ಧರ್ಮಸ್ಥಳ : ಫೊಟೋಗೆ ಕೈಮುಗಿಯಲು ತಾಯಿ ಮನೆಗೆ ಹೋದಾಗ ನಾದಿನಿ, ಅತ್ತಿಗೆ ಮೇಲೆ ಮೈದುನನಿಂದ ಮಾರಣಾಂತಿಕ ಹಲ್ಲೆ.!

ಧರ್ಮಸ್ಥಳ : ಫೊಟೋಗೆ ಕೈಮುಗಿಯಲು ತಾಯಿ ಮನೆಗೆ ಹೋದಾಗ ನಾದಿನಿ, ಅತ್ತಿಗೆ ಮೇಲೆ ಮೈದುನನಿಂದ ಮಾರಣಾಂತಿಕ ಹಲ್ಲೆ.!

Share
IMG_20250825_135549 ಧರ್ಮಸ್ಥಳ : ಫೊಟೋಗೆ ಕೈಮುಗಿಯಲು ತಾಯಿ ಮನೆಗೆ ಹೋದಾಗ ನಾದಿನಿ, ಅತ್ತಿಗೆ ಮೇಲೆ ಮೈದುನನಿಂದ      ಮಾರಣಾಂತಿಕ ಹಲ್ಲೆ.!

ಬೆಳ್ತಂಗಡಿ : ತಂದೆ, ತಾಯಿ ಜೀವಿಸಿದ್ದ ಮನೆಗೆ ಹೋಗಿ ಅವರ ಫೊಟೋಗಳಿಗೆ ಕೈಮುಗಿದು ಬರಲು ಹೋದ ಸಂದರ್ಭ ಮೈದುನನೋರ್ವ ಮನೆಗೆ ಬಂದ ಇಬ್ಬರು ಅತ್ತಿಗೆಯರ ಮೇಲೆ ಮಾರಣಾಂತಿಕ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ ಘಟನೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ.

ಮುಂಬೈ ವಾಸ್ತವ್ಯವಿರುವ ವಾಣಿ ಯಾದವ್ ಹಾಗೂ ಅವರ ಅಕ್ಕ ಪ್ರವೀಣ ಕುಮಾರಿ ಎಂಬವರು ಆ10-2025ರಂದು ಪತಿ ಮತ್ತು ಮಗಳೊಂದಿಗೆ ಊರಿಗೆ ಬಂದಿದ್ದು ತಂಗಿ ಮನೆಗೆ ಹೋದಾಗ ಮೈದುನ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜಾಗದ ವಿವಾದದ ಪೂರ್ವದ್ವೇಷವೇ ಗಲಾಟೆಗೆ ಕಾರಣವೆಂದು ತಿಳಿದು ಬಂದಿದೆ. ಮುಂಬೈಯ ನ್ಯೂ ಮಿಸಿಟೋ ನಗರ ವಿದ್ಯಾಮಂದಿರ ಬಳಿ ನೆಲೆಸಿರುವ ವಾಣಿ ಯಾದವ್ ಎಂಬವರು ಆಗಸ್ಟ್13-2025ರಂದು ತಂದೆ ತಾಯಿಯ ಪೋಟೋ ಗೆ ಕೈಮುಗಿದು ಬರುವ ಎಂದು ಸಂಜೆ ಸುಮಾರು 05.50 ಗಂಟೆಗೆ ಅಕ್ಕನ ಮನೆಯಿಂದ ಮಗಳು ದೃತಿ ಹಾಗೂ ಅಕ್ಕ ಪ್ರವೀಣ ಕುಮಾರಿ ಜೊತೆಯಾಗಿ ನಡೆದುಕೊಂಡು ತಾಯಿಯ ಮನೆಯಾದ ದೊಂಡೊಲೆಗೆ ಹೋಗಿದ್ದು 06.00 ಗಂಟೆಗೆ ಮನೆಯ ಚಾವಡಿಗೆ
ಪ್ರವೇಶಿಸುತ್ತಿದ್ದಂತೆ ವಾಣಿ ಯಾದವ್ ಅವರ ಮೈದುನ (ತಂಗಿ ಗಂಡ) ಮನೋಹರ್ ಎಂಬಾತ ಅತ್ತಿಗೆಯನ್ನು ನೋಡಿ
“ನೀವು ಯಾಕೆ ಬಂದದ್ದು ನಿಮಗೆ ಇಲ್ಲಿ ಏನು ಕೆಲಸ ನಡೆಯಿರಿ ಹೊರೆಗೆ…”ಎಂದು ಹೇಳಿ ಅತ್ತಿಗೆಯ ಕೆನ್ನೆಗೆ ಹೊಡೆದಿದ್ದು ಆಗ ” ಇದು ನಮ್ಮ ಆಪ್ಪ, ಅಮ್ಮನ ಮನೆ, ನಾವು ಯಾಕೆ ಬರಬಾರದು?
ಎಂದು ಪ್ರಶ್ನಿಸಿದಾಗ ಮನೋಹರನು ಆಲಿಯೇ ಇದ್ದ ಕತ್ತಿಯನ್ನು ಎತ್ತಿಕೊಂಡು ತಂಗಿ ವಾಣಿ ಎಂಬವರಿಗೆ ಹಾಗೂ ಅಕ್ಕ ಪ್ರವೀಣ ಕುಮಾರಿ ಎಂಬವರನ್ನು ಉದ್ದೇಶಿಸಿ ನಿಮ್ಮಿಬ್ಬರನ್ನು ಕೊಯ್ಯದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿರುತ್ತಾರೆ. ಹಾಗೂ ತಂಗಿಯ ಮನೆಗೆ ಹೋದ ಸಂದರ್ಭ ನೀವು ಯಾಕೆ ಬಂದಿದ್ದಿರಿ ಹೊರಗೆ ಹೋಗಿ..” ಎಂದು ಸವಾರಿ ಮಾಡಲು ಮುಂದಾದ ಮನೋಹರ್ , ಅಲ್ಲಿಂದ ಹೋಗದೆ ಇದ್ದಾಗ ತಲೆಯನ್ನು ಹಿಡಿದು ಗೋಡೆಗೆ ಬಡಿದಿದ್ದು ಇದನ್ನು ತಡೆಯಲು ಬಂದ ಪಿರ್ಯಾದಿದಾರರ ಅತ್ಮ ಪ್ರವೀಣ ಕುಮಾರಿಯ ಎದೆಗೆ ಕೈಹಾಕಿ ದೌರ್ಜನ್ಯವೆಸಗಿದ್ದಾನೆ.

