‘ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಬಗ್ಗೆ ನಿಂದನಾತ್ಮಕ ಹೇಳಿಕೆ’ ಪ್ರಕರಣ: ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗಾಗಿ ಉಡುಪಿ ಪೊಲೀಸರ ವಶಕ್ಕೆ

‘ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಬಗ್ಗೆ ನಿಂದನಾತ್ಮಕ ಹೇಳಿಕೆ’ ಪ್ರಕರಣ: ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗಾಗಿ ಉಡುಪಿ ಪೊಲೀಸರ ವಶಕ್ಕೆ

Share
IMG_20250821_141240 'ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಬಗ್ಗೆ ನಿಂದನಾತ್ಮಕ ಹೇಳಿಕೆ' ಪ್ರಕರಣ: ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗಾಗಿ ಉಡುಪಿ ಪೊಲೀಸರ ವಶಕ್ಕೆ

ಬೆಳ್ತಂಗಡಿ : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ಆರೋಪದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ, ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದು ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದಾರೆ.
ಬುಧವಾರ ಬಿ.ಎಲ್.ಸಂತೋಷ್ ಪ್ರಕರಣದಲ್ಲಿ ಹೇಳಿಕೆಗಾಗಿ ಠಾಣೆಗೆ ಹಾಜರಾಗುವಂತೆ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೋಟೀಸ್ ನೀಡಿದ್ದು 15 ದಿವಸದೊಳಗೆ ಹಾಜರಾಗುವುದಾಗಿ ಮಹೇಶ್ ಶೆಟ್ಟಿ ನೋಟೀಸ್ ಪ್ರತಿಯಲ್ಲಿ ಲಿಖಿತವಾಗಿ ಉತ್ತರ ನೀಡಿದ್ದರು. ಆದರೆ ಇದರ ಮರುದಿನವೇ ಅಂದರೆ ಇಂದು ಗುರುವಾರ ಬೆಳಿಗ್ಗೆ ದಿಢೀರ್ಉ ಡುಪಿ ಜಿಲ್ಲಾ ಎಡಿಷನ್ ಎಸ್ಪಿ ಸುಧಾಕ‌ರ್ ಹೆಗ್ಡೆ ನೇತೃತ್ವದಲ್ಲಿ ಪೊಲೀಸ್ ವಾಹನದಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಆಗಮಿಸಿದ್ದು ಅಚ್ಚರಿಗೂ ಸಂಶಯಕ್ಕೂ ಕಾರಣವಾಗಿದೆ. ಈ ಸಂದರ್ಭ ಮಹೇಶ್ ಶೆಟ್ಟಿ ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದಕ್ಕೂ ಕಾರಣವಾಯಿತು.
ಆ.16 ರಂದು ಮಹೇಶ ಶೆಟ್ಟಿ ತಿಮರೋಡಿ ಮಾಧ್ಯಮ ಸಂದರ್ಶನವೊಂದರಲ್ಲಿ ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕರ ಅಸ್ಪಷ್ಟ ನಿಲುವಿನ ಬಗ್ಗೆ ಉದ್ವೇಗದಿಂದ ಮಾತನಾಡುತ್ತಾ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ರಾಜೀವ ಕುಲಾಲ್ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2025 US 196 (1), 352, 353(2) BNS 03 ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದು ಕರೆದೊಯ್ದುದ್ದಾರೆ. ಅವರು ತಮ್ಮ ಖಾಸಗಿ ವಾಹನದಲ್ಲಿ ವಿಚಾರಣೆಗಾಗಿ ಬ್ರಹ್ಮಾವರ ಠಾಣೆಗೆ ತೆರಳಿದ್ದಾರೆ, ಪೊಲೀಸರು ಅಸ್ಕಾರ್ಟ್ ನೀಡುತ್ತಿದ್ದಾರೆ. ಅಚ್ಚರಿಯ ಸಂಗತಿಯೆಂದರೆ,
ನೋಟೀಸ್ ಸ್ವೀಕರಿಸಿದ ಸಂದರ್ಭ 15 ದಿನಗಳೊಳಗಾಗಿ
ಠಾಣೆಗೆ ಹಾಜರಾಗುವುದಾಗಿ ಲಿಖಿತ ಉತ್ತರ ನೀಡಲಾಗಿದ್ದರೂ ನೋಟೀಸ್ ಪಡೆದ ಮರುದಿನವೇ ಕೇವಲ ವಿಚಾರಣೆಗಾಗಿ ಕರೆದೊಯ್ಯಲು ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ 10-
15 ಪೊಲೀಸ್ ವಾಹನಗಳ ಮೂಲಕ ನೂರಾರು ಪೊಲೀಸರು ಧಾವಿಸಿದ್ದು ತೀವ್ರ ಕುತೂಹಲ ಮತ್ತು ಸಂಶಯಗಳನ್ನು ಮೂಡಿಸಿದೆ.

Post Comment

ಟ್ರೆಂಡಿಂಗ್‌

error: Content is protected !!