ಅಧಿಕಾರಿಯಿಂದ ಕಾನೂನು ಬಾಹಿರ ಪರವಾನಿಗೆ ನವೀಕರಣ

Share
IMG-20250626-WA0000 ತಣ್ಣೀರುಪಂತ ಪಂ. ಅಭಿವೃದ್ಧಿ ಅಧಿಕಾರಿಯಿಂದ ಕಾನೂನು ಬಾಹಿರ ಪರವಾನಿಗೆ ನವೀಕರಣ

ಬೆಳ್ತಂಗಡಿ : ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ಎಂಬಲ್ಲಿರುವ ಪೆಟ್ರೋಲ್ ಬಂಕ್ ಕಾನೂನು ಬಾಹಿರ ಪರವಾನಿಗೆ ನವೀಕರಣಗೊಂಡಿದ್ದು ಪಂ.ಅಭಿವೃದ್ಧಿ ಅಧಿಕಾರಿ ಎಸಗಿದ ಕರ್ತವ್ಯ ಲೋಪದಿಂದ ಗ್ರಾ.ಪಂ. ಆದಾಯಕ್ಕೆ ನಷ್ಟವುಂಟಾಗಿದೆ ಹಾಗೂ ಸರಕಾರಕ್ಕೆ ಲಕ್ಫಾಂತರ ರೂಪಾಥಝ್ ತೆರಿಗೆ ವಂಚನೆಯಾಗಿರುವ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕೆ.ಎಸ್. ಅಬ್ದುಲ್ಲಾ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮಪಂಚಾಯತ್ ವ್ಯಾಪ್ತಿಯ (ಉಪ್ಪಿನಂಗಡಿ- ಗುರುವಾಯನಕೆರೆ ಹೆದ್ದಾರಿ ಬದಿ) ಕಲ್ಲೇರಿ ಎಂಬಲ್ಲಿ
ನಂದಿತಾ ಜೈನ್ ಎಂಬವರ ಹೆಸರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಇದರ ಪೆಟ್ರೋಲ್ ಬಂಕ್ ಇದ್ದು ಈ ಪೆಟ್ರೋಲ್ ಪಂಪ್ ಗೆ ಗ್ರಾಮ ಪಂಚಾಯತ್ ನೀಡಿರುವ ಪರವಾನಿಗೆಯಲ್ಲಿ ಪಂಚಾಯತ್ ರಾಜ್ ಕಾನೂನನ್ನು ಕಡೆಗಣಿಸಿ ಸರಕಾರದ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಮತ್ತು ಹಲವಾರು ಲೋಪದೋಷಗಳಿವೆ.
ಹಾಗೂ ಪಂಚಾಯತ್ ರಾಜ್ ನಿಯಮಾವಳಿಗಳನ್ನು ಅನುಸರಿಸದೆ ವಾಣಿಜ್ಯ ಉದ್ದೇಶದ ಸಂಸ್ಥೆಗೆ ಕಾನೂನುಬಾಹಿರ ವಿನಾಯಿತಿಯಲ್ಲಿ ಪರವಾನಿಗೆ ನೀಡಿರುವುದರಿಂದ ಗ್ರಾಮಪಂಚಾಯತ್ ಆಡಳಿತಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶವಾಗಿದೆ.

ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರವಣ್ ಕುಮಾರ್ ಮತ್ತು ಆಡಳಿತ ವರ್ಗದವರು ಸರಕಾರದ ಆದೇಶಗಳನ್ನು ಮೀರಿ ತಮ್ಮ ಅಧಿಕಾರ ಚಲಾಯಿಸುತ್ತಿರುವುದರಿಂದ ಗ್ರಾ.ಪಂ. ಆದಾಯಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುವುದನ್ನು ದೂರಿನಲ್ಲಿ ಎತ್ತಿ ಹಿಡಿಯಲಾಗಿದೆ.
2013-14ರ ಸಾಲಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಇವರಿಗೆ ಸ.ನಂ.15/2 ರಲ್ಲಿ ಕಟ್ಟಡ ರಚನೆಗಾಗಿ ಜ:30-2014ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯದಂತೆ 900/- ರೂ. ಪಡೆದು ಫೆ06-2014ರಂದು ಪರವಾನಿಗೆಯನ್ನು ನೀಡಲಾಗಿದೆ.
ಪೆಟ್ರೋಲ್ ಪಂಪ್ ಜಾಗ ಕಾನೂನು ಪ್ರಕಾರ ಭೂಪರಿವರ್ತನೆ ಆಗಿರುವುದಿಲ್ಲ. ಈ ಜಾಗವು ದಿ. ಬಿ.ನಿರಂಜನ, (ಆಡಳಿತದಾರ, ಆಧೀಶ್ವರ ಸ್ವಾಮೀ ಬಸದಿ) ಎಂಬವರ ಅನುಭೋಗದಲ್ಲಿದ್ದು, ಸಂಸ್ಥೆಯ ಹೆಸರಿನಲ್ಲಿ ಕಟ್ಟಡ ರಚನೆಗೆ ಪರವಾನಿಗೆ ನೀಡಿರುವುದು ಅಕ್ರಮವಾಗಿದೆ. ಕಟ್ಟಡ ರಚನೆಗಾಗಿ ಸರಕಾರದ ಆದೇಶದಂತೆ ನಿಯಮಾನುಸಾರ ಸೂಕ್ತ ಶುಲ್ಕ ವಸೂಲಿ ಮಾಡಿರುವುದಿಲ್ಲ.
ಕಟ್ಟಡ ರಚನೆ ಬಗ್ಗೆ ಪರವಾನಿಗೆಯಲ್ಲಿ ಕಟ್ಟಡದ ಉದ್ದ, ಅಗಲ- ಎತ್ತರ ನಮೂದಿಸಿರುವುದಿಲ್ಲ.
ಕಟ್ಟಡ ಪೂರ್ಣಗೊಂಡ ಬಗ್ಗೆ ದೃಢಪತ್ರ ಪಡೆದಿರುವುದಿಲ್ಲ. ಕಟ್ಟಡದ ಒಟ್ಟು ವೆಚ್ಚದ ಬಗ್ಗೆ ಕಾರ್ಮಿಕ ಕಲ್ಯಾಣ ನಿಧಿಯನ್ನು ಪಾವತಿಸಿರುವುದಿಲ್ಲ.
ದಿ.06.02.2014ರಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಇವರಿಗೆ ಕಟ್ಟಡ ರಚನೆಗಾಗಿ ಪರವಾನಿಗೆಯನ್ನು ನೀಡಿದ್ದು ದಿ.06.12.2013 ರಂದು, ಅಂದರೆ 62 ದಿನಗಳ ಮೊದಲು ನಂದಿತಾ ಪ್ರಭು ಎಂಬವರಿಗೆ ಪೆಟ್ರೋಲ್ ಪಂಪ್ ನಡೆಸುವ ಬಗ್ಗೆ ಪರವಾನಿಗೆಯನ್ನು ನೀಡಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪರವಾನಿಗೆಗೆ ಕೇವಲ 750/- ರೂ.ಗಳನ್ನು ಪಡೆಯಲಾಗಿದೆ.
ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಇವರಿಗೆ ಕಟ್ಟಡ ರಚನೆಗಾಗಿ ಪರವಾನಿಗೆ ನೀಡಿದ್ದು, ನಂದಿತಾ ಪ್ರಭು ಅವರಿಗೆ ವ್ಯಾಪಾರದ ಬಗ್ಗೆ ಪರವಾನಿಗೆ ನೀಡಿರುವುದು ಕಾನೂನು ಬಾಹಿರವಾಗಿದ್ದು ಪರಿಶೀಲನೆಗಾಗಿ ಒತ್ತಾಯಿಸಲಾಗಿದೆ.
2013-14 ರಿಂದ 2021-22 ರವರೆಗೂ ಸದ್ರಿ ಪೆಟ್ರೋಲ್ ಬಂಕಿಗೆ ಕೇವಲ 750/- ರೂ. ಶುಲ್ಕ ವಿಧಿಸಿ ನವೀಕರಣ ಮಾಡಿದ್ದು, 2023-24 ರಲ್ಲಿ ರೂ.2000/- ರೂ.ಶುಲ್ಕ ವಸೂಲಿ (ಅನುಬಂಧ-3) ಮಾಡಲಾಗಿದ್ದು ಗ್ರಾಮಪಂಚಾಯತ್ ಗೆ ನಷ್ಟ ಉಂಟಾಗಿದೆ. ಪೆಟ್ರೋಲ್ ಬಂಕ್ ಜಾಗವನ್ನು ಬಿ.ನಿರಂಜನ ಆಡಳಿತದಾರ, ಶ್ರೀ ಅಧೀಶ್ವರ ಸ್ವಾಮೀ ಬಸದಿ ಇವರು ಲೀಸ್ ಆಧಾರದಲ್ಲಿ ನೀಡಿದ್ದು ಬಿ.ನಿರಂಜನ ಅವರು ಫೆ:12.2024ರಂದು ಮೃತಪಟ್ಟಿದ್ದಾರೆ.
