ಅಪರಿಚಿತ ವ್ಯಕ್ತಿ ಕುಸಿದು ಬಿದ್ದು ಸಾವು

ಅಪರಿಚಿತ ವ್ಯಕ್ತಿ ಕುಸಿದು ಬಿದ್ದು ಸಾವು

Share
IMG-20250713-WA0006-1024x877 ಅಪರಿಚಿತ ವ್ಯಕ್ತಿ ಕುಸಿದು ಬಿದ್ದು ಸಾವು

ಬೆಳ್ತಂಗಡಿ : ಲಾಯಿಲಾ ಗ್ರಾಮದ ಕಕ್ಕೇನ ಎಂಬಲ್ಲಿ ತೋಡಿನ ಬದಿಯಲ್ಲಿ ಜುಲೈ 12ರಂದು ಸುಮಾರು 11 ಗಂಟೆ ಹೊತ್ತಿಗೆ 35 ರಿಂದ 45 ವರ್ಷದ ಪ್ರಾಯದ ಗಂಡಸ್ಸು ಅಸ್ವಸ್ಥ ರೀತಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತಪಟ್ಟ ವ್ಯಕ್ತಿಯ ಎತ್ತರ 5.5 ಇಂಚು ಗೋಧಿ ಮೈಬಣ್ಣ, ತಲೆಯಲ್ಲಿ ಒಂದೂವರೆ ಇಂಚು ಉದ್ದ ಕೂದಲು, ಕಪ್ಪು ಗಡ್ಡ, ದೃಢ ಕಾಯ, ದುಂಡು ಮುಖ ಬಲಭಾಗದ ಎದೆಯಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು ಇತ್ತು. ವ್ಯಕ್ತಿಯು ಕಂದು ಬಣ್ಣದ ಟಿಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಈತನ ಗುರುತು ಬಲ್ಲವರು ಬೆಳ್ತಂಗಡಿ ಪೊಲೀಸ್ ಠಾಣೆಯ 08256-232093/ 9480805370 ಸಂಖ್ಯೆಯನ್ನು ಸಂಪರ್ಕಿಸಬಹುದು.

Post Comment

ಟ್ರೆಂಡಿಂಗ್‌

error: Content is protected !!