ಪದ್ಮುಂಜ : ಭರತನಾಟ್ಯ ತರಗತಿ ಜೊತೆ ಶಾಸ್ತ್ರೀಯ ಸಂಗೀತ ತರಗತಿ ಶುಭಾರಂಭ

ಪದ್ಮುಂಜ : ಶಾಸ್ತ್ರೀಯ ಸಂಗೀತ ಗುರು ಕು.ಜಯಶ್ರೀ ಬೆಳ್ತಂಗಡಿ ಇವರ ಶಾಸ್ತ್ರೀಯ ಸಂಗೀತ ತರಗತಿಯು ಕಣಿಯೂರು ಗ್ರಾಮದ ಪದ್ಮುಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಆಗಸ್ಟ್ 31ನೇ ಭಾನುವಾರದಂದು ಶುಭಾರಂಭಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸ್ಥಳೀಯರಾದ ನಾರಾಯಣ ಗೌಡ ಮುಚ್ಚೂರು ಇವರು ದೀಪ ಬೆಳಗಿಸುವ ಮೂಲಕ
ಶಾಸ್ತ್ರೀಯ ಸಂಗೀತ ತರಗತಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿದುಷಿ ಸಂಧ್ಯಾ ಗಣೇಶ್, ಸಂಗೀತ ಗುರು ಕು. ಜಯಶ್ರೀ ಉಪಸ್ಥಿತರಿದ್ದರು.
ಮನಿಷಾ ಪ್ರಾರ್ಥಿಸಿದರು. ನೃತ್ಯಕಲಾ ಶಾಲಾ ವಿದುಷಿ ಡಿಂಪಲ್ ಶಿವರಾಜ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ನೂತನ ಶಾಸ್ತ್ರೀಯ ಸಂಗೀತ ತರಗತಿಗೆ ಹೊಸದಾಗಿ ವಿದ್ಯಾರ್ಥಿಗಳು ಸೇರ್ಪಣೆಗೊಂಡರು. ಭರತ ನಾಟ್ಯ ಹಾಗೂ ಸಂಗೀತ ತರಗತಿಗಳ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡರು. =======================================















Post Comment