ಜಿ.ಎಸ್.ಟಿ. ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ ;ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಬಟಾ ಬಯಲು – ಶಾಸಕ ಹರೀಶ್ ಪೂಂಜ

ಜಿ.ಎಸ್.ಟಿ. ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ ;ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಬಟಾ ಬಯಲು – ಶಾಸಕ ಹರೀಶ್ ಪೂಂಜ

Share
IMG-20250504-WA0001 ಜಿ.ಎಸ್.ಟಿ. ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ ;ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಬಟಾ ಬಯಲು - ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಯೋಜನಾ ಬದ್ಧವಲ್ಲದ ಅವೈಜ್ಞಾನಿಕ ಗ್ಯಾರಂಟಿಗಳಿಂದ ತನ್ನ ಆಶ್ವಾಸನೆಯನ್ನು ಅನುಷ್ಠಾನಗೊಳಿಸಲಾಗದೆ ಇತ್ತ ದಿವಾಳಿಯಂಚಿಗೆ ತಲುಪಿದ ಆರ್ಥಿಕ ವ್ಯವಸ್ಥೆಯನ್ನು‌ ವಾಮ ಮಾರ್ಗದ ಮೂಲಕ ಬೀದಿ ಬದಿಯ ವ್ಯಾಪಾರಿಗಳಿಗೆ ಜಿ.ಎಸ್. ಟಿ ನೋಟಿಸ್ ಕಳುಹಿಸಿ ಭರ್ತಿ ಮಾಡಿಕೊಳ್ಳಲು ವಿಫಲ ಯತ್ನ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ನೋಟಿಸ್ ಅನ್ನು ಹಿಂಪಡೆದಿದ್ದನ್ನು ಗಮನಿಸಿದಾಗ ಶಾಲಾ ಪಠ್ಯ ಪುಸ್ತಕದಲ್ಲಿ ಓದಿದ ತುಘಲಕ್ ದರ್ಬಾರ್ ನ್ನು ನೆನಪಿಗೆ ತರುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಟೀಕಿಸಿದ್ದಾರೆ.

ಜಿ ಎಸ್ ಟಿ ಕಾಯ್ದೆಯ ಪ್ರಕಾರ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ ಎಂಬ ಅರಿವಿದ್ದರೂ, ಬೀದಿ ಬದಿಯ ವ್ಯಾಪಾರಿಗಳಿಗೆ ಸಣ್ಣ ವರ್ತಕರಿಗೆ ವಹಿವಾಟು ರೂ. 40 ಲಕ್ಷ ದಾಟಿದೆ ಎಂಬ ನೆಪದಲ್ಲಿ ಅವರ ಹೊಟ್ಟೆಗೆ ಹೊಡೆಯಲು ಯತ್ನಿಸಿ, ಶೇಕಡಾ 18ರಂತೆ ತೆರಿಗೆ, ಬಡ್ಡಿ, ದಂಡ ಇತ್ಯಾದಿಗಳನ್ನು ನಮೂದಿಸಿ ನಿಯಮ ಬಾಹಿರವಾಗಿ ನೋಟಿಸ್ ನೀಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ನಿಜ ಬಣ್ಣ ಈಗ ರಾಜ್ಯದ ಜನತೆಯ ಮುಂದೆ ಬಟಾಬಯಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಆರೋಪಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!