ಧರ್ಮಸ್ಥಳ ‘ಬುರುಡೆ’ ಪ್ರಕರಣ: ಚಿನ್ನಯ್ಯನ ಮೊದಲ ಹಂತದ ಕಸ್ಟಡಿ ಮುಕ್ತಾಯ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ ಐ ಟಿ

ಬೆಳ್ತಂಗಡಿ : 10 ದಿನಗಳ ಎಸ್.ಐ.ಟಿ ಕಸ್ಟಡಿಯಲ್ಲಿದ್ದ ಸಾಕ್ಷಿ ದೂರುದಾರ ಚಿನ್ನಯ್ಯನ ಕಸ್ಟಡಿ ಅವಧಿ ಇಂದಿಗೆ ಮುಗಿದಿದ್ದು ಆತನನ್ನು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸಂಶಯಾಸ್ಪದ ಅಥವಾ ಅಸ್ಪಷ್ಟ ಹೇಳಿಕೆ ನೀಡಿದ ಆರೋಪದಲ್ಲಿ ಆ.23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ ಐ ಟಿ ಅಧಿಕಾರಿಗಳು 10 ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ಪಡೆದಿದ್ದು ಹಲವು ಕಡೆಗಳಲ್ಲಿ ಮಹಜರುಪಡಿಸಿ ವಿವಿಧ ಆಯಾಮಗಳ ತನಿಖೆ ಮುಂದುವರಿಸಿದ್ದರು.
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಸ್ ಐ ಟಿ ಅಧಿಕಾರಿಗಳು ಚಿನ್ನಯ್ಯನನ್ನು ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಚಿನ್ನಯ್ಯನಿಗೆ ನ್ಯಾಯಾಲಯವು ಎಸ್ ಐ ಟಿ ಕಸ್ಟಡಿಗೆ ನೀಡುತ್ತದೋ ನ್ಯಾಯಾಂಗ ಬಂಧನ ವಿಧಿಸುವುದೋ ಎಂಬುದನ್ನು ಕಾದು ನೋಡಬೇಕಾಗಿದೆ. *********************************************















Post Comment