ಧರ್ಮಸ್ಥಳ ರಹಸ್ಯ ದಫನ ಸ್ಥಳ ಮಹಜರು ಆರಂಭ : ನೇತ್ರಾವತಿ ಸ್ನಾನಘಟ್ಟದಲ್ಲೇ ಮೊದಲ ಮಹಜರು!

ಮಂಗಳೂರು : ಧರ್ಮಸ್ಥಳ ರಹಸ್ಯ ದಫನ ಪ್ರಕರಣದಲ್ಲಿ ಸಂಚಲನ ಮೂಡಿಸಿದ ಅನಾಮಿಕ ದೂರುದಾರನನ್ನು ಧರ್ಮಸ್ಥಳ ಸುತ್ತಮುತ್ತಲಿನ ಸಮಾಧಿ ಸ್ಥಳ ಮಹಜರಿಗಾಗಿ ಇಂದು ಸುಮಾರು 12 ಗಂಟೆ ಹೊತ್ತಿಗೆ ಎಸ್ ಐ ಟಿ ತನಿಖಾ ತಂಡ ಕರೆದುಕೊಂಡು ಬಂದಿದ್ದು ದೂರುದಾರ ಇಲ್ಲಿನ ನೇತ್ರಾವತಿ ಸ್ನಾನಘಟ್ಟದಲ್ಲಿ ಮೊದಲ ಸಮಾಧಿಯನ್ನು ತೋರಿಸಿದ್ದು ಎಸ್ ಐಟಿ ತನಿಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಧರ್ಮಸ್ಥಳ ನೂರಾರು ನಿಗೂಢ ಸಮಾಧಿ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದು ಇಂದು ಧರ್ಮಸ್ಥಳ ಶವ ದಫನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ದಿಷ್ಟ ಅರಣ್ಯ ಪ್ರದೇಶ ಮತ್ತು ಸರಕಾರಿ ಜಾಗದಲ್ಲಿ ನಡೆಯಲಿರುವ ಪ್ರಕರಣದ ಇನ್ನಷ್ಟು ನಿರ್ಣಾಯಕ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಎಸ್‌ಐಟಿ ತನಿಖಾಧಿಕಾರಿಗಳು ಬೆಳ್ತಂಗಡಿಯ ಕಂದಾಯ ಮತ್ತು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಇಂದು ಬೆಳಿಗ್ಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿ ವಠಾರದಲ್ಲಿ ಮೂರು ಡಿಎಆರ್ ತುಕಡಿಗಳು ಜಮಾಯಿಸಿತ್ತು. ಬೆಳ್ತಂಗಡಿಯ ಎಸ್‌ಐಟಿ ಕಚೇರಿ ಎದುರು, ಗರುಡ, ಸೇನಾ ಪಡೆ ಹಾಗೂ ಪುಂಜಾಲಕಟ್ಟೆ, ವೇಣೂರು, ಧರ್ಮಸ್ಥಳ ಪೊಲೀಸರನ್ನೊಳಗೊಂಡ ಬಿಗಿ ಭದ್ರತಾ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಮೊದಲಿಗೆ ನೇತ್ರಾವತಿ ಸ್ನಾನಘಟ್ಟದ ಬಳಿ ಪರಿಶೀಲನೆ ನಡೆಸಿದ ಎಸ್ ಐ ಟಿ ಅಧಿಕಾರಿಗಳು ದೂರುದಾರ ನೀಡಿದ ಮಾಹಿತಿಯಂತೆ ಆತನನ್ನು ಸ್ನಾನಘಟ್ಟದ ಪರಿಸರದ ಕಾಡಿನೊಳಗೆ ಕರೆದೊಯ್ದಿದ್ದು ಪರಿಶೀಲನೆ ನಡೆಸಿದ್ದಾರೆ.
Post Comment