ಆದರೆ ಮೃತರ ಪತ್ನಿ ಮತ್ತು ಮಕ್ಕಳು ಬಸದಿಯ ಆಡಳಿತದಾರರಲ್ಲದಿದ್ದರೂ ಅವರ ಒಪ್ಪಿಗೆಯನ್ನು ಪಡೆದು ಪರವಾನಿಗೆಯನ್ನು ನವೀಕರಣ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಆರೋಪಿಸಲಾಗಿದೆ.
ಬಿ.ನಿರಂಜನ ಕುಮಾರ್ ಅವರು ಶ್ರೀ ಆದೀಶ್ವರ ದೇವರ ಬಸದಿಯ ಆಡಳಿತದಾರರು ಮಾತ್ರ ವಿನಹ: ಬಸದಿ ದೇವರ ಜಾಗವು ಅವರ ಆಸ್ತಿಯಲ್ಲ. ಆದರೂ ಪರವಾನಿಗೆಯನ್ನು ಬಿ.ನಿರಂಜನ್ ಕುಮಾರ್ ಮರಣದ ನಂತರ ಯಾವುದೇ ದಾಖಲೆಗಳಿಲ್ಲದೆ ಅವರ ಪತ್ನಿ ಬಿ.ಅರುಣಾ ಮತ್ತು ಮಕ್ಕಳಾದ ಪವಿತ್ರಾ, ಚೈತ್ರಾ ಅವರು ಪಂಚಾಯತ್ ಗೆ ಕೊಟ್ಟ ಒಪ್ಪಿಗೆ ಪತ್ರದ ಆಧಾರದ ಮೇಲೆ ಪೆಟ್ರೋಲ್ ಪಂಪ್ ನ ಲೈಸನ್ಸನ್ನು ನಂದಿತಾ ಪ್ರಭು ಅವರ ಹೆಸರಿಗೆ ತಣ್ಣೀರುಪಂತ ಗ್ರಾಮಪಂಚಾಯತಿನ ಪಿಡಿಒ ಶ್ರವಣ್ ಕುಮಾರ್ ಅವರು ಕಾನೂನು ಬಾಹಿರವಾಗಿ ನವೀಕರಿಸಿದ್ದಾರೆ.
ಬಿ.ನಿರಂಜನ್ ಕುಮಾರ್ ಅವರ ಆಡಳಿತದಲ್ಲಿದ್ದ ಆಸ್ತಿಯು ಶ್ರೀ ಆದೀಶ್ವರ ದೇವರ ಸ್ಥಿರಾಸ್ತಿಯಾಗಿದ್ದು, ಇದನ್ನು 16.11.2013ರಂದು ನಂದಿತಾ ಪ್ರಭು ಅವರಿಗೆ ಪೆಟ್ರೋಲ್ ಬಂಕ್ ನಡೆಸುವರೇ ಕರಾರು ಪತ್ರ ಮಾಡಲು ಕೂಡಾ ಕಾನೂನು ಪ್ರಕಾರ ಅವಕಾಶವಿರುವುದಿಲ್ಲ.
ಬಿ.ನಿರಂಜನ್ ಕುಮಾರ್ ಮರಣಾ ನಂತರ ಆದೀಶ್ವರ ದೇವರ ಹೆಸರಿನಲ್ಲಿದ್ದ ಸ್ಥಿರಾಸ್ತಿ (ಸ.ನಂ.15-1 ಮತ್ತು 15-2 ) ಅವರ ಪತ್ನಿ, ಮಕ್ಕಳ ಹೆಸರಿನಲ್ಲಿ ಯಾವುದೇ ರೀತಿಯಲ್ಲಿ ಆರ್.ಟಿ.ಸಿ. ಬದಲಾವಣೆಯಾಗುವುದಿಲ್ಲ. ಆದರೆ ಸ್ಥಳದಲ್ಲಿದ್ದ ಪೆಟ್ರೋಲ್ ಪಂಪ್ ಲೈಸನ್ಸ್‌ನ್ನು ಯಾವುದೇ ದಾಖಲೆಗಳು ಮೃತರ ಪತ್ನಿ ಮಕ್ಕಳ ಹೆಸರಿನಲ್ಲಿಲ್ಲದಿದ್ದರೂ ಕಾನೂನು ಬಾಹಿರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರವಣ್ ಕುಮಾರ್ ಅವರು ಯಾವುದೋ ಆಮಿಷಕ್ಕೆ ಬಲಿಯಾಗಿ ಪರವಾನಿಗೆಯನ್ನು ನೀಡಿ ಸರಕಾರಕ್ಕೆ ವಂಚನೆ, ನಷ್ಟವನ್ನುಂಟು ಮಾಡಿದ್ದು ಈ ಬಗ್ಗೆ ತನಿಖೆ ನಡೆಸಿ ಪಂ ಅಭಿವೃದ್ದಿ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕಾನೂನು ಕೈಗೊಳ್ಳಬೇಕಾಗಿ ದೂರಿನಲ್ಲಿ ಒತ್ತಾಯಿಸಲಾಗಿದೆ.

Previous post

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆಯಿಂದ ಮಾಜಿ ಅಧ್ಯಕ್ಷರಿಗೆ ಅವಮಾನ: ಹಾಲಿ ಅಧ್ಯಕ್ಷರ ವಿರುದ್ಧ ಮಾಜಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮಂಡನೆ ದೂರು

Next post

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಮಾಹಿತಿ ಬಿಚ್ಚಿಡಲು ದ.ಕ. ಎಸ್.ಪಿ. ಕಚೇರಿಗೆ ಇಂದು ಹಾಜರಾಗಲಿರುವ ವ್ಯಕ್ತಿ

Post Comment

ಟ್ರೆಂಡಿಂಗ್‌

error: Content is protected !!