ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಬಂಗ್ಲೆಗುಡ್ಡದಲ್ಲಿ ಮೂಟೆ ಮೂಟೆ ಅಸ್ಥಿಪಂಜರ, ಮೂಳೆ ಪತ್ತೆಯಾಗಿದ್ದು ಹೇಗೆ?

ಬೆಳ್ತಂಗಡಿ : ಕಳೆದ ನಾಲ್ಕೈದು ದಿನಗಳ ಹಿಂದೆ ಹುಡುಕಿದ ಸ್ಥಳಗಳ ಪೈಕಿ ಕೆಲವು ವಿಶೇಷ ಸ್ಥಳಗಳ ಪೈಕಿ ಮಾನವರ ಹಲವು ಮೂಳೆ, ಹೆಣ್ಣು ಮಕ್ಕಳ ಅಸ್ಥಿ ಪಂಜರ, ಕೆಂಪು ಪಾಲಿಸ್ಟರ್ ಸೀರೆಯ ತುಂಡು ಮತ್ತಿತರ ಅವಶೇಷಗಳು ಪತ್ತೆಯಾಗಿದ್ದು ಇಡೀ ಪ್ರಕರಣವು ಹೊಸ ರೋಚಕ ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಯ ಪ್ರಮುಖ ಭಾಗವಾಗಿರುವ ದೂರುದಾರ,ಸಾಕ್ಷಿದಾರ ತಾನು ಶವಗಳನ್ನು ಹೂತ ಸ್ಥಳವೆಂದು ವಾರದ ಹಿಂದೆ ಗುರುತಿಸಿದ್ದು ಹೆದ್ದಾರಿಯ ಬದಿಯ ಸ್ಥಳ ಸಂಖ್ಯೆ: 11 ಮತ್ತು 12ರಲ್ಲಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಬೆಳಿಗ್ಗೆ ಸುಮಾರು 11.30ರ ಹೊತ್ತಿಗೆ 11ನೇ ಸ್ಥಳಕ್ಕೆ ಎಸ್ ಐ ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಹೋಗಿದ್ದು ಆ ಸ್ಥಳದಲ್ಲಿ ಹುಡುಕಾಟ ಕಾರ್ಯ ನಡೆಸದೆ ನೇರವಾಗಿ ಇಡೀ ತಂಡ ಸುಮಾರು 150 ಮೀ ದೂರದ
100 ಅಡಿ ಎತ್ತರದ ಬಂಗ್ಲೆಗುಡ್ಡದ ಬೇರೆಯೇ ಸ್ಥಳದಲ್ಲಿ ಮಹಜರು ನಡೆಸಿ ಕಳೇಬರ ಶೋಧ ಆರಂಭಿಸಿದ್ದರು.
ಎಸ್ ಐ ಟಿ ಅಧಿಕಾರಿಗಳು ಸೋಮವಾರ ಭೀಮನ ವಿನಂತಿಯಂತೆ ಈ ಹಿಂದೆ ಗುರುತಿಸಲಾದ ಸ್ಥಳ ಸಂಖ್ಯೆ : 11ಮತ್ತು 12ನೇ ಸ್ಥಳಗಳನ್ನು ಕೈಬಿಟ್ಟು ಬೇರೆಯೇ ಸವಾಲಿನ ಜಾಗಕ್ಕೆ ಹೋಗಿ ಶೋಧ ಆರಂಭಿಸಿದ್ದರು.
ಈ ಹಿಂದಿನಂತೆ ಶೋಧ ಸ್ಥಳದಲ್ಲಿ ಪಹರೆ ಹಾಕಿ ಮಧ್ಯಾಹ್ನ ಸುಮಾರು 2.30 ರಿಂದ 3 ಗಂಟೆ ಹೊತ್ತಿಗೆ ಊಟಕ್ಕೆ ಭೀಮನ ಸಹಿತ ಬರುತ್ತಿದ್ದ ಎಸ್ ಐಟಿ ತಂಡ ಸೋಮವಾರ ಊಟಕ್ಕೂ ಬರದೆ ಸವಾಲಿನ ತಾಳ್ಮೆ ಮತ್ತು ಸೂಕ್ಷ್ಮ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇವತ್ತು ಖಂಡಿತಾ ಏನೋ ಹೊಸ ಸಂಗತಿ ಇದೆ ಎಂಬ ಭರವಸೆಯಲ್ಲಿ ಮಾಧ್ಯಮದವರು ಮತ್ತು ಕುತೂಹಲದಿಂದ ಬೇರೆ ಬೇರೆ ಊರುಗಳಿಂದ ಧಾವಿಸಿ ಬಂದಿದ್ದ ನಾಗರಿಕರು ಕುತೂಹಲದಿಂದ ಹೆದ್ದಾರಿ ಬದಿಯಿಂದ ಕದಲದೆ ಕಾಡಿನಂಚಿನಲ್ಲಿ ಕಾಯುತ್ತಿದ್ದರು. ಮೊದಲ ದಿನದಲ್ಲಿ ಗುರುತಿಸಲಾದ ಸ್ಥಳ ಸಂಖ್ಯೆ 11ರಲ್ಲಿ ಯಾವುದೇ ಕಾರ್ಯ ಆರಂಭಿಸದೆ ಕಾಡಿನೊಳಗೆ ಹೋಗಿದ್ದ ಸುಮಾರು 30 ಮಂದಿಯ ಎಸ್ ಐ ಟಿ ತಂಡ 8 ಗಂಟೆಗಳ ಕಾರ್ಯಾಚರಣೆ ಮುಗಿಸಿ ದಟ್ಟ
ಕಾಡಿನಿಂದ ಹೊರಗೆ ಬರುವಾಗ 6ಗಂಟೆ ದಾಟಿತ್ತು.
