ಪ್ರವಾದಿ ಮುಹಮ್ಮದ್(ಸ)ಜನ್ಮ ತಿಂಗಳ ಪ್ರಯುಕ್ತಜೀವನ ಚರ್ಯೆ ಅನಾವರಣ ಅಭಿಯಾನ : ಸೆ:7ರಂದು ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಮಾವೇಶ ಧಾರ್ಮಿಕ ಸೌಹಾರ್ದ

ಬೆಳ್ತಂಗಡಿ : ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನಮ್ಮ ದೇಶದಲ್ಲಿ ಹಲವಾರು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳು ಮೇಲೈಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಧಾರ್ಮಿಕ ಸೌಹಾರ್ದವನ್ನು ಕೆಡಿಸುವ, ಪರಸ್ಪರ ದ್ವೇಷ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ವ್ಯಾಪಕ ಚರ್ಚೆಗಳು ನಡೆಯಬೇಕಾದ ಅಗತ್ಯವು ಬಹಳಷ್ಟಿದೆ.
ಈ ಹಿನ್ನೆಲೆ ಮನಗಂಡು ಜಮಾಅತೆ ಇಸ್ಲಾಮೀ ಹಿಂದ್ ಭಾರತದಾದ್ಯಂತ ಧಾರ್ಮಿಕ ಸೌಹಾರ್ದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಜನ್ಮ ತಿಂಗಳ ಪ್ರಯುಕ್ತ ಅವರ ಜೀವನ ಚರ್ಯೆಯನ್ನು ಪರಿಚಯಿಸುವ ಅಭಿಯಾನವನ್ನು ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಸೆ 07 ರಂದು ಅಪರಾಹ್ನ 2.30ಕ್ಕೆ ‘ಧಾರ್ಮಿಕ ಸೌಹಾರ್ದ ಕಾಲ್ನಡಿಗೆ ಜಾಥಾ’ವನ್ನು ಹಾಗೂ ಸಂಜೆ 4.00ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಸಮಾಜಮಂದಿರ ರಸ್ತೆಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸಾರ್ವಜನಿಕ ಸಮಾವೇಶ ಕಾರ್ಯಕ್ರಮವನ್ನು ಜರುಗಲಿದೆ ಎಂದು ಜ.ಇ. ಹಿಂದ್, ಮಂಗಳೂರು ಉತ್ತರ ಅಧ್ಯಕ್ಷ ಸಿ.ಎ. ಮುಹಮ್ಮದ್ ಇಸ್ಲಾಕ್ ಹೇಳಿದರು.

