ಎಸ್ಐಟಿ ಮುಂದೆ ಎರಡನೇ ದಿನದ ಹೇಳಿಕೆ ಮುಗಿಸಿದ ದೂರುದಾರ

ಬೆಳ್ತಂಗಡಿ : ಧರ್ಮಸ್ಥಳ ಸುತ್ತಮುತ್ತ ಹಲವಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ಮತ್ತು ರಹಸ್ಯವಾಗಿ ದಫನ ಮಾಡಿದ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಡಾ. ಪ್ರಣವ್ ಕುಮಾರ್ ಮೊಹಾಂತಿ ಇಂದು ಜಿಲ್ಲೆಗೆ ಆಗಮಿಸಿದ್ದು ತನಿಖೆ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿದೆ.
ಪ್ರಣವ್ ಕುಮಾರ್ ಮೊಹಾಂತಿ ಅವರು ಮಂಗಳೂರು ಎಸ್ ಐ ಟಿ ಕಚೇರಿಯಲ್ಲಿ ಇತರ ತನಿಖಾಧಿಕಾರಿಗಳ ಸಮಕ್ಷಮ ಪ್ರಕರಣದ ದೂರುದಾರನ ಎರಡನೇ ದಿನದ ಹೇಳಿಕೆ ಆಲಿಸಿದರು.
ಈ ಮಧ್ಯೆ ಮಂಗಳೂರಿನಿಂದ ಎಸ್.ಐ.ಟಿ. ಅಧಿಕಾರಿ ರಾಜ್ ಕುಮಾರ್ ಸಹಿತ ಅಧಿಕಾರಿಗಳ ತಂಡವೊಂದು ಭಾನುವಾರ ಸಂಜೆ ಬೆಳ್ತಂಗಡಿಗೆ ಆಗಮಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿ ಎಸ್ ಐ ಟಿ ಕಚೇರಿಗಾಗಿ ಗುರುತಿಸಲಾದ ಹೊಸ ಪೊಲೀಸ್ ವಸತಿ ಗೃಹ ಕಟ್ಟಡವನ್ನು ಪರಿಶೀಲನೆ ನಡೆಸಿದೆ.
ಬೆಳ್ತಂಗಡಿಗೆ ಆಗಮಿಸಿದ ಎಸ್ ಐ ಟಿ ಅಧಿಕಾರಿಗಳ ತಂಡ ಹೊಸದಾಗಿ ಎಸ್ ಐ ಟಿ ಕಾರ್ಯಾಲಯ ತೆರೆಯಲು ಉದ್ದೇಶಿಸಿರುವ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
ಇಲ್ಲಿನ ಹೊಸ ಪೊಲೀಸ್ ವಸತಿ ಗೃಹದ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಡೆದು ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಪೊಲೀಸ್ ವಸತಿ ಗೃಹ ಕಟ್ಟಡದ ಕೊಠಡಿಗಳಲ್ಲಿ ಎಸ್.ಐ.ಟಿ. ಕಚೇರಿ ತೆರೆಯಲು ಗುರುತಿಸಲಾಗಿದ್ದು ಪರಿಶೀಲನೆ ಮಾಡಲು ಮಂಗಳೂರಿನಿಂದ ಎಸ್.ಐ.ಟಿ ಸಬ್ ಇನ್ಸೆಕ್ಟರ್ ರಾಜ್ ಕುಮಾರ್ ಸೇರಿ ಇಬ್ಬರು ಅಧಿಕಾರಿಗಳ ತಂಡ ಟಿಟಿ ವಾಹನದಲ್ಲಿ ಜುಲೈ 27ರಂದು ಸಂಜೆ 5 ಗಂಟೆಗೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
Post Comment