ಧರ್ಮಸ್ಥಳ ಉದಯ ಜೈನ್ ಎಸ್ ಐ ಟಿ ಕಚೇರಿಗೆ ಹಾಜರು

ಧರ್ಮಸ್ಥಳ ಉದಯ ಜೈನ್ ಎಸ್ ಐ ಟಿ ಕಚೇರಿಗೆ ಹಾಜರು

Share
IMG_20250903_115231 ಧರ್ಮಸ್ಥಳ ಉದಯ ಜೈನ್ ಎಸ್ ಐ ಟಿ ಕಚೇರಿಗೆ ಹಾಜರು

ಬೆಳ್ತಂಗಡಿ : ಧರ್ಮಸ್ಥಳ ಉದಯ ಜೈನ್ ಎಂಬಾತ ಎಸ್ ಐ ಟಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಆಗಾಗ ಮುನ್ನೆಲೆಗೆ ಬರುತ್ತಿರುವ ಉದಯ ಜೈನ್ ಸಹಿತ ಹಲವರಿಗೆ ಎಸ್ ಐ ಟಿ ಅಧಿಕಾರಿಗಳು ನೋಟೀಸ್
ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಉದಯ ಜೈನ್ ಎಸ್ ಐ ಟಿ ಕಚೇರಿಗೆ ಹಾಜರಾಗಿದ್ದಾರೆ. ಆದರೆ ನಿರ್ದಿಷ್ಟವಾಗಿ ಯಾವ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಎಸ್ ಐ ಟಿ ಅಧಿಕಾರಿಗಳು ಉದಯ ಜೈನ್ ಮತ್ತಿತರರಿಗೆ ನೋಟೀಸ್ ಜಾರಿ ಮಾಡಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಎಸ್ ಐ ಟಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಉದಯ ಜೈನ್ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಿಡಿ ಕಾರಿದ್ದೇಕೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. *********************************************

IMG_20250902_111520-2 ಧರ್ಮಸ್ಥಳ ಉದಯ ಜೈನ್ ಎಸ್ ಐ ಟಿ ಕಚೇರಿಗೆ ಹಾಜರು

Post Comment

ಟ್ರೆಂಡಿಂಗ್‌

error: Content is protected !!