ಬಂದಾರು : ಕುಂಟಾಲಪಲ್ಕೆ ಸರಕಾರಿ ಶಾಲಾ ನೂತನ ಶೌಚಾಲಯ ಉದ್ಘಾಟನೆ

ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಾರು ಗ್ರಾಮ ಪಂಚಾಯಿತ್ ವತಿಯಿಂದ ನಿರ್ಮಿಸಲ್ಪಟ್ಟ ಶಾಲಾ ನೂತನ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನೆರವೇರಿತು.
ನೂತನ ಶಾಲಾ ಶೌಚಾಲಯದ ಉದ್ಘಾಟನೆಯನ್ನು ಬಂದಾರು ಗ್ರಾಮ ಪಂಚಾಯಿತಿ ಸದಸ್ಯೆಯರಾದ ಭಾರತಿ ಕೋಡ್ಯೇಲು ಹಾಗೂ ಅನಿತಾ ಕುರುಡಂಗೆ ಇವರು ನೆರವೇರಿಸಿ ಸಭೆಯನ್ನು ಉದ್ದೇಶಿಸಿ
ಮಾತನಾಡುತ್ತಾ ಶಾಲಾ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಬಂದಾರು ಗ್ರಾಮ ಪಂಚಾಯಿತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿರುವ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ .ಡಿ.ಎಂ.ಸಿ. ಅಧ್ಯಕ್ಷರಾದ ಬಾಲಕೃಷ್ಣ ಗೌಡ ನೆಲ್ಲಿಗೇರು, ಉಪಾಧ್ಯಕ್ಷೆ ಲಲಿತಾ ಬದ್ಯಾರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕ ವೃಂದ, ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಜಯಪ್ರಕಾಶ್ , ಸಹ
ಶಿಕ್ಷಕಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡರು.














Post Comment