ಅವರು ಸೆ. 1 ರಂದು ಬೆಳ್ತಂಗಡಿ ಲೋಬೋ ಟವರ್ಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಮಾಜದಲ್ಲಿ ಶಾಂತಿ ಸಾಮರಸ್ಯದ ಸಂದೇಶಗಳನ್ನು ಪಸರಿಸುವ ದೃಷ್ಟಿಯಿಂದ ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್, ದಕ್ಷಿಣ ಕನ್ನಡ ಜಿಲ್ಲೆ ಆಯೋಜಿಸುತ್ತಿರುವ ಸಾರ್ವಜನಿಕ ಸಮಾವೇಶವನ್ನು ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಾದ ‘ಭಾರತ ಭೂಷಣ’ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾರ್ಯರವರು
ಉದ್ಘಾಟಿಸಲಿದ್ದಾರೆ.
ಮಂಗಳೂರು ಬರಕ ಇಂಟರ್ ನ್ಯಾಶನಲ್ ಸ್ಕೂಲ್ & ಕಾಲೇಜಿನ ಪ್ರಾಂಶುಪಾಲರಾದ ಜನಾಬ್ ಶರ್ಫುದ್ದೀನ್ ಬಿ.ಎಸ್. ಮಂಗಳೂರು ಅಧ್ಯಕ್ಷತೆವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಕೆ. ಹರಿಪ್ರಸಾದ್, ಕೆ. ಪ್ರತಾಪ್ ಸಿಂಹ ನಾಯಕ್, ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್ ರಾಜ್ ಮೌರ್ಯ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭಾಗವಹಿಸಲಿದ್ದಾರೆ.
ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ಮಾಜಿ ಸಚಿವ ಕೆ.ಗಂಗಾಧರ ಗೌಡ, ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ. ಶ್ರೀ ನಾಥ್, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಬೋಳಂಗಡಿ ಹವ್ವಾ ಜುಮಾ ಮಸೀದಿ, ಖತೀಬರಾದ ಮೌಲಾನಾ ಯಹ್ಯಾ ತಂಬಳ್ ಮದನಿ, ಸದ್ಭಾವನಾ ವೇದಿಕೆ, ಉಳ್ಳಾಲ ಇದರ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ , ಮಂಗಳೂರು ವಲಯ ಜ.ಇ.ಹಿಂದ್ ಸಂಚಾಲಕ ಜನಾಬ್ ಸಯೀದ್ ಇಸ್ಮಾಯಿಲ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಶೇಖರ ಕುಕ್ಕೇಡಿ ವೆಲ್ಫೇರ್ ಪಾರ್ಟಿ, ದ.ಕ. ಜಿಲ್ಲಾಧ್ಯಕ್ಷ ದಿವಾಕರ ರಾವ್, ಬೋಳೂರು ಹೆಚ್.ಆರ್.ಎಸ್. ಕರ್ನಾಟಕ ಡೈರೆಕ್ಟರ್ ಜನಾಬ್ ಕೆ.ಎಮ್. ಆಶ್ರಫ್, ಬೆಳ್ತಂಗಡಿ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಜನಾಬ್ ಶೇಕುಞಿ, ಜಾಮಿಅ ಮಸ್ಟಿದ್, ಕುಲ್ ಫತಹ್ ಬೈಲ್, ಮಡಂತ್ಯಾರು ಇದರ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ರಾಜ್ಯ ವಕ್ಸ್ ಬೋರ್ಡ್ ಮಾಜಿ ಸದಸ್ಯ ಹಾಜಿ ಎಂ. ಉಮರ್ ಕುಂಞಿ ಮುಸ್ಲಿಯಾರ್, ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯ ಮಾನ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾವೇಶ ಸಂಚಾಲಕ ಅಮೀನ್ ಅಹ್ಸನ್ ಕಾರ್ಯಕ್ರಮದ ಪ್ರಚಾರದ ದೃಷ್ಟಿಯಿಂದ ಲಾಯಿಲಾದಲ್ಲಿ ಪ್ರಚಾರ ವಾಹನವನ್ನು ಬೆಳ್ತಂಗಡಿ ನ್ಯಾಯಾಲಯದ ಅಪರ ಅಭಿಯೋಜಕರಾದ ಮನೋಹರ್ ಕುಮಾರ್ ಇಳಂತಿಲ ಅವರು ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಸೌಹಾರ್ದ ಸಮಾವೇಶದಲ್ಲಿ ಸರ್ವಧರ್ಮೀಯರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರು ಜ.ಇ.ಹಿಂದ್ ಅಬ್ದುಲ್ ಕರೀಮ್ ಯು,ಜಿಲ್ಲಾ ಅಧ್ಯಕ್ಷ ಎಸ್.ಐ.ಓ. ರಿಝಾನ್ ಅಝರಿ, ಸಾಜಿದಾ ಮೂಮಿನ್ ಜಿಲ್ಲಾ ಸಂಚಾಲಕಿ, ಜ.ಇ.ಹಿಂದ್, ಯೂಸುಫ್ ಅಸ್ಲಮ್ ಐ ಜಿಲ್ಲಾದಧ್ಯಕ್ಷರು, ಸಾಲಿಡಾರಿಟಿ ಯೂತ್ ಮೂವ್ ಮೆಂಟ್, ಆಯಿಶಾ ಅಮಾನ ಅಧ್ಯಕ್ಷೆ, ಜಿ.ಐ.ಓ ಮಂಗಳೂರು ಉಪಸ್ಥಿತರಿದ್ದರು.














Post Comment