ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಸ್ಪಾಟ್ ನಂ: 13ರಲ್ಲಿ ಗ್ರೌಂಡ್ ಪೆನೇಟ್ರೇಟಿಂಗ್ ರಾಡರ್ ಕಾರ್ಯಾಚರಣೆ ಆರಂಭ


ದೂರುದಾರ ಭೀಮನಿಗೆ ಆನೆ ಬಲ ನೀಡುತ್ತಾ ಜಿ.ಪಿ.ಆರ್. ಯಂತ್ರ!?
ಬೆಳ್ತಂಗಡಿ : ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖೆಯ ಪ್ರಮುಖ ಭಾಗವಾಗಿರುವ ಸಮಾಧಿ ಶೋಧ ಕಾರ್ಯಕ್ಕೆ ಸಂಬಂಧಿಸಿ ಎಸ್ ಐ ಟಿ ಅಧಿಕಾರಿಗಳು ಡ್ರೋನ್ ಗೆ ಜಿ.ಪಿ.ಆರ್. (ಗ್ರೌಂಡ್ ಪೆನೇಟ್ರೇಟಿಂಗ್ ರಾಡರ್)
ಯಂತ್ರವನ್ನು ಅಳವಡಿಸಿ ಗುರುತು ಮಾಡಲಾದ ಸ್ಪಾಟ್ ನಂ 13ರಲ್ಲಿ ಪ್ರಾಯೋಗಿಕವಾಗಿ ಕಳೇಬರ ಶೋಧ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಎಸ್ ಐ ಟಿ ಕಾರ್ಯಾಚರಣೆ ತೀವ್ರ ಕುತೂಹಲ ಮೂಡಿಸಿದೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಸಮಾಧಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು ಸೋಮವಾರ ಮಧ್ಯಾಹ್ನ
ಸುಮಾರು 2:45 ಕ್ಕೆ ಈ ಹಿಂದೆ ದೂರುದಾರ ಗುರುತಿಸಿದ್ದ ಸ್ಪಾಟ್ ನಂ 13ರಲ್ಲಿ ಜಿ.ಪಿ.ಆರ್. ಯಂತ್ರದ ಮೂಲಕ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಿದ್ದು ಇಂದು ಸ್ಥಳದಲ್ಲಿ ದೂರುದಾರ ದಫನ ಮಾಡಿದ ಶವಗಳ ಕಳೇಬರಗಳನ್ನು ಪತ್ತೆ ಹಚ್ಚುವ
ಕಾರ್ಯ ಜಿ ಪಿ.ಆರ್. ಯಂತ್ರದಿಂದ ಯಶಸ್ವಿಯಾಗುತ್ತ ಎಂಬ ಕುತೂಹಲ ಮೂಡಿದೆ.
ಎಸ್.ಐ.ಟಿ ತಂಡ ಜಿ.ಪಿ.ಆರ್. ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಜಿ.ಪಿ.ಆರ್. ಯಂತ್ರದಿಂದ ಮುಂದಿನ ಹಂತದಲ್ಲಿ ಎನಡೆಯಲಿರುವ ಸಮಾಧಿ ಶೋಧ ಕಾರ್ಯಕ್ಕೆ ಪೂರ್ವ ಸಿದ್ಧತೆಗಳು ನಡೆದಿದೆ.
ಎಸ್ ಐ ಟಿ ಅಧಿಕಾರಿಗಳ ತಂಡದ ಸಮಕ್ಷಮ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಅಣೆಕಟ್ಟು ಬಳಿ ಜಿಪಿಆರ್ (ಗ್ರೌಂಡ್ ಪೆನೇಟ್ರೇಟಿಂಗ್ ರಾಡರ್) ಯಂತ್ರವನ್ನು 13ನೆಯ ಸ್ಥಳದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಿದ್ದು ಇಂದು ಸಮಾಧಿ ಪತ್ತೆ ಕಾರ್ಯ ಹಾಗೂ ಕಳೇಬರ ಶೋಧ ಕಾರ್ಯ ನಡೆಯಲಿದೆ. ಕಳೇಬರ ಪತ್ತೆ ಹಚ್ಚುವ ಕಾರ್ಯದ ಮೂಲಕ ಜಿ.ಪಿ.ಆರ್. ಯಂತ್ರ ದೂರುದಾರ ಭೀಮನನ್ನು ಕೈಹಿಡಿಯುತ್ತಾ ಎಂಬುದರ ಬಗ್ಗೆ ಭೀಮನ ವಿರೋಧಿಗಳು ಮತ್ತು ಬೆಂಬಲಿಗರು, ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.














Post Comment