ಮನೆ ಮೇಲೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ವಶ

ಬೆಳ್ತಂಗಡಿ : ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ಬಂದು ಮನೆಯ ಶೆಡ್ ನಲ್ಲಿ ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ದಾಳಿ ಮಾಡಿ ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಎಂಬವರ ಮನೆಯ ಶೆಡ್ ನಲ್ಲಿ ಅಕ್ರಮವಾಗಿ ಕೋವಿಯಿಂದ ಕಾಡು ಪ್ರಾಣಿ ಬೇಟೆಯಾಡಿ ತಂದು ಮಾಂಸ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿಕೊಂಡು ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 12 ರಂದು ರಾತ್ರಿ ದಾಳಿ ಮಾಡಿ ಜುಲೈ 13 ರಂದು ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ದಾಳಿ ವೇಳೆ ಬೇಟೆಯಾಡಿ ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಎಂಬಾತನಿಗೆ ಸೇರಿದ ರಕ್ತದ ಕಲೆಗಳಿದ್ದ KA-21-P-0345 ನಂಬರಿನ ಬಿಳಿ ಬಣ್ಣದ ಈಯೊನ್ ಕಾರು , ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರೇಜ್,ಒಂದು ಕತ್ತಿ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು. ಅರಣ್ಯಾಧಿಕಾರಿಗಳು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ಜುಲೈ 13 ರಂದು ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿದು ಬರಲಿದೆ.
ಒಂದು ಮಾಹಿತಿ ಪ್ರಕಾರ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಸುಮಾರು 20 ಮಂದಿಗೂ ಅಧಿಕ ಮಂದಿ ಬೇಟೆಗಾರರು ತಂಡದಲ್ಲಿದ್ದು ಈ ಕುಖ್ಯಾತ ಕಾಡು ಪ್ರಾಣಿ ಬೇಟೆಗಾರರ ತಂಡವು ತಾಲೂಕಿನ ಆಯ್ದ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಹೊಂಚು ಹಾಕಿ ಬೇಟೆಯಾಡುತ್ತಿದೆ.
ಬೇಟೆಗಾರರ ತಂಡವು ಪೂರ್ವ ಯೋಜಿತವಾಗಿ ಬಂಧೂಕು ಹೆಗಲಿಗೇರಿಸಿಕೊಂಡು ಹೆಡ್ ಲೈಟ್ ಸಿಕ್ಕಿಸಿಕೊಂಡು ನಿರ್ದಿಷ್ಟ ಪ್ರದೇಶದ ಅರಣಯದಂಚಿನಲ್ಲಿ ಹೊಂಚು ಹಾಕಿ ಬೇಟೆಯಾಡುತ್ತಿದೆ ಎಂದು ಹೇಳಲಾಗುತ್ತಿದೆ.
ತಂಡಲ್ಲಿ ಲೈಸೆನ್ಸ್ ಕೋವಿ ಹಾಗೂ ಅಕ್ರಮ ಕೋವಿ ಹೊಂದಿದ ವ್ಯಕ್ತಿಗಳೂ ಇದ್ದಾರೆ. ಇವರು ಕಳೆದ ಕೆಲವರ್ಷಗಳಿಂದ
ಅಕ್ರಮ ಬೇಟೆಯಲ್ಲಿ ನಿರತರಾಗಿದ್ದರು. ಈ ಒಂದು ತಿಂಗಳಲ್ಲಿ ಸುಮಾರು 30 ವಿವಿಧ ಜಾತಿಯ ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಬೇಟೆಗಾರರ ತಂಡದ ಸದಸ್ಯರು ರಾತ್ರಿಗಿಂತ ಹಗಲು ಹೊತ್ತೇ ಹೆಚ್ಚಾಗಿ ಬೇಟೆಯಲ್ಲಿ ತೊಡಗುವವರು. ಯಾವ ಕಡೆ ಕಾಡಿನಲ್ಲಿ ಹೋಗಿ
ಬೇಟೆಯಾಡಿದ್ರೂ ಗೇರುಕಟ್ಟೆಯ ಜೋಸ್ಸಿ ಅಲ್ವಿನ್ ಲೋಬೋ ಮನೆಯ ಶೆಡ್ ನಲ್ಲೇ ಮಾಂಸ ಮಾಡಿ ನಂಬಿಕಸ್ಥ ಪರಿಚಿತರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್.ಟಿ.ಎನ್ , ಡಿ.ಆರ್.ಎಫ್.ಒ ಸಂದೀಪ್, ರಾಘವೇಂದ್ರ,ಕಿರಣ್ ಪಾಟೀಲ್ , ಕಮಲ, ಬೀಟ್ ಫಾರೆಸ್ಟರ್ ಪರಶುರಾಮ್ ಮೇಟಿ , ಚಾಲಕ ದಿವಾಕರ್ ಭಾ















Post Comment