ಬಾಜಾರು : ದಂಪತಿ ಜಗಳ ಕೊಲೆಯಲ್ಲಿ ಅಂತ್ಯ

ಚೂರಿಯಿಂದ ಇರಿದು ಪತ್ನಿಯನ್ನು ಕೊಲೆಗೈದ ಪತಿ: ಅಟೋದವನ ಸಹವಾಸ : ಪತಿಯ ಸಂಶಯಕ್ಕೆ ಪತ್ನಿ ಬಲಿ!
ಬೀಡಿ ಬ್ರಾಂಚಿಗೆಂದು ಹೋದವಳು ಕಾಡಿನಿಂದ ಇಳಿದು ಬಂದಿದ್ದು ಹೇಗೆ?
ಬೆಳ್ತಂಗಡಿ : ಶೀಲ ಶಂಕಿಸಿ ಪತ್ನಿಯನ್ನು ಪತಿಯೇ ಚೂರಿಯಿಂದ ಇರಿದು ಕೊಲೆಗೈದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿನ ನಿವಾಸಿ ರಫೀಕ್ (45) ಎಂಬಾತನೇ ತನ್ನ ಪತ್ನಿ (38) ಝೀನತ್ ಎಂಬಾಕೆಯನ್ನು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ.
ಗುರುವಾರ ಬೆಳಿಗ್ಗೆ ಬೆಳಿಗ್ಗೆ ಮನೆಯಿಂದ ಬೀಡಿ ಬ್ರಾಂಚಿಗೆ ಹೋಗಿದ್ದ ಪತ್ನಿ ಝೀನತ್ ಹಾರೀಶ್ ಎಂಬಾತನ ಅಟೋ ರಿಕ್ಷಾದಲ್ಲಿ ಸುಮಾರು 9 ಗಂಟೆ ಹೊತ್ತಿಗೆ ವಾಪಾಸ್ ಮನೆಗೆ ಬರುತ್ತಿರುವುದನ್ನು ದಾರಿ ಮಧ್ಯೆ ನೋಡಿದ ಪತಿ ರಫೀಕ್
ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂದರ್ಭ ಪತ್ನಿ , ಪತಿ ಮಧ್ಯೆ ಜಗಳ ಉಂಟಾಗಿದೆ. ಜಗಳದ ಮಧ್ಯೆ ಅಟೋ ಚಾಲಕ ಹಾರೀಶ್ ಮೇಲೆ ರಫೀಕ್ ಹಲ್ಲೆಗೆ ಮುಂದಾಗಿದ್ದು ಪತ್ನಿ ಝೀನತ್ ಪತಿಯನ್ನು ದೂಡಿ ಹಾಕಿದ್ದು ಕಲ್ಲಿನ ಮೇಲೆ ಬಿದ್ದು ರಫೀಕ್ ಗಾಯಗೊಂಡಿದ್ದು
ಮನೆಗೆ ಬಂದ ಮೇಲೆ ಜಗಳ ಮುಂದುವರಿದಿದೆ.
ರಫೀಕ್ ಕೈಗೆ ಸಿಕ್ಕಿದ ಚೂರಿಯಲ್ಲಿ ಪತ್ನಿ ಮೇಲೆ ಚೂರಿಯಿಂದ ಎದೆಗೆ
ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಫೀಕ್ , ಝೀನತ್ 18 ವರ್ಷಗಳ ಹಿಂದೆ ಮದುವೆಯಾಗಿದ್ದು ತವರು ಉಪ್ಪಿನಂಗಡಿ ಸಮೀಪ ಬಾಜಾರ್ ಕ್ರಾಸ್ ಸಮೀಪ ಝೀನತ್ ತವರು ಮನೆ. ರಫೀಕ್ ಝೀನತ್ದಂ ಪತಿಗೆ 16 ವರ್ಷದ ಗಂಡು, 15.ವರ್ಷದ ಹೆಣ್ಣು ಸೇರಿ ಇಬ್ಬರು ಮಕ್ಕಳಿದ್ದಾರೆ.
ಘಟನೆಯ ವೇಳೆ ಗಾಯಗೊಂಡ ಆರೋಪಿ ರಫೀಕ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪತಿ ರಫೀಕ್ ಪತ್ನಿಯ ಝೀನತ್ ಮೇಲೆ ಸಂಶಯದಿಂದ ಜಗಳ ಮಾಡಿದ್ದು ಕೊಲೆಯಲ್ಲಿ ಅಂತ್ಯಗೊಂಡಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಹಾಯಕ ಅಧೀಕ್ಷಕ ರಾಜೇಂದ್ರ, ಇನ್ಸ್ಪೆಕ್ಟರ್ ರವಿ ಬಿ.ಎಸ್. ಎಸ್ ಐ ಅವಿನಾಶ್ ಘಟನಾ ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.
Post Comment