ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ

Share
IMG_20250831_224053 ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಕೋಟ್ಯಾಂತರ ಭಕ್ತಾದಿಗಳೇ ಧರ್ಮಸ್ಥಳದ ಅಪಾರ ಹಾಗೂ ಅಮೂಲ್ಯ ಸಂಪತ್ತು. ಧರ್ಮಸ್ಥಳದಲ್ಲಿ ಯಾವುದೇ ತಪ್ಪು ಅಥವಾ ಅಹಿತಕರ ಘಟನೆ ನಡೆಯದಂತೆ ಸದಾ ಎಚ್ಚರಿಕೆ ಹಾಗೂ ಮುಂಜಾಗ್ರತೆವಹಿಸಲಾಗುತ್ತಿದೆ ಎಂದು ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಭಾನುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ ನಿಖಿಲ್ ಕುಮಾರ ಸ್ವಾಮಿ ಭಾಗವಹಿಸಿದ ಸಭೆಯಲ್ಲಿ ಮಾತನಾಡುತ್ತಾ
ಅಪಾರ ಸಂಖ್ಯೆಯ ಭಕ್ತರ ಪ್ರೀತಿ-ವಿಶ್ವಾಸ, ನಂಬಿಕೆ, ಗೌರವ ಅಮೂಲ್ಯ ಸಂಪತ್ತಾಗಿದ್ದು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರ ತೂಕ, ಘನತೆ, ಗೌರವವೇ ಅತಿ ಮಹತ್ವಪೂರ್ಣವಾಗಿದೆ
ಆದುದರಿಂದಲೇ ನಂಬಿದವರಿಗೆ ಇಂಬು ಕೊಡುವ ಧರ್ಮಸ್ಥಳದಲ್ಲಿ “ಮಾತು ಬಿಡ ಮಂಜುನಾಥ” ಎಂಬ ಮಾತು ಚಿರಪರಿಚಿತವಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ನಿಖಿಲ್ ಕುಮಾರ ಸ್ವಾಮಿ
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಮಾಧ್ಯಮಗಳಲ್ಲಿ ನಿರಂತರ ಪ್ರಕಟವಾಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿಗಳಿಂದ ದೇಶ-ವಿದೇಶಗಳಲ್ಲಿರುವ ಕೋಟ್ಯಾಂತರ ಭಕ್ತಾದಿಗಳಿಗೆ ತೀವ್ರ ನೋವಾಗಿದೆ. ಭಯ ಮತ್ತು ಗೊಂದಲದ ವಾತಾವರಣ ಉಂಟಾಗಿದೆ. ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲು ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವ ಬದಲು ಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಡಿ. ಸುರೇಂದ್ರ ಕುಮಾರ್ ಮತ್ತು ಶಾಸಕರುಗಳಾದ ಜಿ.ಡಿ. ಹರೀಶ್ ಗೌಡ, ಹುಣಸೂರು, ಮಂಜು, ಅರಕಲಗೂಡು, ಸ್ವರೂಪ್ ಹಾಸನ, ಮಲ್ಲೇಶ್ ಬಾಬು, ಕೋಲಾರ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತು ಮಾಜಿ ಶಾಸಕ ಕೆ. ಮಹಾದೇವ ಉಪಸ್ಥಿತರಿದ್ದರು.

IMG_20250831_190741-662x1024 ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ

Post Comment

ಟ್ರೆಂಡಿಂಗ್‌

error: Content is protected !!