ಧರ್ಮಸ್ಥಳದಿಂದ ನಿಗೂಢ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ದ.ಕ. ಎಸ್.ಪಿ. ಗೆ ದೂರು

ಮಗಳ ಅಸ್ಥಿಪಂಜರ ಹುಡುಕಿ ಕೊಡಲು ಮನವಿ
ಬೆಳ್ತಂಗಡಿ : 2003ರಲ್ಲಿ ಧರ್ಮಸ್ಥಳದಿಂದ ನಿಗೂಢ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ಹಿರಿಯ ನಾಗರಿಕರಾದ ಸುಜಾತ ಭಟ್ ಅವರು ತಮ್ಮ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿ ಶವವಾಗಿರುವ ಕುರಿತು ಮತ್ತು ತಮ್ಮ ಮಗಳ ಅಸ್ತಿ ಪಂಜರ ಹುಡುಕಿ ಕೊಡುವಂತೆ ಒತ್ತಾಯಿಸಿ ಜುಲೈ 15ನೇ ಇಂದು ಮಂಗಳವಾರ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ.ಗೆ ದೂರು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಿರಿಯ ಸಂತ್ರಸ್ತೆ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
Post Comment