ಧರ್ಮಸ್ಥಳ ಜೋಡಿ ಕೊಲೆ ಪ್ರಕರಣ : ಎಸ್ಐಟಿ ಗೆ ದೂರು ನೀಡಲು ಬಂದ ಆನೆ ಮಾವುತನ ಮಕ್ಕಳು

ಬೆಳ್ತಂಗಡಿ : 2012ರಲ್ಲಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಬೆಳಕಿಗೆ ಬಂದ ದ 21 ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಭೀಕರವಾಗಿ ನಡೆದ (ಆನೆ ಮಾವುತ ನಾರಾಯಣ ಮತ್ತು ಯಮುನಾ) ಜೋಡಿ ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ
ಆನೆ ಮಾವುತನ ಮಕ್ಕಳು ಸೋಮವಾರ ಎಸ್ ಐ ಟಿ ಠಾಣೆಗೆ ದೂರು ನೀಡಲು ಬಂದಿದ್ದು ಧರ್ಮಸ್ಥಳ ಠಾಣೆಗೆ ಮೊದಲು ದೂರು ನೀಡಿ ಬರುವಂತೆ ಎಸ್ ಐ ಟಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ ಐ ಟಿ ಕಚೇರಿಗೆ ಬಂದ ಗಣೇಶ ಮತ್ತು ಸಹೋದರಿ ಭಾರತಿ
ಅವರು ನಾರಾಯಣ ಮತ್ತು ಅವರ ತಂಗಿ ಯಮುನಾ ಎಂಬವರು 2012ರ ಸೆ 21ರಂದು ರಾತ್ರಿ ಕೆ.ಎಸ್.ಆರ್.ಟಿ.ಸಿ.
ಬಸ್ಸು ನಿಲ್ದಾಣದಲ್ಲಿ ಗಣೇಶೋತ್ಸವ ಪ್ರಯುಕ್ತ ನಡೆದ ನಾಟಕ ವೀಕ್ಷಿಸಿ ಸುಮಾರು ರಾತ್ರಿ 10ಗಂಟೆ ಹೊತ್ತಿಗೆ ತಮ್ಮ ಮನೆಗೆ ಬಂದಿದ್ದು ಅದೇ ರಾತ್ರಿ ನಿಗೂಢವಾಗಿ ಜೋಡಿ ಕೊಲೆ ನಡೆದಿದ್ದು ಇದೀಗ ಮೃತ ನಾರಾಯಣ ಅವರ ಮಕ್ಕಳು
ಎಸ್ ಐ ಟಿಗೆ ದೂರು ನೀಡಲು ಬಂದಿದ್ದಾರೆ.














Post Comment