ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣ: ಎಸ್.ಐ.ಟಿ. ತನಿಖೆ ಆರಂಭ

ಡಿಐಜಿ ಅನುಚೇತ್ ಮುಂದೆ
ದೂರುದಾರನ ಹೇಳಿಕೆ ದಾಖಲು
ಬೆಳ್ತಂಗಡಿ : ಧರ್ಮಸ್ಥಳ ಸುತ್ತಮುತ್ತ ನೂರಾರು ಮೃತದೇಹ ಕಾನೂನು ಬಾಹಿರ ದಫನ ಪ್ರಕರಣದ ತನಿಖೆ ಅಧಿಕೃತವಾಗಿ ಇಂದು ಆರಂಭಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಭಾಗದಲ್ಲಿ ಅತ್ಯಾಚಾರ – ಕೊಲೆಯಾದ ನೂರಾರು ಮೃತದೇಹಗಳನ್ನು ಬಲವಂತಕ್ಕೆ ಮಣಿದು ಸ್ವಚ್ಛತಾ ಕಾರ್ಮಿಕ ಕಾನೂನುಬಾಹಿರವಾಗಿ
ಹೂತು ಹಾಕಿರುವ ಪ್ರಕರಣದ ಸಂಪೂರ್ಣ ತನಿಖೆ ಎಸ್ ಐ ಟಿ ಸುಪರ್ದಿಗೆ ವಹಿಸಲಾಗಿದ್ದು ಎಸ್ ಐ ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ದಯಾಮ ಅವರು ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸರಿಂದ ಕಡತವನ್ನು ಪಡೆದುಕೊಂಡ ಬೆನ್ನಲ್ಲೇ ಇಂದು ಶನಿವಾರ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಯಲ್ಲಿ ಧರ್ಮಸ್ಥಳ ಶವ ದಫನ ಪ್ರಕರಣದ ತನಿಖೆಗೆ ಅಧಿಕೃತ ಚಾಲನೆ ದೊರೆತಿದೆ.
ಡಿಐಜಿ ಎಂ.ಎಸ್ .ಅನುಚೇತ್ ಐಪಿಎಸ್ ಮುಂದೆ ದೂರುದಾರನ
ಪ್ರಾಥಮಿಕ ವಿಚಾರಣೆ ಆರಂಭಗೊಂಡಿದೆ.
Post Comment