ಎಸ್ಐಟಿ ತನಿಖಾಧಿಕಾರಿಗಳ ಮುಂದೆ ನಿರ್ಭೀತಿಯಿಂದ ಹೇಳಿಕೆ ದಾಖಲಿಸುತ್ತಿರುವ ಸ್ವಯಂಪ್ರೇರಿತ ಸಾಕ್ಷಿ ದೂರುದಾರ

ಎಸ್ಐಟಿ ತನಿಖಾಧಿಕಾರಿಗಳ ಮುಂದೆ ನಿರ್ಭೀತಿಯಿಂದ ಹೇಳಿಕೆ ದಾಖಲಿಸುತ್ತಿರುವ ಸ್ವಯಂಪ್ರೇರಿತ ಸಾಕ್ಷಿ ದೂರುದಾರ

Share
IMG_20250727_123845 ಎಸ್ಐಟಿ ತನಿಖಾಧಿಕಾರಿಗಳ ಮುಂದೆ ನಿರ್ಭೀತಿಯಿಂದ ಹೇಳಿಕೆ ದಾಖಲಿಸುತ್ತಿರುವ ಸ್ವಯಂಪ್ರೇರಿತ ಸಾಕ್ಷಿ ದೂರುದಾರ
IMG_20250727_123845-1 ಎಸ್ಐಟಿ ತನಿಖಾಧಿಕಾರಿಗಳ ಮುಂದೆ ನಿರ್ಭೀತಿಯಿಂದ ಹೇಳಿಕೆ ದಾಖಲಿಸುತ್ತಿರುವ ಸ್ವಯಂಪ್ರೇರಿತ ಸಾಕ್ಷಿ ದೂರುದಾರ

