ಧರ್ಮಸ್ಥಳ ಸಮೂಹ ದಫನ ಪ್ರಕರಣ : ಕಳೇಬರ ಶೋಧ ಕಾರ್ಯಾಚರಣೆಗೆ ಜಿ ಪಿ.ಆರ್. ರಾಡರ್ ಬಳಸುವಂತೆ ಸುಜಾತ ಭಟ್ ದೂರು ಪರ ವಕೀಲ ಮಂಜುನಾಥ್ ಎನ್ ಒತ್ತಾಯ

ಧರ್ಮಸ್ಥಳ ಸಮೂಹ ದಫನ ಪ್ರಕರಣ : ಕಳೇಬರ ಶೋಧ ಕಾರ್ಯಾಚರಣೆಗೆ ಜಿ ಪಿ.ಆರ್. ರಾಡರ್ ಬಳಸುವಂತೆ ಸುಜಾತ ಭಟ್ ದೂರು ಪರ ವಕೀಲ ಮಂಜುನಾಥ್ ಎನ್ ಒತ್ತಾಯ

Share
IMG_20250803_190440 ಧರ್ಮಸ್ಥಳ ಸಮೂಹ ದಫನ ಪ್ರಕರಣ : ಕಳೇಬರ ಶೋಧ ಕಾರ್ಯಾಚರಣೆಗೆ ಜಿ ಪಿ.ಆರ್. ರಾಡರ್ ಬಳಸುವಂತೆ ಸುಜಾತ ಭಟ್ ದೂರು ಪರ ವಕೀಲ ಮಂಜುನಾಥ್ ಎನ್ ಒತ್ತಾಯ

ಬೆಳ್ತಂಗಡಿ : ಧರ್ಮಸ್ಥಳದ ಅಪರಾಧ ಪ್ರಕರಣದಲ್ಲಿ ಸಾಕ್ಷಿ-ದೂರುದಾರ ಈಗಾಗಲೇ ತೋರಿಸಿ ಅಗೆಸಿರುವ ಸ್ಥಳಗಳಲ್ಲಿ GROUND PENETRATING RADAR ನ ಬಳಕೆ ಕೋರಿ‌ ಧರ್ಮಸ್ಥಳದಿಂದ ನಾಪತ್ತೆಯಾದ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ತಾಯಿ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಅವರು ಭಾನುವಾರ ಪತ್ರಿಕಾ ಪ್ರಕಟಣೆಯೊಂದನ್ನು‌ ಬಿಡುಗಡೆಗೊಳಿಸಿದ್ದಾರೆ.
ಇದುವರೆಗೆ ಸಾಕ್ಷಿ-ದೂರುದಾರ ತೋರಿರುವ 10 ಸ್ಥಳಗಳಲ್ಲಿ ಕೆಲವು ಸ್ಥಳದಲ್ಲಿ ಕಳೇಬರಗಳು ಪತ್ತೆಯಾಗಿರುತ್ತದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿರುತ್ತದೆ. ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿರುತ್ತಾನೆ. ಅಪಾರ ಮಳೆಯನ್ನು ಕಾಣುವ ಧರ್ಮಸ್ಥಳ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಹಾಗೂ ಸುಮಾರು 11ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟಿಕೊಂಡ ಗುರುತ್ತಿನಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
” ನಾವು ಈಗಾಗಲೇ ದಿನಾಂಕ 29-ಜುಲೈ-2025 ರಂದು ಮನವಿ ಮಾಡಿಕೊಂಡಂತೆ, ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ GROUND PENETRATING RADAR (ಗೌಂಡ್ ಪೆನೇಟ್ರೇಟಿಂಗ್ ರೇಡಾರ್) ಗಳನ್ನು ಬಳಸಿ ಈಗಾಗಲೇ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ.

ಹುಲ್ಲು ಕಡ್ಡಿಯನ್ನು ತೆರವುಗೊಳಿಸಲು ಬಳಸುವ ಯಂತ್ರದಷ್ಟು ಗಾತ್ರವಿರುವ GPR ಗಳನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸುವಂತೆ ಕೇಳಿಕೊಳ್ಳಲಾಗಿದೆ.

ಅತ್ಯುತ್ತಮ ತಂಡದ ನೆರವಿನೊಂದಿಗೆ SIT ಯು ಹೊರತೆಗೆಯುವ ಪ್ರಕ್ರಿಯೆಯ ಬಗ್ಗೆ ವಕೀಲ ಮಂಜುನಾಥ್ ಎನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶ್ರೀ ಪ್ರಣಬ್ ಮೊಹಂತಿಯವರ ನೇತೃತ್ವದ SIT ಯು GPR ಗಳನ್ನು ಅಳವಡಿಸುವುದೆಂಬ ನಿರೀಕ್ಷೆಯನ್ನು ಅನೇಕ ತಜ್ಞರು ಹೊಂದಿರುತ್ತಾರೆ. GPR ಗಳನ್ನು ನಿಯೋಜಿಸಲು SIT ಯವರಿಗೆ ಕರ್ನಾಟಕ ಸರ್ಕಾರ ಮತ್ತು ಸನ್ಮಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವಾಗುತ್ತಾರೆಂಬ ಅಚಲ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಸಮಾಧಿ ಶೋಧ ಕಾರ್ಯದಲ್ಲಿ GPR ಗಳನ್ನು ಉಪಯೋಗಿಸುವ ಕುರಿತು ಸರಕಾರ ಮತ್ತು ಎಸ್ ಐ ಟಿ‌ ಗಮನ ಸೆಳೆಯುವಂತೆ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಪತ್ರಿಕಾ ಪ್ರಕಟಣೆಯೊಂದನ್ನು‌ ಬಿಡುಗಡೆಗೊಳಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!