ಧರ್ಮಸ್ಥಳ ಸರಣಿ ದಫನ ಪ್ರಕರಣ:

ಅಸ್ಥಿಪಂಜರ ಪತ್ತೆಯಾದ ಬೆನ್ನಲ್ಲೇ ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷನ ‘ಬುರುಡೆ’ ಗರನೆ ಗರ ಗರನೆ ತಿರುಗಿದ್ದೇಕೆ..?
ಬೆಳ್ತಂಗಡಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತು ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿರುವ ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖೆ ಮತ್ತು ಸಮಾಧಿ ಶೋಧ ಕಾರ್ಯ ಆರಂಭವಾಗಿ ದೂರುದಾರ ‘ಧೀರ’ ತೋರಿಸಿದ ಸಮಾಧಿ ಸ್ಥಳ ಸಂಖ್ಯೆ 6ರಲ್ಲಿ ಅಸ್ಥಿಪಂಜರ ಪತ್ತೆಯಾದ ಬೆನ್ನಲ್ಲೇ ಸುತ್ತ ಮುತ್ತಲಿನ ಕೆಲವು ನಿರೀಕ್ಷಿತ ಬುರುಡೆಗಳು ಗರನೆ… ಗರ ಗರನೆ… ತಿರುಗಲಾರಂಭಿಸಿದ್ದು ಹಲವು ಅನುಮಾನ ಮತ್ತು ಪ್ರಶ್ನೆಗಳನ್ನು ಸಹಜವಾಗಿ ಹುಟ್ಟು ಹಾಕಿದೆ.
ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣದ ವಿವಿಧ ಆಯಾಮಗಳ ತನಿಖೆಯು ಎಸ್.ಐ.ಟಿ. ಮುಖ್ಯಸ್ಥ ಡಾ.ಪ್ರಣವ್ ಕುಮಾರ್ ಮೊಹಾಂತಿ ಅವರ ನೇತೃತ್ವದಲ್ಲಿ ಮಹತ್ವದ ಘಟ್ಟ ತಲುಪಿದ್ದು ಪ್ರಕರಣವು ಸವಾಲುಗಳನ್ನು ದಾಟಿ ತಾರ್ಕಿಕ ಅಂತ್ಯ ಕಾಣುವ ಬಗ್ಗೆ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎನ್ನಲಾಗುತ್ತಿದೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಅವರು ಗ್ರಾಮಪಂಚಾಯತ್ ಆಡಳಿತಾವಧಿಯ ಸಾಧನೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪತ್ರಿಕಾ ಗೋಷ್ಠಿಯೊಂದನ್ನು ಕರೆದಿದ್ದು ಈ ಸಂದರ್ಭ “ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ, ರಕ್ಷಣೆ ಮತ್ತು ಕಾನೂನು ಸುರಕ್ಷತೆ ಕೊಟ್ಟಲ್ಲಿ ಹೂತು ಹಾಕಿರುವ ಸಮಾಧಿಗಳನ್ನು ತೋರಿಸುತ್ತೇನೆ ‘!
ಎಂದು ಎಸ್.ಪಿ. ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬನ ದೂರು ನೀಡಿದ್ದಾರೆ, ಈ ಬಗ್ಗೆ ಏನು ಹೇಳುತ್ತಿರಿ? ಎಂದು ಮಾಧ್ಯಮದವರು ಪ್ರಶ್ನಿಸಿದ್ದರು.
ಈ ಬಗ್ಗೆ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ ರಾವ್ ” ಶವಗಳನ್ನು ಸ್ಮಶಾನದಲ್ಲಿ ಹೂತ ಬಗ್ಗೆ ನಮ್ಮಲ್ಲಿ ಸೂಕ್ತ ದಾಖಲೆ ಇದೆ,” ಎಂದಿದ್ದರು.
ಶವಗಳ ಅಂತ್ಯ ಸಂಸ್ಕಾರಕ್ಕೆ ಗ್ರಾ.ಪಂ. ವಿನಿಯೋಗಿಸಿದ ಖರ್ಚುಗಳ ಅಂಕಿ ಅಂಶವನ್ನು ಪತ್ರಿಕಾ ಹೇಳಿಕೆಯಲ್ಲಿ ನಮೂದಿಸಿದ್ದು ಅನಾಮಿಕನ ದೂರನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಕ್ರಿಯೆ ನೀಡಿದ್ದರು.
