ಸಿಂಧನೂರು ಜೆ.ಎಂ.ಎಸ್. ರಾಜ್ಯ ಸಮ್ಮೇಳನದಲ್ಲಿ ಪ್ರತಿನಿಧಿಸಲಿರುವ ವೇದವಲ್ಲಿ, ಪದ್ಮಲತಾ, ಜೋಡಿ ಕೊಲೆ, ಸೌಜನ್ಯ ಪ್ರಕರಣ ಸ್ಥಳಗಳ ಮಣ್ಣು!

ಸಿಂಧನೂರು ಜೆ.ಎಂ.ಎಸ್. ರಾಜ್ಯ ಸಮ್ಮೇಳನದಲ್ಲಿ ಪ್ರತಿನಿಧಿಸಲಿರುವ ವೇದವಲ್ಲಿ, ಪದ್ಮಲತಾ, ಜೋಡಿ ಕೊಲೆ, ಸೌಜನ್ಯ ಪ್ರಕರಣ ಸ್ಥಳಗಳ ಮಣ್ಣು!

Share
IMG_20250830_082614-1 ಸಿಂಧನೂರು ಜೆ.ಎಂ.ಎಸ್. ರಾಜ್ಯ ಸಮ್ಮೇಳನದಲ್ಲಿ ಪ್ರತಿನಿಧಿಸಲಿರುವ ವೇದವಲ್ಲಿ, ಪದ್ಮಲತಾ, ಜೋಡಿ ಕೊಲೆ, ಸೌಜನ್ಯ ಪ್ರಕರಣ ಸ್ಥಳಗಳ ಮಣ್ಣು!

ಬೆಳ್ತಂಗಡಿ : ಆಗಸ್ಟ್ 30 ಮತ್ತು ಸೆಪ್ಟಂಬರ್ 1ರವರೆಗೆ
ಸಿಂಧನೂರಿನಲ್ಲಿ ನಡೆಯಲಿರುವ ಜನವಾದಿ ಮಹಿಳಾ ಸಂಘಟನೆ (ಜೆ.ಎಂ.ಎಸ್) ಕರ್ನಾಟಕ ರಾಜ್ಯ ಸಮ್ಮೇಳನ -2025 ಇದರ ಅಂಗವಾಗಿ ಸರಕಾರದ ಗಮನ ಸೆಳೆಯಲು‌ ಬೆಳ್ತಂಗಡಿ ತಾಲೂಕಿನ ಗಂಭೀರ ಅತ್ಯಾಚಾರ-ಕೊಲೆ ಪ್ರಕರಣಗಳೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಅನ್ಯಾಯ- ಅತ್ಯಾಚಾರ-ಕೊಲೆ-ದೌರ್ಜನ್ಯ ಮುಂತಾದ ಪ್ರಕರಣಗಳಲ್ಲಿ ಮಹಿಳೆಯರಿಗ ನ್ಯಾಯ ಒದಗಿಸುವಲ್ಲಿ ಸರಕಾರದ ಗಮನ ಸೆಳೆಯಲು ಜೆಎಂಎಸ್ ಕರ್ನಾಟಕ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಉಜಿರೆಯ ವೇದವಲ್ಲಿ, ಧರ್ಮಸ್ಥಳ ಪದ್ಮಲತಾ, ಧರ್ಮಸ್ಥಳ ನಾರಾಯಣ (ಆನೆ ಮಾವುತ) ಯಮುನಾ ಜೋಡಿ ಕೊಲೆ, ಸೌಜನ್ಯಾ ಅತ್ಯಾಚಾರ-ಕೊಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಇಂಥ ನೂರಾರು ಗಂಭೀರ ಪ್ರಕರಣಗಳಿಗೆ ಇಂದಿಗೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನ್ಯಾಯದಿಂದ ವಂಚಿತರಾಗಿ ನೊಂದ ಕುಟುಂಬಗಳಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸುವಲ್ಲಿ ಸರಕಾರದ ಗಮನ ಸೆಳೆಯಲು ಅನ್ಯಾಯ, ಅತ್ಯಾಚಾರ-ಕೊಲೆ, ದೌರ್ಜನ್ಯಗಳಿಗೆ ಬಲಿಯಾದ ಆಯಾ ‌ ಸಮಾಧಿ ಸ್ಥಳಗಳ ಮಣ್ಣುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೊಂದ ಕುಟುಂಬಗಳಿಂದ ಬೆಳ್ತಂಗಡಿ ತಾಲೂಕು ಜೆಎಂಎಸ್ ವತಿಯಿಂದ ಆಗಸ್ಟ್ 29ರಂದು ಇಎಂಎಸ್ ಭವನದಲ್ಲಿ
ಸ್ವೀಕರಿಸಲಾಯಿತು.