ಇಷ್ಟಕ್ಕೂ ಸೋಮವಾರ ಸ್ಥಳ ಸಂಖ್ಯೆ 11 ಅನ್ನು ಕೈಬಿಟ್ಟು
ಬೇರೆಯೇ ಹೊಸ ಸ್ಥಳವನ್ನು ಅಧಿಕಾರಿಗಳು ಕಾರ್ಯಾಚರಣೆ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತಾ?
ಸೋಮವಾರ ಬೆಳಿಗ್ಗೆ ಭೀಮಾ ಎಸ್ ಐ ಟಿ ತಂಡದ ಅಧಿಕಾರಿಗಳಲ್ಲಿ ತಾನು ಮೊದಲನೇ ದಿನ ತೋರಿಸಿದ ಜಾಗಗಳಲ್ಲಿ ಆ ಟೇಪ್ ನ ಸುತ್ತಳತೆಗೆ ಮಾತ್ರ ಉತ್ಖನನವನ್ನು ಸೀಮಿತಗೊಳಿಸದೆ ಟೇಪ್ ನ ಸುತ್ತಮುತ್ತಲಿನ ಜಾಗದಲ್ಲೂ ಆತನ ಜೊತೆಗೆ ಉತ್ಖನನ ತಂಡಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದು ಇದಕ್ಕೆ ಎಸ್ ಐ ಟಿ ತಂಡವು ಒಪ್ಪಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ 11 ನೇ ಪಾಯಿಂಟ್ ನಲ್ಲಿ ಅಗೆಯುವ ಬದಲಿಗೆ, ಅಲ್ಲಿಂದ ಸುಮಾರು 100ರಿಂದ 150 ಮೀಟರ್ ದೂರಕ್ಕೆ 100 ಅಡಿ ಎತ್ತರದ ಬಂಗ್ಲೆಗುಡ್ಡೆಯನ್ನು ಸಾಹಸಮಯವಾಗಿ ಹತ್ತಿ ಏರಿದ್ದರು. ರಕ್ಷಿತಾರಣ್ಯ ಪ್ರದೇಶದ ಗುಡ್ಡವನ್ನು ಏರುವ ವೇಳೆ ತಂಡದಲ್ಲಿದ್ದ ಕೆಲವರು ಜಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಭೀಮಾ ತೋರಿಸಿದ ಜಾಗವನ್ನು ಅಗೆಸಿದಾಗ, ಉತ್ಖನನ ತಂಡವು ಹೆಂಗಸಿನ ಕಳೇಬರ ಮತ್ತು ಹರಿದ ಕೆಂಪು ಸೀರೆ ಕಂಡು ಬಂದಿದೆ.
ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರ, ಮೂಳೆಗಳನ್ನು ಉತ್ಖನದ ತಂಡವು ಸಂಗ್ರಹಿಸಿದ್ದು ಸುರಕ್ಷಿತವಾಗಿ ತುಂಬಿಸಿ ಸಂಗ್ರಹಿಸಿ ಸೀಲು ಹಾಕಿ ಎಫ್ ಎಸ್ ಎಲ್ ಮತ್ತಿತರ ಸಂಬಂಧಪಟ್ಟ ಇಲಾಖಾಧಿಗಳಿಗೆ ಕಳುಹಿಸಿ ಕೊಟ್ಟಿದ್ದಾರೆ.
ತನ್ನ ವಿನಂತಿಯಂತೆ ಸೋಮವಾರ ಎಸ್ ಐ ಟಿ ಮತ್ತು ಇಡೀ ಉತ್ಖನನ ತಂಡ ಪಟ್ಟ ಶ್ರಮಕ್ಕೆ ಭೀಮ ಸ್ಥಳದಲ್ಲೇ ಕೃತಜ್ಞತೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.















Post Comment