ಎಸ್ ಐ ಟಿಗೆ ದೂರು ನೀಡಿದ ಸೌಜನ್ಯ ಹೋರಾಟಗಾರ್ತಿ ಪ್ರಸನ್ನ ರವಿ

ಬೆಳ್ತಂಗಡಿ : ಸೌಜನ್ಯ ಹೋರಾಟಗಾರ್ತಿ ಪ್ರಸನ್ನ ರವಿ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐ ಟಿ ಕಚೇರಿಗೆ ದೂರು ನೀಡಲು ಆಗಮಿಸಿದ್ದಾರೆ.
ಎಸ್ ಐ ಟಿ ಕಚೇರಿಗೆ ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳಲ್ಲಿ ಮಾತನಾಡಿದ ಹೋರಾಟಗಾರ್ತಿ ಪ್ರಸನ್ನ ರವಿ
ಎಸ್.ಐ.ಟಿ. ಕಸ್ಟಡಿಯಲ್ಲಿರುವ ಸಾಕ್ಷಿದೂರುದಾರ ಚಿನ್ನಯ್ಯನ ಹೇಳಿಕೆಗಳನ್ನು ಎಸ್ ಐ ಟಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು,ಚಿನ್ನಯ್ಯನಿಗೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ ಮತ್ತು ರವಿ ಪೂಜಾರಿ ಸಾವಿನ ಹಿನ್ನೆಲೆಗಳು ತಿಳಿದಿದೆ, ಇನ್ನಷ್ಟು ತನಿಖೆ ನಡೆಯಬೇಕು, ರವಿ ಪೂಜಾರಿ ಸಹಿತ ಸೌಜನ್ಯ ಪ್ರಕರಣದ ಸಾಕ್ಷಿಗಳು ಒಬ್ಬೊಬ್ಬರೇ ಸಾವನ್ನಪ್ಪಿದ್ದಾರೆ. ಸೌಜನ್ಯ ಪ್ರಕರಣಕ್ಕೆ ಉಳಿದಿರುವ ಪ್ರಮುಖ ಸಾಕ್ಷಿಯಾಗಿರುವ
ಚಿನ್ನಯ್ಯನನ್ನು ಉಳಿಸಿಕೊಳ್ಳಬೇಕಿದೆ ಆತನ ಜೀವಕ್ಕೆ ಅಪಾಯ ಬರಬಹುದು, ಆತನಿಗೆ ಸೂಕ್ತ ರಕ್ಷಣೆಯ ಅಗತ್ಯವಿದೆ
ಈ ಬಗ್ಗೆ ಎಸ್ ಐ ಟಿ ಗೆ ದೂರು ನೀಡಿದ್ದೇನೆ, ಹಿಂಬರಹ ಕೊಟ್ಟಿದ್ದಾರೆ. ಎಂದು ಪ್ರಸನ್ನ ರವಿ ಹೇಳಿದರು.














Post Comment