ಧರ್ಮಸ್ಥಳದಲ್ಲಿ ಕರ್ತವ್ಯನಿರತ ಯೂಟ್ಯೂಬರ್ಸ್ ಮೇಲೆ ಗೂಂಡಾಗಿರಿ ಬೆನ್ನಲ್ಲೇ ಉಜಿರೆಯಲ್ಲಿ ನ್ಯೂಸ್ ಚಾನೆಲ್ ವರದಿಗಾರನ ಮೇಲೆ ದಾಳಿ : ಪ್ರಕರಣ ದಾಖಲು

ಬೆಳ್ತಂಗಡಿ : ಇಲ್ಲಿನ ಪಾಂಗಾಳ ತಿರುವು ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆಗೈದು ಅವರ ಕ್ಯಾಮೆರಾ ಮತ್ತು ವಾಹನಗಳಿಗೆ ಹಾನಿಗೊಳಿಸಿದ ಘಟನೆ ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದಿದ್ದು ಇದರ ಬೆನ್ನಲ್ಲೇ ಉಜಿರೆಯಲ್ಲಿ ನ್ಯೂಸ್ ಚಾನೆಲ್ ವರದಿಗಾರನ ಮೇಲೆ ಮತ್ತೊಂದು ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ‘ಕುಡ್ಲ ರ‍್ಯಾಂಪೇಜ್’ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರ ಮೇಲೆ ಹಲ್ಲೆ ನಡೆಸಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ಕಾರ್ಯಾಚರಣೆಯ ವರದಿ ಮಾಡಲು ತೆರಳಿದ್ದು ಇದೇ ವೇಳೆ ತಂಡವೊಂದು ದಾಳಿ ನಡೆಸಿದೆ. ಅಜಯ್ ಅಂಚನ್ ಅವರ ಜೊತೆಗೆ, ‘ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ‘ಕುಡ್ಲಾ ರಾಂಪೇಜ್’ ನ ಕ್ಯಾಮೆರಾ ಪರ್ಸನ್ ಮೇಲೆ ಹಲ್ಲೆ ನಡೆದಿದೆ.
ಬಳಿಕ ಉಜಿರೆಯಲ್ಲಿ ನ್ಯೂಸ್ ಚಾನೆಲ್ ವರದಿಗಾರರೊಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ದಾಳಿ ನಡೆಸಿದ ಕಿಡಿಗೇಡಿಗಳು ಯೂಟ್ಯೂಬರ್ಸ್
ಕ್ಯಾಮೆರಾಗಳನ್ನು ಪುಡಿಗೈದು ಅವರ ವಾಹನಗಳಿಗೆ ಹಾನಿಗೊಳಿಸಿದ್ದಾರೆ.
ಹಲ್ಲೆಗೊಳಗಾದ ಯೂಟ್ಯೂಬರ್ಸ್ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು ಹಲ್ಲೆಗೊಳಗಾದ ನಾಲ್ವರೂ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಸಂಜೆ ಧರ್ಮಸ್ಥಳ ಪಾಂಗಾಳ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಯೂಟ್ಯೂಬರ್ಸ್ ಮೇಲೆ ಮತ್ತು ಚಾನೆಲ್ ವರದಿಗಾರನ ಮೇಲೆ ಹಲ್ಲೆ ನಡೆಸಿ ಅವರ ಸೊತ್ತುಗಳಿಗೆ ಹಾನಿಗೊಳಿಸಿದವರ ಮೇಲೆ ಮತ್ತು ಪೊಲೀಸ್ ಠಾಣಾ ಆವರಣದಲ್ಲಿ ಹಾಗೂ ಆಸ್ಪತ್ರೆ ಮುಂದೆ ಕಾನೂನುಬಾಹಿರ ಗುಂಪು ಸೇರಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ
ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.















Post Comment