ಸ್ಮಶಾನ ನಿರ್ಮಾಣವಾಗುವುದಕ್ಕೆ ಮೊದಲು ಶವಗಳನ್ನು ಯಾವ ಜಾಗದಲ್ಲಿ ದಫನ ಮಾಡುತ್ತಿದ್ದಿರಿ? ಎಂಬ ಮಾಧ್ಯಮದವರ ಪ್ರಶ್ನೆಗೆ
ಸ್ಮಶಾನ ಆಗುವ ಮೊದಲು ಶವಗಳನ್ನು ಕಾಡಿನಲ್ಲಿ ಹೂತು ಹಾಕುತ್ತಿದ್ದೆವು..” ಎಂಬುದಾಗಿ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ ರಾವ್ ಉತ್ತರಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ಹೇಳಿಕೆಯೂ ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣದ ಎಸ್ ಐ ಟಿ ತನಿಖೆಯಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀಶ್ರೀನಿವಾಸ್ ರಾವ್ ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ಹೇಳಿಕೆಗಿಂತಲೂ ಇದೀಗ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಧ್ಯಮಗಳಿಗೆ ನೀಡಿದ ಹೇಳಿಕೆಯೊಂದು ಗಂಭೀರವಾಗಿ ಪರಿಣಮಿಸುವ ಸಾಧ್ಯತೆ ಇದೆ.
ದೂರುದಾರ ಶವಗಳ ಚಿನ್ನ ಕದಿಯುತ್ತಿದ್ದ, ಅವನನ್ನು ಧರ್ಮಸ್ಥಳದಿಂದ ಓಡಿಸಲಾಗಿದೆ” ಎಂಬ ಹೇಳಿಕೆಯೊಂದು ಎಸ್.ಐ.ಟಿ. ತನಿಖಾ ತಂಡದ ಗಮನ ಸೆಳೆಯುವ ಅಥವಾ ವಿಚಾರಣೆಗೊಳಪಡುವ ಸಾಧ್ಯತೆಗಳು ಕಂಡು ಬರುತ್ತಿದೆ.
ಇಷ್ಟಕ್ಕೂ ವಕೀಲ, ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ನೀಡಿದ ಹೇಳಿಕೆಯಲ್ಲಿ ದೂರುದಾರನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
ಗ್ರಾ.ಪಂ. ಮಾಜಿ ಅಧ್ಯಕ್ಷ ದೂರುದಾರನ ವಿರುದ್ಧ ಗಂಭೀರ ಆರೋಪ ಹೊರಿಸಲು, ಬಲವಾದ ಕಾರಣವಾದರೂ ಏನು?
ಎಸ್ ಐ ಟಿ ತನಿಖೆ ತಮ್ಮ ಬುಡಕ್ಕೂ ಬರುತ್ತದೆಂಬ ಆತಂಕವೇ? ಇಷ್ಟಕ್ಕೂ ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷ ‘ಬುರುಡೆ’ ಬಿಡಲು ಕಾರಣವೇನು ? ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಇನ್ನೊಂದೆಡೆ ಅಂಬ್ಯುಲೆನ್ಸ್ ಚಾಲಕನೋರ್ವನ ಬಾಲಿಶ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಚರ್ಚೆಗೂ ಗ್ರಾಸವಾಗಿದೆ.
ಈತನ ಆತಂಕಕಾರಿ ಹೇಳಿಕೆ ಹೇಗಿದೆ ನೋಡಿ:
” ಧರ್ಮಸ್ಥಳದ ಯಾವುದೇ ಜಾಗದಲ್ಲಿ ಬುರುಡೆ ಅಥವಾ ಎಲುಬು ಏನಾದರೂ ಸಿಕ್ಕಲ್ಲಿ ನನ್ನ ಬುರುಡೆಯನ್ನು
ನನ್ನ ರುಂಡವನ್ನೇ ಕತ್ತರಿಸಿ ಅಲ್ಲಿ ಇಡುತ್ತೇನೆ…” ಎಂದು ಪ್ರತಿಜ್ಞೆ ಮಾಡುವ ರೀತಿಯಲ್ಲಿ ಅಂಬ್ಯುಲೆನ್ಸ್ ಚಾಲಕ
ಮಾಧ್ಯಮವೊಂದರ ಲೋಗೋ ಕ್ಯಾಮರಾ ಮುಂದೆ ಬೊಬ್ಬಿರಿದು ಬೈಟ್ ನೀಡಿದ್ದ . ಈತ ಮಾಧ್ಯಮಕ್ಕೆ ಹೇಳಿಕೆ ನೀಡಿದ ಬೆನ್ನಲ್ಲೆ ಸಮಾಧಿ ಸ್ಥಳ ಸಂಖ್ಯೆ 6ರಲ್ಲಿ ಬುರುಡೆ, ಎಲುಬುಗಳು ಪತ್ತೆಯಾಗಿದೆ..!!
ಈಗ ಅಂಬ್ಯುಲೆನ್ಸ್ ಚಾಲಕ jತಲೆಮರೆಸಿಕೊಂಡು ಅಂಬ್ಯುಲೆನ್ಸ್ ನಲ್ಲೇ ಓಡಾಡುವಂತಾಗಿದೆ ಎಂಬ ಸ್ವಾರಸ್ಯಕರ ಮಾತುಗಳು ನೇತ್ರಾವತಿ ತೀರದಿಂದ
ಕೇಳಿ ಬರುತ್ತಿದೆ.















Post Comment