ಮಂಗಳೂರು : ಧರ್ಮಸ್ಥಳ ಸುತ್ತಮುತ್ತ ಕೆಲವು ವರ್ಷಗಳಿಂದ ನೂರಾರು ಶವಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಿದ
ಪ್ರಕರಣದ ಸ್ವಯಂ ಪ್ರೇರಿತ ಸಾಕ್ಷಿ ದೂರುದಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ ಸುಮಾರು 7.30ರವರೆಗೆ ನಿರ್ಭೀತಿಯಿಂದ
ಹೇಳಿಕೆ ದಾಖಲಿಸಿದ್ದು ಮೊದಲ ದಿನದ ಹೇಳಿಕೆ ದಾಖಲೀಕರಣ ಪ್ರಕ್ರಿಯೆ ಮುಗಿದಿದೆ.
ಎಸ್ ಐ ಟಿ ಅಧಿಕಾರಿಗಳ ಪೂರ್ವ ಸೂಚನೆಯಂತೆ
ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಕದ್ರಿ ಮಲ್ಲಿಕಟ್ಟೆ ಬಳಿ ಇರುವ ಎಸ್ ಐ ಟಿ ಕಚೇರಿಗೆ (ಒಬ್ಬರು ಮಹಿಳಾ ವಕೀಲರು ಹಾಗೂ ಒಬ್ಬರು ಪುರುಷ) ಇಬ್ಬರು ವಕೀಲರ ಜೊತೆಗೆ
ಹಾಜರಾಗಿದ್ದ ಮುಸುಕುಧಾರಿ ಸಾಕ್ಷಿ ದೂರುದಾರ ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಗೆ ಹಾಜರಾಗಿದ್ದು ಡಿಐಜಿ ಅನುಚೇತ್ ಹಾಗೂ ಜಿತೇಂದ್ರ ದಯಾಮ ಮತ್ತಿತರ ಎಸ್ ಐಟಿ ತನಿಖಾಧಿಕಾರಿಗಳ ಮುಂದೆ ತನ್ನ ಹೇಳಿಕೆಯನ್ನು ನೀಡಿದ್ದಾನೆ.
ಎಸ್ ಐ ಟಿ ತನಿಖಾಧಿಕಾರಿಗಳ ಮುಂದೆ ನೀಡಿರುವ
ಹೇಳಿಕೆಯ ಮಧ್ಯೆ ಧರ್ಮಸ್ಥಳ ಭಾಗದಲ್ಲಿ ಕೊಲೆ ಅಥವಾ ಅತ್ಯಾಚಾರಕ್ಕೊಳಗಾದ (ಅ)ಪರಿಚಿತ ಹೆಣ್ಣು ಮಕ್ಕಳ, ಮಹಿಳೆಯರ , ವ್ಯಕ್ತಿಗಳ ಶವಗಳನ್ನು ಕಾನೂನುಬಾಹಿರವಾಗಿ ದಫನ ಮಾಡಲು ದೂರುದಾರನಲ್ಲಿ ಸೂಚಿಸುತ್ತಿದ್ದ ವ್ಯಕ್ತಿಗಳ ಹೆಸರುಗಳು ಉಲ್ಲೇಖವಾಗಿದೆ ಎಂದು ಹೇಳಲಾಗುತ್ತಿದ್ದು ಮುಂದಿನ ಹಂತದ ತನಿಖೆ, ವಿಚಾರಣೆಗಳ ಬಳಿಕ ಹೇಳಿಕೆಯ ಸತ್ಯಾಸತ್ಯತೆ ನಿಖರವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಭಾಗದಲ್ಲಿ ಅತ್ಯಾಚಾರ – ಕೊಲೆಯಾದ ನೂರಾರು ಮೃತದೇಹಗಳನ್ನು ಬಲವಂತಕ್ಕೆ ಮಣಿದು ಸ್ವಚ್ಛತಾ ಕಾರ್ಮಿಕ ಕಾನೂನುಬಾಹಿರವಾಗಿ ಹೂತು ಹಾಕಿರುವ ಗಂಭೀರ ಪ್ರಕರಣದ ತನಿಖೆಯನ್ನು ಎಸ್ ಐ ಟಿ ಸುಪರ್ದಿಗೆ ವಹಿಸಲಾಗಿದ್ದು ಎಸ್ ಐ ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ದಯಾಮ ಅವರು ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸರಿಂದ ಕಡತವನ್ನು ಪಡೆದುಕೊಂಡಿದ್ದರು.
ಇದರ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಯಲ್ಲಿ ಧರ್ಮಸ್ಥಳ ಸಮೂಹ ಶವ ದಫನ ಪ್ರಕರಣದ ತನಿಖೆಗೆ ಅಧಿಕೃತ ಚಾಲನೆ ದೊರೆತಿದ್ದು ಡಿಐಜಿ ಎಂ.ಎಸ್ ಅನುಚೇತ್ ಐಪಿಎಸ್ ಮುಂದೆ ಸಾಕ್ಷಿ ದೂರುದಾರನ ಪ್ರಾಥಮಿಕ ವಿಚಾರಣೆ ಆರಂಭಗೊಂಡಿತ್ತು. ಇದೀಗ ಕಾನೂನು ಬಾಹಿರ ಶವ ದಫನ ಪ್ರಕರಣಕ್ಕೆ ಸಂಬಂಧಿಸಿದ ಎಸ್ ಐ ಟಿ ತನಿಖೆಯ ಮೊದಲ ದಿನದ ಹೇಳಿಕೆ ದಾಖಲೀಕರಣ ಪ್ರಕ್ರಿಯೆಯು ಮುಗಿದಿದ್ದು ಇನ್ನಷ್ಟು ಆಯಾಮದ ತನಿಖೆ ಮುಂದುವರಿಯಲಿದೆ. ಮೊದಲ ಹಂತದ ಹೇಳಿಕೆ ಪಡೆದ ಬಳಿಕ ಎಸ್ ಐ ಟಿ ಅಧಿಕಾರಿಗಳು ದೂರುದಾರನನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಎಸ್ ಐ ಟಿ ತನಿಖಾಧಿಕಾರಿಗಳು ದಿನವಿಡೀ ಸುಮಾರು 8 ಗಂಟೆಗ‌ಳ ಕಾಲ ದೂರುದಾರನಿಂದ
ಹೇಳಿಕೆ ದಾಖಲಿಸಿಕೊಂಡಿದ್ದು ಪ್ರಕ್ರಿಯೆ ಮುಗಿದ ‌ಬಳಿಕ
ಎಸ್ ಐ ಟಿ ವಶಕ್ಕೆ ಪಡೆಯದ ಕಾರಣ ದೂರುದಾರನನ್ನು ವಕೀಲರು ಮತ್ತೆ ರಹಸ್ಯ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!