ದ.ಕ.ಜಿಲ್ಲೆಯ ಮರಳುದಾಸ್ತಾನನ್ನು ಅಭಿವೃದ್ಧಿ ಕಾಮಗಾರಿಗಳಿಗೆ
D.K. ಸ್ಯಾಂಡ್ ಬಜಾರ್ APP’
ಮೂಲಕ ಮರಳ ಪೂರೈಕೆಗೆ
ಅವಕಾಶ: ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಪ್ರಕಟಟಣೆ

‘
ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ-ಹೊರ ಜಿಲ್ಲೆಯ ಮರಳು ಸಾಗಾಟಕ್ಕೆ ನಿರ್ಬಂಧ
ಮಂಗಳೂರು : ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆರ್ ಝಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‌ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ‘DK SAND BAZAAR APP’ ಮೂಲಕ ಪೂರೈಸಲು ತೀರ್ಮಾನಿಸಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಪ್ರಕಟಟಣೆ ಬಿಡುಗಡೆಗೊಳಿಸಿದ್ದು ಜಿಲ್ಲೆಯ ಸಂಕಷ್ಟದಲ್ಲಿದ್ದ ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿಯಾಗಿದೆ.
ದ.ಕ. ಜಿಲ್ಲಾಧಿಕಾರಿಯವರು ಸೂಚಿಸಿರುವಂತೆ, ಸದರಿ ಮರಳನ್ನು ಸಾಗಾಟ ಮಾಡಲು ಇಚ್ಚಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ ‘DK SAND BAZAAR APP’ ನಲ್ಲಿ ನೋಂದಾಯಿಸಿಕೊಳ್ಳಲು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಲಾಗಿದೆ.
ಮಾರ್ಚ್ 16- 2025 ರಿಂದ DK SAND BAZAAR APP ಮುಖಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು Online ಮುಖಾಂತರ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
15 ಮರಳು ಬ್ಲಾಕ್‌ಗಳಲ್ಲಿ 3,30,405 ಮೆ.ಟನ್ ಪರಿಸರ ವಿಮೋಚನಾ ಪತ್ರದಲ್ಲಿ ಮರಳು ಗಣಿಗಾರಿಕೆ ಕಾರ್ಯಾಚರಿಸಲು ಲಭ್ಯವಿದ್ದು, ಪರಿಸರ ವಿಮೋಚನಾ ಪತ್ರದನ್ವಯ ಪ್ರತಿ ವರ್ಷ ಜೂನ್ 5 ರಿಂದ ಅಕ್ಟೋಬರ್ 15 ರವರೆಗೆ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧವಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ನಿಷೇಧವಿರುತ್ತದೆ. ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿರುವ ಒಟ್ಟು 27,550 ಮೆ.ಟನ್ ಗಳಲ್ಲಿ ಮಾರ್ಚ್ 2025ರಿಂದ ಇದುವರೆಗೆ 12,126 ಮೆ.ಟನ್ ಅನ್ನು ಬುಕಿಂಗ್ ಆಪ್ ಮುಖಾಂತರ ವಿತರಿಸಲಾಗಿದೆ. ಅಲ್ಲದೆ ಮರಳು ಗಣಿ ಗುತ್ತಿಗೆ ದಾಸ್ತಾನು ಕೇಂದ್ರದಲ್ಲಿ ಲಭ್ಯವಿರುವ 15,424 ಮೆ.ಟನ್ ಮರಳನ್ನು ಬುಕಿಂಗ್ ಮಾಡಲು dksandbazaar.com ವೆಬ್‌ಸೈಟ್‌ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ,
ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಹಾಗೂ Dk sand bazaar ಬುಕಿಂಗ್‌ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಇದ್ದಲ್ಲಿ ದೂರವಾಣಿ/ಮೊಬೈಲ್ ನಂ. 6364019555 ಅನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ. ಜಿಲ್ಲೆ ಇವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Post Comment