ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಸ್ಪಾಟ್ ನಂ: 13ರಲ್ಲಿ ಎರಡನೇ ಸುತ್ತಿನ ಕಾರ್ಯಾಚರಣೆ

ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಸ್ಪಾಟ್ ನಂ: 13ರಲ್ಲಿ ಎರಡನೇ ಸುತ್ತಿನ ಕಾರ್ಯಾಚರಣೆ

Share
IMG_20250813_131111 ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ :                      ಸ್ಪಾಟ್ ನಂ: 13ರಲ್ಲಿ     ಎರಡನೇ ಸುತ್ತಿನ ಕಾರ್ಯಾಚರಣೆ

ಸ್ಪಾಟ್ ನಂ:13ರ ಸುತ್ತ ಎಲ್ಲರ ಚಿತ್ತ

ಬೆಳ್ತಂಗಡಿ : ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖೆಯ ಪ್ರಮುಖ ಭಾಗವಾಗಿರುವ ಸಮಾಧಿ ಶೋಧ ಕಾರ್ಯಕ್ಕೆ ಸಂಬಂಧಿಸಿ ಗುರುತು ಮಾಡಲಾದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸ್ಪಾಟ್ ನಂ 13ರಲ್ಲಿ ಬುಧವಾರ ಎರಡನೇ ಹಂತದ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಮಂಗಳವಾರ ಎಸ್ ಐ ಟಿ ಅಧಿಕಾರಿಗಳು ಡ್ರೋನ್ ಗೆ ಜಿ.ಪಿ.ಆರ್ . (ಗ್ರೌಂಡ್ ಪೆನೇಟ್ರೇಟಿಂಗ್ ರಾಡರ್) ಯಂತ್ರವನ್ನು ಅಳವಡಿಸಿ ಶೋಧ ನಡೆಸಿದರೂ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ, ಆದರೆ ಇದೀಗ ಮತ್ತೆ ದೂರುದಾರ ತೋರಿಸಿದಂತೆ ಇದೇ ಸ್ಥಳದ ಪಕ್ಕದಲ್ಲೇ ಎರಡು ಜೆಸಿಬಿಗಳ ಅಗೆದ ಕಾರ್ಯ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ಸಮೂಹ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ನಡೆಸಿದ ಜೆಸಿಬಿ ಕಾರ್ಯಾಚರಣೆಯಲ್ಲಿ ಸಂಜೆ ಸುಮಾರು 15 ಅಡಿ ಅಳದಷ್ಟು
7 ಗಂಟೆಗಳವರೆಗೂ ಅಗೆದು ಶೋಧ ನಡೆಸಲಾಗಿದ್ದು ಯಾವುದೇ ಅಸ್ಥಿಪಂಜರಗಳು ಪತ್ತೆಯಾಗದೆ ಕಾರ್ಯಾಚರಣೆಯ ಮುಕ್ತಾಯಗೊಂಡಿತ್ತು. ಬಳಿಕ ಗುಂಡಿಯನ್ನು ಮಣ್ಣು ತುಂಬಿ ಮುಚ್ಚಲಾಗಿತ್ತು.

ಸ್ಥಳದಲ್ಲಿ ದೂರುದಾರ ದಫನ ಮಾಡಿದ ಶವಗಳ ಕಳೇಬರಗಳನ್ನು ಪತ್ತೆ ಹಚ್ಚುವ ಕಾರ್ಯ ಜಿ ಪಿ.ಆರ್. ಯಂತ್ರದಿಂದ ಯಶಸ್ವಿಯಾಗುತ್ತದೆ ಮತ್ತು 13ನೇ ಸ್ಥಳದಲ್ಲು ಅನೇಕ ಶವಗಳನ್ನು ದೂರುದಾರ ಹೂತು‌ ಹಾಕಿದ ಕಾರಣ ಕಳೇಬರ ಪತ್ತೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನೊಳಗೊಂಡ ಎಸ್ ಐ ಟಿ ಅಧಿಕಾರಿಗಳ ತಂಡ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರ ಸಮಕ್ಷಮ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಅಣೆಕಟ್ಟು ಬಳಿ ಜಿಪಿಆ‌ರ್ (ಗ್ರೌಂಡ್ ಪೆನೇಟ್ರೇಟಿಂಗ್ ರಾಡರ್) ಯಂತ್ರವನ್ನು 13ನೆಯ ಸ್ಥಳದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿ ಮಂಗಳವಾರ ಮಧ್ಯಾಹ್ನ ಬಳಿಕ ಹಿಟಾಚಿ ಮೂಲಕ ಅಗೆತ ಕಾರ್ಯ ಆರಂಭಿಸಲಾಗಿತ್ತು. ಎರಡು ಜೆಸಿಬಿ, ಹಿಟಾಚಿಗಳಲ್ಲಿ ಸುಮಾರು 18 ಅಡಿ ಆಳ ಅಗೆದು ಶೋಧ ನಡೆಸಿದರೂ ಯಾವುದೇ ಕಳೇಬರ ಪತ್ತೆಯಾಗದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಜಿ.ಪಿ.ಆರ್. ಯಂತ್ರ ದೂರುದಾರ ಭೀಮನನ್ನು ಕೈಹಿಡಿಯುತ್ತಾ ಎಂಬುದರ ಬಗ್ಗೆ ಭೀಮನ ವಿರೋಧಿಗಳಲ್ಲಿ ಮತ್ತು ಬೆಂಬಲಿಗರಲ್ಲಿ ತೀವ್ರ ಕುತೂಹಲ ಮೂಡಿತ್ತು.
ಡಿಐಜಿ ಪ್ರಣವ್ ಕುಮಾರ್ ಮೊಹಾಂತಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮಹತ್ವದ 13ನೇ ಸಂಖ್ಯೆಯ ಸ್ಥಳದ ಸಮಾಧಿ ಶೋಧ ಕಾರ್ಯಕ್ಕೆ ಸಾಕ್ಷಿಯಾದರು. ದೂರುದಾರ ಗುರುತಿಸಿದ್ದ ಸ್ಪಾಟ್ ನಂ 13ರಲ್ಲಿ ಜಿ.ಪಿ.ಆರ್. ಯಂತ್ರದ ಮೂಲಕ ಶೋಧ ನಡೆಸಿ ಬಳಿಕ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸ್ಪಾಟ್ ನಂ 13ನ ಸುತ್ತ ಪರ-ವಿರೋಧವಾಗಿ ವ್ಯಾಪಕವಾಗಿ ನಡೆಯುತ್ತಿದ್ದ ಇದುವರೆಗಿನ ಚರ್ಚೆಗಳಿಗೆ
ತೆರೆ ಬೀಳಲಿದೆ.

Post Comment

ಟ್ರೆಂಡಿಂಗ್‌

error: Content is protected !!