ಕುಂಟಾಲಪಲ್ಕೆ ಸರಕಾರಿ ಶಾಲೆಗೆ ವಿಮುಕ್ತಿ ಸಂಸ್ಥೆಯಿಂದ ಸ್ವಚ್ಛತಾ ಸಾಮಾಗ್ರಿ ಕೊಡುಗೆ

ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ಜುಲೈ10ರಂದು ಪ್ರಾರ್ಥನಾ ಅವಧಿಯಲ್ಲಿ
ಕವುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್ ಬಾಗ್ ವಿಮುಕ್ತಿ ಲಾಯಿಲಾ ಸಂಸ್ಥೆಯ ವತಿಯಿಂದ ಶಾಲಾ ಸ್ವಚ್ಛತೆಗೆ ಬಳಸುವ ವಸ್ತುಗಳಾದ ಫಿನಾಯಿಲ್, ಬಕೆಟ್, ಮಗ್ ಮತ್ತು ಬ್ರಶ್ ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪದ್ಮುಂಜ ಇಲ್ಲಿನ ಸಿಎಚ್‌ಒ ಜಗದೀಶ್ ಅವರು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರಲ್ಲದೆ
ಕೈತೊಳೆಯುವ ವಿಧಾನವನ್ನು ಕಲಿಸಿದರು. ಕಾರ್ಯಕ್ರಮದಲ್ಲಿ ವಿಮುಕ್ತಿ ಸಂಸ್ಥೆಯ ಪ್ರತಿನಿಧಿ ಸವಿತಾ, ಆಶಾ ಕಾರ್ಯಕರ್ತೆ ರಾಜೀವಿ, ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಕೋಡ್ಯೇಲು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ , ಶಿಕ್ಷಕ ವೃಂದ, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
Post Comment