“
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳಗಾದ
ನೂರಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಿರುವ ಪ್ರಕರಣ ಕೊನೆಗೂ
ಹಲವಾರು ಸಂಘಟನೆಗಳ, ಹೋರಾಟಗಾರರ, ಸಂತ್ರಸ್ತರ ಬೇಡಿಕೆಗೆ ಮಣಿದ ಮಾನ್ಯ ಕರ್ನಾಟಕ ಸರ್ಕಾರವು
ರಾಜ್ಯ ಸರ್ಕಾರ
ಇಂದು ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ
ವಿಶೇಷ ತನಿಖಾ ತಂಡ (ಎಸ್.ಐ.ಟಿ.) ರಚಿಸಿ
ಜುಲೈ 19ನೇ ಭಾನುವಾರ
ಆದೇಶ ಹೊರಡಿಸಿದ್ದು
ಜುಲೈ 23ರಿಂದ ತನಿಖೆ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾದಂತೆ ಎಸ್ ಐ ಟಿ ತನಿಖಾ ತಂಡದಿಂದ ಯಾವ ಅಧಿಕಾರಿಯೂ ಹಿಂದೆ ಸರಿದಿಲ್ಲ ಎಂದು ಗೃಹಮಂತ್ರಿ ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳಗಾದ
ನೂರಾರು ಮೃತದೇಹಗಳನ್ನು ಹೂತಿರುವುದಾಗಿಯೂ ತನಗೆ ಸೂಕ್ತ ರಕ್ಷಣೆ ಕಾನೂನಾತ್ಮಕ ಸುರಕ್ಷತೆ ಒದಗಿಸಿದ್ರೆ
ಕಾನೂನು ಬಾಹಿರವಾಗಿ ದಫನ ಮಾಡಿರುವುದನ್ನು ತೋರಿಸುವುದಾಗಿಯೂ ವಕೀಲರ ಮೂಲಕ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದರು. ಮತ್ತು ಅಸ್ಥಿ ಪಂಜರವನ್ನು ಎಫ್ ಎಸ್ ಎಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದು ದೂರುದಾರಪರ ವಕೀಲರ ತಂಡ ತನಿಖೆಗೆ ಒತ್ತಾಯಿಸಿತ್ತು.
ಈ ಬಗ್ಗೆ ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಮಾಹಿತಿ ನೀಡಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿದ್ದು ಹೋರಾಟಗಾರರ,ವಕೀಲರ ತಂಡದ ಬೇಡಿಕೆಯಂತೆ ಸರಕಾರ ಸ್ಪಂದಿಸಿದ್ದು
ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ
ಎಸ್.ಐ.ಟಿ. ತಂಡ ರಚಿಸಿದೆ.
ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ
ಎಸ್.ಐ.ಟಿ.ಯಲ್ಲಿ
ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್, ಜಿತೇಂದ್ರ ಕುಮಾರ್ ದಯಾಮ, ಸೌಮ್ಯ ಲತಾ ಮುಂತಾದವರು ಕಾರ್ಯನಿರ್ವಹಿಸಲಿದ್ದಾರೆ.
ವಿಶೇಷ ತನಿಖಾ ಸಂಸ್ಥೆ (SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸ್ ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ರವರನ್ನು ಸರಕಾರ ನೇಮಿಸಿದ್ದು ಇಂದಿನಿಂದ ತನಿಖೆ ಆರಂಭವಾಗಲಿದ್ದು ತನಿಖೆಯ ಬಗ್ಗೆ ರಾಜ್ಯದ ಜನತೆಯಲ್ಲಿ ವ್ಯಾಪಕ ನಿರೀಕ್ಷೆ ಕುತೂಹಲ ಮೂಡಿದೆ.














Post Comment