ಧರ್ಮಸ್ಥಳ ಸರಣಿ ದಫನ ಪ್ರಕರಣ : ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಶೋಧ ಕಾರ್ಯಾಚರಣೆ ಆರಂಭ


ಬೆಳ್ತಂಗಡಿ : ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಯ ಪ್ರಮುಖ ಭಾಗವಾಗಿರುವ ದೂರುದಾರ ಶವಗಳನ್ನು ಹೂತ ಸ್ಥಳವೆಂದು ಗುರುತಿಸಲಾದ ಸಂಖ್ಯೆ: 11ರಲ್ಲಿ ಸೋಮವಾರ ಸುಮಾರು 11 ಗಂಟೆ ಹೊತ್ತಿಗೆ
ಶೋಧ ಕಾರ್ಯಾಚರಣೆ ಆರಂಭಗೊಂಡಿದೆ.
11ನೇ ಸ್ಥಳಕ್ಕೆ ಎಸ್ ಐ ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದಿದ್ದು ಎಂದಿನಂತೆ ಇತರ ಇಲಾಖಾಧಿಕಾರಿಗಳು ಸಿಬ್ಬಂದಿಗಳ ಜೊತೆ ಆಗಮಿಸಿ
ಕಾರ್ಯಾಚರಣೆ ಆರಂಭಿಸಿತು.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಿಂದ ಸುಮಾರು 150 ಮೀಟರ್ ದೂರದಲ್ಲಿ ಹೆದ್ದಾರಿಯ ಬದಿಯಲ್ಲಿ ಸಾಲಾಗಿ ಗುರುತಿಸಲಾದ ಸ್ಥಳಗಳ ಪೈಕಿ ಸ್ಥಳ ಸಂಖ್ಯೆ 9-10ರಲ್ಲಿ ಶನಿವಾರ ಶೋಧ ನಡೆದಿದ್ದು ಅಗೆದ ಸಮಾಧಿಯಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.
ಇದೀಗ ಸೋಮವಾರ -11ರಲ್ಲಿ ಶನಿವಾರ ಅಗೆತ ಮತ್ತು ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಸ್ ಐ ಟಿ ಅಧಿಕಾರಿಗಳು , ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮುಂತಾದ ಸಂಬಂಧಪಟ್ಟ ವಿವಿಧ ಇಲಾಖಾಧಿಕಾರಿಗಳು ಕಾರ್ಯಾಚರಣೆ ಸ್ಥಳದಲ್ಲಿದ್ದಾರೆ.














Post Comment