ಧರ್ಮಸ್ಥಳ ಅಪಪ್ರಚಾರ ಪ್ರಕರಣ : ಸಮೀರ್ ಎಂ.ಡಿ. ಗೆ ನಿರೀಕ್ಷಣಾ ಜಾಮೀನು

ಬಂಧನದಿಂದ ಪಾರಾದ ‘ದೂತ’ ಯೂಟ್ಯೂಬರ್
ಬೆಳ್ತಂಗಡಿ : ಸೌಜನ್ಯ ಪ್ರಕರಣದ ಬಗ್ಗೆ ಸರಣಿ ವೀಡಿಯೋಗಳನ್ನು ಮಾಡಿ ದೇಶದ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ‘ದೂತ’ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಯೂಟ್ಯೂಬರ್ ಸಮೀರ್ ನನ್ನು ಬಂಧಿಸಲು ಹೋದ ಪೊಲೀಸರು ಆತನನ್ನು ಬಂಧಿಸಲು ವಿಫಲರಾಗಿದ್ದು ಇನ್ನೊಂದೆಡೆ ಸಮೀರ್ ಎಂ.ಡಿ. ಅವರಿಗೆ ಮಂಗಳೂರಿನ ನ್ಯಾಯಾಲಯವು
ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಯೂಟ್ಯೂಬರ್ ‘ದೂತ’ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂ.ಡಿ ಅವರಿಗೆ ಮಂಗಳೂರಿನ ನ್ಯಾಯಾಲಯವು ನಿರೀಕ್ಷಣಾ ಜಾಮಿನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.
ಸಮೀರ್ ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಆತನ ಮನೆಗೂ ಭೇಟಿ ನೀಡಿದ್ದು ಹೋದ ಸಂದರ್ಭ ಮನೆಯಲ್ಲಿ ಇಲ್ಲದ ಕಾರಣ ಸಮೀರ್ ನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದು ಸಮೀರ್ ಬಂಧನ ಭೀತಿಯಿಂದ ಪಾರಾಗಿದ್ದಾರೆ.














Post Comment