ಬೆಳ್ತಂಗಡಿಯಲ್ಲೊಂದು ಹಿಟಾಚಿ ‘ನಿಧಿ’ ಶೋಧ..!!

ಬೆಳ್ತಂಗಡಿಯಲ್ಲೊಂದು ಹಿಟಾಚಿ ‘ನಿಧಿ’ ಶೋಧ..!!

Share
IMG-20250718-WA0028-2-1001x1024 ಬೆಳ್ತಂಗಡಿಯಲ್ಲೊಂದು ಹಿಟಾಚಿ 'ನಿಧಿ' ಶೋಧ..!!

IMG-20250718-WA0028-1-1001x1024 ಬೆಳ್ತಂಗಡಿಯಲ್ಲೊಂದು ಹಿಟಾಚಿ 'ನಿಧಿ' ಶೋಧ..!!

ಬೆಳ್ತಂಗಡಿ : ಇಲ್ಲಿನ ನಗರ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಆಶ್ರಯ ಬಡಾವಣೆ ಬಳಿ ಬಡಾವಣೆಗೆ ಮೀಸಲಿಟ್ಟ ಸರಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಜೆಸಿಬಿ ಯಂತ್ರ ತಂದು ಅಲ್ಲಲ್ಲಿ ಅಗೆದು ಇಂಗು ಗುಂಡಿಯಂಥ ಗುಂಡಿ ತೋಡಿ ನಿಧಿ ಅಗೆದ ಕುತೂಹಲಕರ ಕಾನೂನುಬಾಹಿರ ಕೃತ್ಯ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ನಗರಪಂಚಾಯತ್ವ್ಯಾ ಪ್ತಿಯ ಬೆಳ್ತಂಗಡಿ ಕಸಬಾದ ರೆಂಕೆದಗುತ್ತು ಆಶ್ರಯ ಬಡಾವಣೆಗೊಳಪಟ್ಟ ಸರಕಾರಿ ಜಾಗದಲ್ಲಿ
ಸ್ಥಳೀಯ ನಿವಾಸಿಯೊಬ್ಬರು ಜೆಸಿಬಿ ಯಂತ್ರದ ಮೂಲಕ ಅಗೆದು, ಏನೇನೋ ಸಂಶಯಾಸ್ಪದ ವಾಮಾಚಾರ ಮಾಡಿ, ” ಓ.. ಕಾಳೀ… ಆನಂದ ಭೈರವಿ… ಗಡ ಗಡಾ….” ಎಂದೆಲ್ಲಾ ಮೈಮೇಲೆ ದೆವ್ವ ಬಂದಂತೆ ವಿಚಿತ್ರವಾಗಿ ಕಿರುಚಾಡುತ್ತಾ ನಿಧಿಗಾಗಿ ಶೋಧ ನಡೆಸಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ.
ಕೆಲವು ವರ್ಷಗಳ ಹಿಂದೆಯೂ ಇದೇ ರೀತಿ ಮಣ್ಣು ಅಗೆದು ಹುಡುಕಾಡಿದ್ದು ಇದೀಗ ಎರಡನೇ ಭಾರಿ ವಾಮಾಚಾರ ಸಹಿತ ನಾಟಕೀಯ ಪೂಜೆ ನಡೆಸಿ ಜೆಸಿಬಿಯಲ್ಲಿ ನಿಧಿ ಶೋಧ ನಡೆಸಿದ್ದು ರೆಂಕೆದಗುತ್ತು ಶಿವು ಎಂಬಾತನೇ ಜೆಸಿಬಿ ಯಂತ್ರದ ಮೂಲಕ ನಿಧಿಗಾಗಿ ಅಗೆಸಿದ ವ್ಯಕ್ತಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯವಾಗಿ ಕುತೂಹಲ ಮತ್ತು ಸಂಶಯಗಳಿಗೆ ಕಾರಣವಾಗಿದೆ.
ದಿನವಿಡೀ ನಡೆದ ಈ ಕೃತ್ಯದಲ್ಲಿ ಒಟ್ಟು ಐದು ಮಂದಿ ಭಾಗಿಯಾಗಿದ್ದು ಕೆಲವರು ಅಪರಿಚಿತರೂ ಇದ್ದರು. ಪೂಜೆ ಮತ್ತು ವಾಮಾಚಾರದ ಬಳಿಕ ನಡೆದ ನಿಗೂಢ ಕೃತ್ಯದ ಮೂಲಕ ನಿಧಿ ಅಪಹರಿಸಲಾಗಿದೆ, ಸಂಶಯದಿಂದ ವಿಚಾರಿಸಲು ಹತ್ತಿರ ಹೋದವರನ್ನು ದಬಾಯಿಸಿ ಕಳಿಸಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು ಈ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!