IMG_20250825_140207 ಧರ್ಮಸ್ಥಳ : ಫೊಟೋಗೆ ಕೈಮುಗಿಯಲು ತಾಯಿ ಮನೆಗೆ ಹೋದಾಗ ನಾದಿನಿ, ಅತ್ತಿಗೆ ಮೇಲೆ ಮೈದುನನಿಂದ      ಮಾರಣಾಂತಿಕ ಹಲ್ಲೆ.!


ಮನೆಯಿಂದ ಹೊರಗೆ ಹೋಗದೇ ಇದ್ದಾಗ ಸಿಟೌಟ್ ನಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಸೊಂಟದಿಂದ ಕೆಳಗೆ ಹೊಡೆದ ಪರಿಣಾಮ ನೋವು ತಾಳಲಾರದೆ ಬೊಬ್ಬೆ ಹೊಡೆದು ಅಲ್ಲಿಂದ ಹೊರಗೆ ಬಂದಿದ್ದಾರೆ. ಈ ಸಂದರ್ಭ ವಾಣಿ ಯಾದವ್ ಅವರ ಅಕ್ಕನಾದ ಪ್ರವೀಣ ಕುಮಾರಿ ಎಂಬವರಿಗೂ ರಾಡಿನಿಂದ ಹೊಡೆದಿರುತ್ತಾನೆ. ಹಲ್ಲೆಗೊಳಗಾದ ಸಹೋದರಿಯರಾದ ವಾಣಿ ಯಾದವ್ ಹಾಗೂ ಪ್ರವೀಣ ಕುಮಾರಿ ಇಬ್ಬರೂ ಮಂಜುನಾಥ ಎಂಬವರ ಕಾರಿನಲ್ಲಿ ಬೆಳ್ಳಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಗ್ಗೆ ಮಂಗಳೂರಿನ ವೆನ್ಲಾಕ್ ಸರಕಾರಿ 108 ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕಳಿಸಿಕೊಟ್ಟಿದ್ದು
ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಜಾಗದ ವಿವಾದಕ್ಕೆ ಸಂಬಂಧಿಸಿದ ಪೂರ್ವ ದ್ವೇಷವೇ ಹಲ್ಲೆಗೆ ಕಾರಣವಾಗಿರುತ್ತದೆ.
ಈ ಸಂದರ್ಭ , ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ ಕಬ್ಬಿಣದ ರಾಡಿನಿಂದ ಹಲ್ಲೆಗೈದು ಅಕ್ಕನಾದ ಪ್ರವೀಣ ಕುಮಾರಿ ಎಂಬವರ ಎದೆಗೆ ಕೈ ಹಾಕಿ ಹೊಡೆದು ದೂಡಿ ದೌರ್ಜನ್ಯವೆಸಗಿರುವ ಬಗ್ಗೆ ಮೈದುನ ಮನೋಹರ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.
ಘಟನೆಯ ಬಗ್ಗೆ U/S 157 Cr.PC provision (a)or (b)/176 (BNSS) ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!