ಮಹೇಶ್ ಶೆಟ್ಟಿ ‘ತಿಮರೋಡಿ’ಗೆ ಎಸ್.ಐ.ಟಿ. ರೈಡ್: ಮುಗಿಯದ ಶೋಧ-ಮಹಜರು!

ಬೆಳ್ತಂಗಡಿ : ನೂರಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಎಸ್.ಐ.ಟಿ. ತನಿಖೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಇದೀಗ ಎಸ್.ಐ.ಟಿ ಕಸ್ಟಡಿಯಲ್ಲಿರುವ ಬುರುಡೆ ತಂದ ಆರೋಪಿ ಮಂಡ್ಯದ ಚಿನ್ನಯ್ಯನಿಗೆ ಆಶ್ರಯ ನೀಡಿರುವ ಆರೋಪ ಹೊತ್ತ ಸಾಮಾಜಿಕ ಹೋರಾಟಗಾರ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ
ಮಂಗಳವಾರ (ಆ.26 ರಂದು) ಬೆಳಗ್ಗೆ 9:20 ಗಂಟೆಗೆ ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಧೀಶರಿಂದ
ಆ.25 ರಂದು ಸರ್ಚ್ ವಾರಂಟ್ ಪಡೆದುಕೊಂಡು
ಆರೋಪಿ ಚಿನ್ನಯ್ಯನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ದಾಳಿ ನಡೆಸಿದ್ದು ಚಿನ್ನಯ್ಯ ಆಶ್ರಯ ಪಡೆದಿದ್ದ ಕೋಣೆಯಲ್ಲಿ ಮಹಜರು ಪರಿಶೀಲನೆ ನಡೆಸಿದ್ದಾರೆ.
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಕಾನೂನುಬಾಹಿರವಾಗಿ ಹೂತಿರುವುದಾಗಿ ಹೇಳಿಕೆ ನೀಡಿದ್ದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ತಮ್ಮ ಉಜಿರೆಯ ತಿಮರೋಡಿ ನಿವಾಸದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಳೆದ ಕೆಲವು ಸಮಯಗಳಿಂದ ಅಶ್ರಯ ನೀಡಿದ್ದರು ಎಂಬ ಆರೋಪವಿರುವ ಹಿನ್ನೆಲೆಯಲ್ಲಿ ಕಾನೂನಾತ್ಮಕ ತನಿಖೆಗೆ ಇನ್ನಷ್ಟು ಸುಳಿವುಗಳು ಸಿಗಬಹುದೆಂಬ ಉದ್ದೇಶದಿಂದ ಎಸ್.ಐ.ಟಿ. ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುವ ಸಾಧ್ಯತೆ ಇದೆ.
ಚಿನ್ನಯ್ಯನಿಗೆ ಸಂಬಂಧಿಸಿದ ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆದಿದೆಯೇ ಅಥವಾ ಇಡೀ ತನಿಖೆ ಬೇರೆಯೇ ಆಯಾಮ ಪಡೆಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.














Post Comment