ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಮಾಹಿತಿ ಬಗ್ಗೆ ಭೇಟಿಗೆ ಬಂದಾಗ ಬೆಂಗಳೂರಿಗೆ ಹೋಗಿದ್ದ ದ.ಕ. ಎಸ್.ಪಿ.

ಬಾಕಿಯಾಯಿತು ನಿಗೂಢ ಮಾಹಿತಿದಾರನ ಎಸ್.ಪಿ. ಭೇಟಿ
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅತ್ಯಾಚಾರ-ಕೊಲೆ ಮತ್ತಿತರ ಅಪರಾಧ ಕೃತ್ಯಗಳ ಮಾಹಿತಿ ಬಿಚ್ಚಿಡಲು ಮುಂದಾಗಿರುವ ವ್ಯಕ್ತಿಯನ್ನು ಹಾಜರುಪಡಿಸುವ ಬಗ್ಗೆ ಚರ್ಚಿಸಲು ಬೆಂಗಳೂರಿನ ವಕೀಲರ ನಿಯೋಗ ಮಂಗಳೂರಿಗೆ ಆಗಮಿಸಿದ್ದು ಮೇಲಾಧಿಕಾರಿಗಳ ಆಹ್ವಾನದಂತೆ ಇಲಾಖಾ ತುರ್ತು ಕಾರ್ಯದ ನಿಮಿತ್ತ ಎಸ್.ಪಿ. ಅವರು ಬೆಂಗಳೂರಿಗೆ ತೆರಳಿರುವ ಕಾರಣ ಈ ದಿನ ಭೇಟಿ ಸಾಧ್ಯವಾಗಲಿಲ್ಲ. ಬೆಂಗಳೂರಿನಿಂದ ಆಗಮಿಸಿದ್ದ ವಕೀಲರ ನಿಯೋಗವು ಶುಕ್ರವಾರ ಮಧ್ಯಾಹ್ನ ಎಸ್.ಪಿ. ಕಚೇರಿಗೆ ತಲುಪಿದ್ದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅತ್ಯಾಚಾರ-ಕೊಲೆ ಮತ್ತಿತರ ಅಪರಾಧ ಕೃತ್ಯಗಳ ಮಾಹಿತಿ ಬಿಚ್ಚಿಡಲಿದ್ದ ವ್ಯಕ್ತಿಯನ್ನು ಎಸ್.ಪಿ. ಮುಂದೆ ಹಾಜರುಪಡಿಸಲು ಆಗಲಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆಹ್ವಾನದಂತೆ ಇಲಾಖಾ ತುರ್ತು ಕಾರ್ಯದ ನಿಮಿತ್ತ ಎಸ್.ಪಿ. ಅವರು ಬೆಂಗಳೂರಿಗೆ ತೆರಳಿರುವ ಕಾರಣ ಈ ದಿನ ವಕೀಲರ ನಿಯೋಗದ ಭೇಟಿ ಸಾಧ್ಯವಾಗಲಿಲ್ಲ. ಸೂಕ್ತ ಕಾನೂನಾತ್ಮಕ ರಕ್ಷಣೆ ಮತ್ತು ಸುರಕ್ಷತೆ ನೀಡಿದಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳ ಮಾಹಿತಿಯನ್ನು ನೀಡುವುದಾಗಿ ವ್ಯಕ್ತಿಯೊಬ್ಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ವಕೀಲರ ತಂಡ ಪೂರಕ ಕಾನೂನಾತ್ಮಕ ಸಿದ್ಧತೆ ನಡೆಸಿತ್ತು.
ಸುಪ್ರೀಮ್ ಕೋರ್ಟ್ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಮುಂತಾದವರ ನಿಯೋಗ ಮಂಗಳೂರಿಗೆ ಆಗಮಿಸಿದ್ದು
ಇಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಮೌಖಿಕವಾಗಿ ಭೇಟಿಯಾಗಿ ವ್ಯಕ್ತಿಯನ್ನು ಹಾಜರುಪಡಿಸುವ
ಬಗ್ಗೆ ವ್ಯಾಪಕ ಕುತೂಹಲ ಮೂಡಿತ್ತು. ಆದರೆ ನಿರೀಕ್ಷೆಯಂತೆ ಇಂದು ವ್ಯಕ್ತಿಯನ್ನು ಹಾಜರುಪಡಿಸಲಾಗಲಿ ವಕೀಲರ ನಿಯೋಗದ ಎಸ್.ಪಿ. ಭೇಟಿಯಾಗಲಿ ಆಗಲಿಲ್ಲ. ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ದಂಡು ಬೆಂಗಳೂರಿನ ವಕೀಲರ ತಂಡವನ್ನು ಮಾತನಾಡಿಸಿ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದು “ನಾವು ಎಸ್.ಪಿ.ಅವರ ಭೇಟಿಯಾಗಿ ಚರ್ಚಿಸುವ ಉದ್ದೇಶದಿಂದ ಬಂದಿದ್ದೇವೆ, ಅವರು ಇಲ್ಲ, ಅವರನ್ನು ಭೇಟಿಯಾಗದೆ ಏನನ್ನೂ ಹೇಳಲು ಆಗುವುದಿಲ್ಲ ” ಎಂದಿದ್ದಾರೆ. ಆದರೆ
ವೈರಲ್ ಆಗಿರುವ ಪತ್ರ ನಮ್ಮದೇ ಎಂದು ವಕೀಲರು ಸ್ಪಷ್ಟಪಡಿಸಿದರು.
ಈ ಬಗ್ಗೆ ಮಾಧ್ಯಮದವರು ಆ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದೀರಾ? ಹಾಜರುಪಡಿಸುತ್ತಿರಾ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದರೂ ವಕೀಲರು ಮಾತ್ರ “ನೋ ಕಮೆಂಟ್ಸ್” ಎಂದಷ್ಟೇ ಪ್ರತಿಕ್ರಿಯಿಸಿ ಜಾಣತನ ಮೆರೆದರು.
ಇದೀಗ ಶುಕ್ರವಾರಕ್ಕೆ ನಿಗದಿಯಾಗಿದ್ದ ಬೆಂಗಳೂರಿನ ವಕೀಲರ ನಿಯೋಗದ ಎಸ್.ಪಿ. ಭೇಟಿ ಮುಂದೂಡಲ್ಪಟ್ಟಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
Post Comment