ಸಾಂಕೇತಿಕವಾಗಿ ಆಯಾ ಸ್ಥಳಗಳಿಂದ ಸಂಗ್ರಹಿಸಿದ ಮಣ್ಣನ್ನು ಪದ್ಮಲತಾ ಸಹೋದರಿ, ಇಂದ್ರಾವತಿ,
ಆನೆ ಮಾವುತ ನಾರಾಯಣ ಯಮುನಾ ( ಜೋಡಿ ಕೊಲೆ) ಕುಟುಂಬ, ಸೌಜನ್ಯ ಸಹೋದರ ಜಯರಾಮ ಪಾಂಗಾಳ ಹಾಗೂ ಲಕ್ಷ್ಮಣ ಗೌಡ ಅವರು ಸಮ್ಮೇಳನದಲ್ಲಿ ಭಾಗವಹಿಸಲಿರುವ ಮಹಿಳಾ ಪ್ರತಿನಿಧಿಗಳಾದ ಕಿರಣಪ್ರಭಾ, ಈಶ್ವರಿ ಶಂಕರ್ , ಜಯಶ್ರಿ ಅವರಿಗೆ ಹಸ್ತಾಂತರಿಸಲಾಯತು.
ಈ ಸಂದರ್ಭ ಮಾತನಾಡಿದ ಪ್ರಮುಖರಾದ ಶ್ಯಾಮರಾಜ್ ಪಟ್ರಮೆ, ಕಿರಣ ಪ್ರಭ, ಲಕ್ಷ್ಮಣ ಗೌಡ, ಈಶ್ವರಿ ಶಂಕರ್ “ಸಂಬಂಧಪಟ್ಟ ಸ್ಥಳಗಳಿಂದ ಸಂಗ್ರಹಿಸಲಾದ ಈ ಮಣ್ಣು ಸಿಂಧನೂರು ಸಮ್ಮೇಳನದಲ್ಲಿ ಆಯಾ ಪ್ರಕರಣಗಳನ್ನು ಪ್ರತಿನಿಧಿಸಲಿದ್ದು ಸಮ್ಮೇಳನದ ಒಕ್ಕೊರಲಿನಿಂದ ಆಗ್ರಹದಿಂದ
ರಾಜ್ಯ ಸರಕಾರದ ಗಮನಸೆಳೆಯಲಿದೆ, ಮತ್ತು ಎಲ್ಲಾ ಪ್ರಕರಣಗಳ ಮರುತನಿಖೆಗಾಗಿ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಆಗ್ರಹ ನಡೆಯಲಿದೆ ಹಾಗೂ ಮುಂದಿನ ಹಂತದಲ್ಲಿ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಲಿದೆ, ಆ ಮೂಲಕ ಅನ್ಯಾಯಕ್ಕೊಳಗಾಗಿ ನೊಂದ ಕುಟುಂಬಗಳಿಗೆ ನ್ಯಾಯ ಸಿಗಲಿ
ಎಂದು ಮಣ್ಣು ಹಸ್ತಾಂತರ ಸಂದರ್ಭ ಮಾತನಾಡಿದ ಪ್ರತಿಪಾದಿಸಿದರು.

Post Comment

ಟ್ರೆಂಡಿಂಗ್‌

error: Content is protected !!