ಧರ್ಮಸ್ಥಳ ಲಾಡ್ಜ್ ನಲ್ಲಿ ಕೊಲೆಯಾದ ಮಹಿಳೆ ಕೊಲೆ ಪ್ರಕರಣದ ತನಿಖೆಗೆ ಎಸ್ಐಟಿ ಗೆ ದೂರು ನೀಡಲು ಬಂದ ಹೋರಾಟಗಾರ ಜಯಂತ್ ಟಿ

ಬೆಳ್ತಂಗಡಿ : ಧರ್ಮಸ್ಥಳದ ಲಾಡ್ಜ್‌ನಲ್ಲಿ 30–40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹತ್ಯೆಗೊಳಗಾಗಿ ಪತ್ತೆಯಾದ ಪ್ರಕರಣದಲ್ಲಿ ಸಂಶಯಾಸ್ಪದ ಸಾವು ಅಥವಾ ನಿಗೂಢ ಅಸಹಜ ಸಾವು ಪ್ರಕರಣಗಳಲ್ಲಿ ಅನುಸರಿಸಬೇಕಾಗಿದ್ದ ಪೊಲೀಸ್ ಕಾನೂನಾತ್ಮಕ ಮಹಜರು ಪ್ರಕ್ರಿಯೆಗಳನ್ನು ಅನುಸರಿಸದೆ ಶವ ಪತ್ತೆಯಾದ ದಿನವೇ ದಫನ ಮಾಡಿರುವ ಗಂಭೀರ ಪ್ರಕರಣವೊಂದಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಜಯಂತ ಟಿ ಅವರು ಬೆಳ್ತಂಗಡಿ ಎಸ್ ಐ ಟಿ ಠಾಣೆಗೆ ಶನಿವಾರ ದೂರು ನೀಡಲು ಬಂದಿದ್ದಾರೆ.
2010ರ ಏಪ್ರಿಲ್ 6ರಂದು ರಂದು ನಿಗೂಢ ಕೊಲೆಯಾಗಿ ಧರ್ಮಸ್ಥಳ ವಸತಿ ಗೃಹದಲ್ಲಿ ಪತ್ತೆಯಾದ ಸಂಶಯಾಸ್ಪದ ಮೃತದೇಹವನ್ನು ದಫನಪೂರ್ವ ಮಹಜರು ಮತ್ತಿತರ ಕಾನೂನು ಪ್ರಕ್ರಿಯೆಗಳನ್ನು ನಡೆಸದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಹೋರಾಟಗಾರ ಜಯಂತ್ ಟಿ ದೂರು ನೀಡಲು ಮುಂದೆ ಬಂದಿದ್ದಾರೆ. ಆದರೆ ಇಂದು ಎಸ್ ಐ ಟಿ ಠಾಣೆಯಲ್ಲಿ ಸಂಬಂಧಪಟ್ಟ ಮೇಲಾಧಿಕಾರಿ ಇಲ್ಲದ ಕಾರಣ ಸೋಮವಾರ ದೂರು ಬರುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಹೋರಾಟಗಾರ ಜಯಂತ್ ಟಿ ಇದೀಗ ನೀಡಲಿರುವ ಹೊಸ ದೂರು ಮುಂದಿನ ಎಸ್ ಐ ಟಿ ತನಿಖೆಗೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.















Post Comment